ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಂಪರೆಯ ವಿಶಿಷ್ಠ ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವದಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ದಿ. ಮಳಲಿ ಮೋನಪ್ಪ ಕುಲಾಲ್.
ಸುರತ್ಕಲ್, ಕೂಡ್ಲು, ಕುಂಡಾವು, ಮುಚ್ಚೂರು, ಮೂಲ್ಕಿ ಯಕ್ಷಗಾನ ಮೇಳಗಳಲ್ಲಿ ಸ್ತ್ರೀ ವೇಷ, ಪುಂಡು ವೇಷಧಾರಿಯಾಗಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದರು. ಮಳಲಿಯಲ್ಲಿ ಶ್ರೀ ರಾಮಾಂಜನೇಯ ಯಕ್ಷಗಾನ ಸಂಘವನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬಂದಿದ್ದ ಅವರು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಮಾಶಾಸನವನ್ನೂ ಪಡೆದಿದ್ದರು. ಮಳಲಿ,ಸುರತ್ಕಲ್, ಮೂಡುಬಿದಿರೆಯಲ್ಲಿ ಹಲವು ಗೌರವಗಳಿಗೂ ಅವರು ಭಾಜನರಾಗಿದ್ದರು.
ತಮ್ಮ ಕುಟುಂಬಸ್ಥರೆಲ್ಲ ಕೂಡಿಕೊಂಡು ಮೊಸರು ಕುಡಿಕೆ ಉತ್ಸವದಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ ತಂಡವನ್ನು ಸುಮಾರು ಮೂರೂವರೆ ದಶಕಗಳಿಗೂ( 37ವರ್ಷ) ಮಿಕ್ಕಿ ಮುನ್ನಡೆಸಿ 1994ರಲ್ಲಿ ಈ ಜವಾಬ್ದಾರಿಯನ್ನು ಪುತ್ರನಿಗೆ ವಹಿಸಿದ್ದರೂ ಉತ್ಸವದಲ್ಲಿ ಹಿಮ್ಮೇಳದೊಂದಿಗೆ ಭಾಗಿಯಾಗುತ್ತಿದ್ದರು. ಒಂದು ವರ್ಷದಿಂದ ಅವರು ಪಾಶ್ರ್ವವಾಯು ಪೀಡಿತರಾಗಿದ್ದ ಅವರು, ತಮ್ಮ ೮೧ ನೆ ವಯಸ್ಸಿನಲ್ಲಿ (೨೦೧೩) ನಿಧನ ಹೊಂದಿದರು. ಪ್ರಸ್ತುತ ಮೊಸರು ಕುಡಿಕೆ ಉತ್ಸವದಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ ಅವರ ಪುತ್ರ ದಿವಾಕರ ಕುಲಾಲ್ ಪಾತ್ರ ವಹಿಸುತ್ತಿದ್ದಾರೆ.