ಕಲಬುರಗಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಆಂಧ್ರಪ್ರದೇಶದ ಕೋನಸೀಮಾ ಚಿತ್ರಕಲಾ ಪರಿಷದ್ ಅಮಲಾಪೂರಮ್ 35ನೇ ವರ್ಷದ ಬ್ರಹ್ಮೊತ್ಸವ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಂದರ್ಭ ನೀಡಲಾಗುವ ಆರ್ಟ್ ಲೆಜಂಡ್ ಬ್ರಹ್ಮೋಉತ್ಸವಂ ಪ್ರಶಸ್ತಿಗೆ ಕರ್ನಾಟಕ ರಾಜ್ಯದ ಕಲಬುರಗಿ ಯ ಖ್ಯಾತ ಚಿತ್ರಕಲಾವಿದ ನಾಗರಾಜ್ ಕುಂಬಾರ್ ಅವರು ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜ.19ರಂದು ಅಮಲಾಪುರಂನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ದೇಶದ ನಾನಾ ರಾಜ್ಯಗಳಿಂದ ಒಟ್ಟು 200ಕ್ಕಿಂತ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಹುಟ್ಟು ಕಲಾವಿದರಾಗಿರುವ ಕುಂಬಾರ್ ಅವರು ಗುಲ್ಬರ್ಗಾ ಜಿಲ್ಲೆಯ ಹೀರೂರು ನಲ್ಲಿ ಮಾರ್ಚ್ 3, 1987ರಂದು ಜನಿಸಿದ್ದು ಕುಂಬಾರ್ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ವಿದ್ಯಾರ್ಥಿವೇತನ ಪಡೆದವರಾಗಿದ್ದು, ಗುಲ್ಬರ್ಗಾ ವಿವಿಯಿಂದ ನೀಡಲಾಗುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಹಾರಾಷ್ಟ್ರದ ಲೋಕಮಾನ್ಯ ತಿಲಕ್ ಸಹಿತ ಅನೇಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಕನ್ನಡ ಮಾತ್ರವಲ್ಲದೆ ಮರಾಠಿ, ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ನಾಗರಾಜ್ ಅವರು ಕನ್ನಡ ಕಿರುಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ.