ಕೆಪಿಎಸ್ಸಿನಲ್ಲಿ 270 ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/12/2015.
ಹುದ್ದೆ ಹೆಸರು: ‘ಎ’ ಗುಂಪಿನ ಹುದ್ದೆ: 1) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಎಇಇ: 7 ಹುದ್ದೆ, 2) ಪೌರಾಡಳಿತ ನಿರ್ದೇಶನಾಲಯದಲ್ಲಿ ಎಇಇ (ಸಿವಿಲ್): 2 ಹುದ್ದೆ, 3) ಅಭಿವೃದ್ಧಿ ಅಧಿಕಾರಿ: 8 ಹುದ್ದೆ, 4) ನೀರು ಸರಬರಾಜು ಮತ್ತು ಒಳಚರಂಡಿ(ಎಇಇ):8 ಹುದ್ದೆ. ‘ಬಿ’ ಗುಂಪಿನ ಹುದ್ದೆ: 5) ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕ: 13 ಹುದ್ದೆ, 6) ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ: 09 ಹುದ್ದೆ, 7) ಪೌರಾಡಳಿತ ನಿರ್ದೇಶನಾಲಯದಲ್ಲಿ ಸಹಾಯಕ ಎಂಜಿನಿಯರ್ (ಸಿವಿಲ್): 12 ಹುದ್ದೆ, 8) ಪರಿಸರ ಎಂಜಿನಿಯರ್: 12 ಹುದ್ದೆ, 9) ಭೂದಾಖಲೆಗಳ ಸಹಾಯಕ ನಿರ್ದೇಶಕರು: 4 ಹುದ್ದೆ, 10) ಪೌರಾಡಳಿತ ನಿರ್ದೇಶನಾಲಯದಲ್ಲಿ ಮಹಾನಗರ ಪಾಲಿಕೆಗಳಲ್ಲಿ ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್): 47 ಹುದ್ದೆ, 11) ಸಹಾಯಕ ಎಂಜಿನಿಯರ್ (ಸಿವಿಲ್): 45 ಹುದ್ದೆ, 12) ಪರಿಸರ ಎಂಜಿನಿಯರ್: 27 ಹುದ್ದೆ. ಭಾಗ: 2: ಆಹಾರ ಮತ್ತು ನಾಗರಿಕ ಸರಬರಾಜು ನಿಗಮ: 1) ಸಹಾಯಕ ವ್ಯವಸ್ಥಾಪಕ: 11 ಹುದ್ದೆ, 2) ಹಿರಿಯ ಸಹಾಯಕ (ಲೆಕ್ಕಪತ್ರ): 35 ಹುದ್ದೆ, 3) ಗುಣಮಟ್ಟ ಪರಿವೀಕ್ಷಕ: 30 ಹುದ್ದೆ. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ, ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 300. ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನ
ಹೆಚ್ಚಿನ ಮಾಹಿತಿಗೆ http://kpsc.kar.nic.in/