ಕುಂದಾಪುರ (ಕುಲಾಲ ವರ್ಲ್ಡ್ ಡಾಟ್ ಕಾಮ್) : 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಪೂರ್ವ್ ವಿ. ಕುಮಾರ್ ಅವರು ವಿಜ್ಞಾನ ವಿಭಾಗದಲ್ಲಿ 595 ಅಂಕ ಗಳಿಸಿ ರಾಜ್ಯಕ್ಕೆ 5 ನೇ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಅವರು ಕುಂದಾಪುರದ ಮಂಜುನಾಥ ಆಸ್ಪತ್ರೆಯ ಮಾಲಕ ಡಾ ಎಂ .ವಿ. ಕುಲಾಲ್ ಅವರ ಮೊಮ್ಮರಾಗಿದ್ದು , ಅವರ ಪುತ್ರಿ ಪ್ರತಿಮಾ.ಕೆ ಹಾಗೂ ಡಾ| ವಿನೋದ್ ಕುಮಾರ್ .ಬಿ ದಂಪತಿಯ ಪುತ್ರ.
ಎಐ ನನ್ನ ಇಷ್ಟದ ವಿಷಯವಾಗಿದೆ. ಅದೇ ವಿಭಾಗದಲ್ಲಿ ಎಂಜಿನಿಯರಿಂಗ್ ಕೋರ್ಸ್ ಸೇರಿಕೊಳ್ಳಬೇಕು ಎಂದಿದ್ದೇನೆ. ನಿತ್ಯವೂ ಕುಂದಾಪುರದಿಂದ ಕಾರ್ಕಳಕ್ಕೆ ಹೋಗಿ ಬರುವುದರಲ್ಲೇ 3 ಗಂಟೆ ಕಳೆಯುತ್ತದೆ. ಓದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೆ. ಕಠಿನ ಪರಿಶ್ರಮಕ್ಕೆ ಯಶಸ್ಸು ಖಂಡಿತ ಸಿಗುತ್ತದೆ. ಪಾಲಕರು, ಕಾಲೇಜಿನಲ್ಲೂ ಕಲಿಕೆಗೆ ಉತ್ತಮ ಪ್ರೋತ್ಸಾಹ ಇತ್ತು ಎಂದು ಅಪೂರ್ವ್ ವಿ. ಕುಮಾರ್ ತಿಳಿಸಿದ್ದಾರೆ.