ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಉಡುಪಿ ಪಬ್ಲಿಕ್ ಫೈಲ್ ಎರಡನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಗುರುತಿಸಿದ್ದು ಅದೇ ರೀತಿ, ವಾಕ್ಚಾತುರ್ಯದ ಮೂಲಕ ಜಿಲ್ಲೆಯ ವಿವಿಧ ಕಾರ್ಯಕ್ರಮಗಳನ್ನು ಸಮಗ್ರವಾಗಿ ನಿರೂಪಣೆ ಮಾಡಿ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಕಾರ್ಯಕ್ರಮ ಸೇರಿದಂತೆ ಸಮೃದ್ದ ವೇದಿಕೆಯಲ್ಲಿ ತನ್ನ ಮಾತಿನ ಮಂಟಪವನ್ನ ಸೃಷ್ಟಿಸುವ ಮಂಜುನಾಥ್ ಹಿಲಿಯಾಣ ಇವರನ್ನು ಪಬ್ಲಿಕ್ ಫೈಲ್ ಪತ್ರಿಕೆ ಈ ಬಾರಿ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಾಮಾಜಿಕ ಹಿತಚಿಂತಕರು, ಉತ್ತಮ ಬರಹಗಾರರು ಹಾಗೂ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ನಿರೂಪಣಕಾರರಾಗಿ ಭಾಗವಹಿಸಿ ತಮ್ಮ ಅದ್ಭುತ ಸ್ವರ ಸಿರಿಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಂತಹವರು. ಇವರನ್ನು ಪಬ್ಲಿಕ್ ಫೈಲ್ ಪತ್ರಿಕೆಯು ತನ್ನ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆಯೆಂದು ರಾಜ್ಯ ವ್ಯಾಪ್ತಿಯ 63 ಜನ ಸಾಧಕರ ಪೈಕಿಯಲ್ಲಿ ಇವರು ಒಬ್ಬರು. ವಿವಿಧ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸುವುದರೊಂದಿಗೆ 30ಕ್ಕೂ ಹೆಚ್ಚು ಕಥೆಗಳು ನಾಡಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪ್ರಸ್ತುತ ಇವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.