ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ‘ಚಿತ್ರಕಲೆ’ ಬಣ್ಣಗಳನ್ನು ಉಪಯೋಗಿಸಿ ಚಿತ್ರ ಗಳನ್ನು ರಚಿಸುವ ಕಲೆ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ಚಿತ್ರಕಲೆ ಎಂಬ ಪದಕ್ಕೆ ದೃಶ್ಯಕಲೆ ಎಂಬ ಅರ್ಥವನ್ನೂ ನೀಡಿದ್ದಾರೆ ಕಲಾ ವಿದ್ವಾಂಸರು. ವಿವಿಧ ಬಗೆಯ ವರ್ಣ ಗಳನ್ನು ಬಳಸಿ ಕಾಗದ, ಕ್ಯಾನ್ವಾಸ್, ಗೋಡೆಯ ಮೇಲೆ ಮಾನ ವನೂ ಸೇರಿದಂತೆ ಪ್ರಾಣಿ, ಪಕ್ಷಿ, ಗಿಡ, ಮರ, ಸುಂದರ ಪರಿಸರ, ಮೊದಲಾದವುಗಳ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ‘ಅರ್ಥ’ವತ್ತಾಗಿ ಮೂಡಿಸುವುದೇ ‘ಚಿತ್ರಕಲೆ’ ಎನ್ನಿಸಿಕೊಳ್ಳುತ್ತದೆ. ಇದರ ಹೊಸ ರೂಪಗಳಾಗಿ ಇತ್ತೀಚಿನ ವರ್ಷಗಳಲ್ಲಿ ಕಾಗದ, ಇತ್ಯಾದಿಗಳನ್ನು ಬಳಸಿಕೊಳ್ಳುವುದನ್ನು ಕಾಣಬಹುದು. ಹೀಗೆ ಪೆನ್ಸಿಲ್ ಸಹಾಯದಿಂದ ಚಿತ್ರ ಕಲೆಯನ್ನು ಕಲಿತು, ಉದ್ಯೋಗದ ಜತೆಯಲ್ಲಿ ಹವ್ಯಾಸವಾಗಿ ಮೈಗೂಡಿಸಿಕೊಂಡು, ಸೈ ಎನಿಸಿಕೊಂಡವರು ರಂಜಿತ್ ಕುಲಾಲ್.
ರಂಜಿತ್ ಕುಲಾಲ್ ಓದಿದ್ದು ಡಿಪ್ಲೊಮ. ಸದ್ಯ ಒನ್ ಸೈಟ್ ಟೆಕ್ನಿಷಿಯನ್ ಆಗಿ ದೋಹಾ ಕತಾರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉದ್ಯೋಗದ ಜತೆಯಲ್ಲಿ ಬಿಡುವು ಮಾಡಿಕೊಂಡು ತಮ್ಮ ಹವ್ಯಾಸವಾದ ಪೆನ್ಸಿಲ್ ಆರ್ಟ್ ಮುಂದುವರಿಸುತ್ತಿದ್ದಾರೆ. ಇವರು ಮಂಗಳೂರು ದಂಬೆಲ್ ಶೇಡಿಗುರಿಯ ನಿವಾಸಿ ನಾರಾಯಣ ಮೂಲ್ಯ ಹಾಗೂ ಜಯಶ್ರೀ ದಂಪತಿಗಳ ಪುತ್ರ. ಮಗನ ವಿನೂತನ ಹವ್ಯಾಸವನ್ನು ಪ್ರೋತ್ಸಾಹಿಸುತ್ತಿದ್ದಾರೆ.
‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎಂಬ ಕನ್ನಡದ ಮಾತಿ ನಂತೆ ಚಿತ್ರಕಲೆಯ ಸವಿಯನ್ನು ಒಂದೋ ಚಿತ್ರ ಬಿಡಿಸಿಯೇ ಅರಿಯಬೇಕು. ಇಲ್ಲವಾದರೆ ಅದನ್ನು ಮನಸ್ಸಿನಿಂದ ನೋಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಅದಕ್ಕೂ ಮೊದಲು ನಮಗೆ ಚಿತ್ರಕಲೆಯ ಅರಿವಿರಬೇಕು. ಕಲೆಯನ್ನು ಗೌರವಿಸಬೇಕು. ಕಲೆಯನ್ನು ನಾವು ಪ್ರೀತಿಸಿದರೆ ಅದು ತಾನಾಗಿಯೇ ನಮಗೆ ಒಲಿಯುತ್ತದೆ. ಇದೆಲ್ಲವೂ ನಮ್ಮ ಮಸ್ತಿಷ್ಕದೊಳಗೆ ಹೋಗಬೇಕಾದರೆ ‘ಕಲೆ’, ‘ಚಿತ್ರ’ ಹಾಗೂ ಚಿತ್ರಕಲೆ ಬಗ್ಗೆ ಸಾವಧಾನ ನಮಗಿರಬೇಕು. ಹಾಗಿದ್ದಾಗ ಮಾತ್ರ ಅದು ನಮಗೆ ಸಿದ್ಧಿಸುತ್ತದೆ. ರಂಜಿತ್ ಮಾಡಿದ್ದೂ ಅದೇ ಕೆಲಸ. ಮೊದಲು ಆಸಕ್ತಿಯಂತೆ ಕಂಡ ಪೆನ್ಸಿಲ್ ಆರ್ಟ್ ಅನ್ನು ನಿಧಾನವಾಗಿ ಅಭ್ಯಾಸ ಮಾಡುತ್ತಾ ಸಾಗಿದರು. ಹಲವು ವರ್ಷ ಗಳ ಸಾಧನೆಯ ಬಳಿಕ ಅವರಂದುಕೊಂಡಂತೆ ಚಿತ್ರಗಳನ್ನು ಬರೆಯುವ ಹಂತ ತಲುಪಿದ್ದಾರೆ. ಇಲ್ಲವಾದರೆ ಸಮುದ್ರದ ದಡದಲ್ಲಿ ನಿಂತು, ನೋಡಿ ನನ್ನ ಕೈಲಿರುವುದೇ ಸಮುದ್ರ ಎಂದು ಕೂಗಿಕೊಂಡಂತೆ ಆಗುತ್ತದೆ.
ರಂಜಿತ್ ಮೊದಮೊದಲು ತಮ್ಮ ಕಲ್ಪನಾ ಲೋಕದಲ್ಲಿ ಕಂಡದ್ದನ್ನು ಕಾಗದದ ಗೀಚಲು ಪ್ರಾರಂಭಿಸಿದರು. ಹೀಗೆ ಆರಂಭವಾದ ಕಲೆಗೆ ಆಹಾರವಾಗಿದ್ದು ಸುತ್ತಮುತ್ತಲಿನ ಪರಿಸರ, ಅಕ್ಕಪಕ್ಕದ ಜನ, ಪ್ರಾಣಿ, ಪಕ್ಷಿಗಳು. ಉದ್ಯೋಗದಲ್ಲಿ ಬಿಡುವು ದೊರೆತಾಗಲೆಲ್ಲ ಚಿತ್ರಕಲೆಗೆ ದಾಸರಾದರು. ಅದು ಅವರಲ್ಲಿ ಹೊಸ ಚೈತನ್ಯ ಹುಟ್ಟುವಂತೆ ಮಾಡಿತು. ಮುಂದಿನ ದಿನಗಳಲ್ಲಿ ಸ್ವಂತದೊಂದು ಚಿತ್ರಕಲಾ ಲ್ಯಾಬ್ ಪ್ರಾರಂಭಿಸ ಬೇಕೆಂದಿರುವ ರಂಜಿತ್ಗೆ ಪೆನ್ಸಿಲ್ ಆರ್ಟ್ನಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಹಂಬಲವಿದೆ.