ಕಾರ್ಕಳ : ಮಗುವಿನ ಕಿಡ್ನಿ ಚಿಕಿತ್ಸೆಗೆ ಹಣದ ತೊಂದರೆಯಿಂದ ಕುಡಿತದ ಚಟ ಹತ್ತಿಸಿಕೊಂಡ ವ್ಯಕ್ತಿಯೊಬ್ಬರು ನೇಣು ಬಿಗಿದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದಲ್ಲಿ ನಡೆದಿದೆ. ಚೆನ್ನಿಬೆಟ್ಟು ಎಂಬಲ್ಲಿಯ ನಿವಾಸಿ ಸುರೇಶ್ ಕುಲಾಲ್ (35) ಆತ್ಮಹತ್ಯೆಗೆ ಶರಣಾದವರು.
ಕೂಲಿ ಕಾರ್ಮಿಕರಾಗಿದ್ದ ಸುರೇಶ ಅವರ ಮಗು ಕಿಡ್ನಿಯ ತೊಂದರೆಯಿಂದ ಬಳಲುತ್ತಿದ್ದು, ಹಲವು ಬಾರಿ ಚಿಕಿತ್ಸೆ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಇದೇ ಚಿಂತೆಯಿಂದ ಸುರೇಶ ಅವರು ಇತ್ತೀಚೆಗೆ ಕುಡಿತದ ದಾಸರಾಗಿದ್ದರು ಎನ್ನಲಾಗಿದೆ. ವಿಪರೀತ ಕುಡಿತ ಹಾಗೂ ತೀವ್ರ ಆರ್ಥಿಕ ಅಡಚಣೆಯಿಂದ ನೊಂದ ಅವರು ಡಿ. 14ರಂದು ರಾತ್ರಿ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.