ವೇಷಧಾರಿ, ಪ್ರಸಂಗಕರ್ತ, ಸಂಘಟಕ ಬಾಬು ಕುಡ್ತಡ್ಕ ಜನಿಸಿದ್ದು 1944ರಲ್ಲಿ. ಇವರು ಕಿಂಞಣ್ಣ ಮೂಲ್ಯ-ಕಾವೇರಿ ದಂಪತಿಯ ಸುಪುತ್ರ. ಕಾವು ಕಣ್ಣನ್, ಬಿ. ದಾಸಪ್ಪ ಇವರಿಂದ ಯಕ್ಷಗಾನಭ್ಯಾಸ. ಕೂಡ್ಲು, ಕುಂಬಳೆ, ಸುರತ್ಕಲ್, ಸುಂಕದಕಟ್ಟೆ, ಕೊಲ್ಲೂರು, ಕಾಸರಗೋಡು, ಇರಾ, ಕರ್ನಾಟಕ, ಕದ್ರಿಮೇಳಗಳಲ್ಲಿ ಕಲಾಸೇವೆ. ಕಂಸ, ಮಾಗಧ, ಜಲಂಧರ, ರಾವಣ, ದಾರಿಕಾಸುರ, ಹಿರಣ್ಯಾಕ್ಷ ಪ್ರಸಿದ್ಧ ಪಾತ್ರಗಳು. ಶ್ರೀ ಗುರು ರಾಘವೇಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ ಸ್ಥಾಪಿಸಿರುವ ಇವರು ಹದಿನೇಳು ಯಕ್ಷಗಾನ ಪ್ರಸಂಗ, ಎರಡು ಖಂಡಕಾವ್ಯ ರಚಿಸಿದ್ದಾರೆ. ಇವರಿಗೆ ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ. ಶೆಟ್ಟಿ ಪ್ರಶಸ್ತಿ, ಶೇಣಿ ಗೋಪಾಲಕೃಷ್ಣ ಭಟ್ ವಿಶ್ವಸ್ತ ಮಂಡಳಿ ಸುರತ್ಕಲ್ ವತಿಯಿಂದ ಶೇಣಿ ಪ್ರಶಸ್ತಿ ಲಭಿಸಿದೆ. ಇವರು ಇತ್ತೇಚೆಗೆ ನಿಧನ ಹೊಂದಿದರು.
ಖ್ಯಾತ ಯಕ್ಷಗಾನ ವೇಷಧಾರಿ ದಿ. ಬಾಬು ಕುಡ್ತಡ್ಕ
cinema /yakshagana
1 Min Read