ಮುಂಬಯಿ : ಕುಲಾಲ ಸಂಘ ಮುಂಬಯಿ ಪ್ರಾಯೋಜಿತ ಜ್ಯೋತಿ ಕೋ. ಆಪ್. ಕ್ರೆಡಿಟ್ ಸೊಸೈಟಿಯ ಉಪಕಾರ್ಯಾಧ್ಯಕ್ಷ ಕರುಣಾಕರ ಜೆ. ಮೂಲ್ಯ (55 ವರ್ಷ) ಹೃದಯಾಘಾತ ದಿಂದ ನ. 14ರಂದು ನಿಧನ ಹೊಂದಿದರು.
ಮೂಲತಃ ಮಂಗಳೂರಿನ ಕೊಲ್ಯದ ಪಿಲಾರ್ ಪರಿಸರದವರಾದ ಕರುಣಾಕರ ಅವರು, ಮುಂಬಯಿಯಮಲಾಡ್ ಪಶ್ಚಿಮ ಚಿಂಚೋಲಿಯ ಡಾಲಿ ಅಪಾರ್ಟ್ ಮೆಂಟ್ ನ ನಿವಾಸಿಯಾಗಿದ್ದರು. ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಕುಲಾಲ ಸಂಘ ಮುಂಬಯಿಯಲ್ಲಿ ಎರಡು ದಶಕಗಳಿಂದಲೂ ಮಿಕ್ಕಿ ಸಕ್ರಿಯರಾಗಿದ್ದ ಇವರು ಸಂಘದ ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾಗಿದ್ದರು.
ಕರುಣಾಕರ ಜೆ. ಮೂಲ್ಯ ಅವರ ನಿಧನಕ್ಕೆ ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ. ಕೆ. ಸಾಲ್ಯಾನ್, ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಕಾರ್ಯಕಾರಿ ಸಮಿತಿ ಹಾಗೂ ಸ್ಥಳೀಯ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್ ಮತ್ತು ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.
ಸಂತಾಪ ಸಭೆ
ಕರುಣಾಕರ ಜೆ. ಮೂಲ್ಯ ಆತ್ಮ ಸದ್ಗತಿ ಬಗ್ಗೆ ಸಂತಾಪ ಸಭೆ ನ. 19, ಗುರುವಾರ ಕುಲಾಲ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ. ಸಂಘದ ಕೇಂದ್ರ ಕಚೇರಿಯಾಗಿರುವ ಮಲ್ಹೋತ್ರ ಚೇಂಬರ್ಸ್, ಆಪೀಸು ನಂಬ್ರ 102, ಪೋರ್ಟ್, ಮುಂಬಯಿ ಇಲ್ಲಿ ಸಂಜೆ 6 ಗಂಟೆಗೆ ಸಂಘದ ಅಧ್ಯಕ್ಷ, ಜ್ಯೋತಿ ಕೋ. ಆಪ್. ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಸಮಾಜ ಬಾಂಧವರು, ಸಂಘದ ಸದಸ್ಯರು, ಹಿತೈಷಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿ ಕುಲಾಲ ಸಂಘದ ಉಪಾಧ್ಯಕ್ಷ ದೇವದಾಸ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್ ಮತ್ತು ಜ್ಯೋತಿ ಕೋ. ಆಪ್. ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಮಂಡಳಿ ವಿನಂತಿಸಿದೆ.