ಬಂಟ್ವಾಳ : ಶಬರಿಮಲೆ ವೃತಾಧಾರಿ ವಿದ್ಯಾರ್ಥಿಯು ಶಬರಿಮಲೆ ಯಾತ್ರೆಯ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಂಟ್ವಾಳ ಕಸಬಾ ಗ್ರಾಮದ ಚೆಂಡ್ತಿಮಾರ್ ನಿವಾಸಿ ರಾಮ ಕುಲಾಲ್ ಅವರ ಮಗ, ಎಸ್.ವಿ.ಎಸ್. ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದ ನಿಕೇತ್ ಕುಮಾರ್ (16) ಶಬರಿ ಮಲೆ ವೃತಾಧಾರಿಯಾಗಿದ್ದು ಯಾತ್ರೆಯಲ್ಲಿದ್ದರು. ಜನವರಿ ೧೩ರಂದು ದೈವ ಸನ್ನಿಧಿ ಬಳಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಕೊಟ್ಟಾಯಂ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಹುಟ್ಟೂರಾದ ಬಂಟ್ವಾಳ ಬಡ್ದಕಟ್ಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಶಬರಿಮಲೆ ವೃತಾಧಾರಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ
Kulal news
1 Min Read