ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕಷ್ಟವೋ ಸುಖವೋ ಎಲ್ಲವನ್ನೂ ಸಹಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಕೇಶವ ಕುಲಾಲರ ಬದುಕು ವಿಧಿಯ ಆರ್ಭಟಕ್ಕೆ ಅಕ್ಷರಶಃ ಬೀದಿಗೆ ಬಿದ್ದಿದೆ. ತಮ್ಮ ನೆಲೆ ಕಳೆದುಕೊಂಡ ಅವರ ಕುಟುಂಬಕ್ಕೆ ಇಂದು ತುತ್ತು ಅನ್ನ, ತೊಡುವ ಬಟ್ಟೆಗೂ ಪರದಾಡುವಂತೆ ಆಗಿದೆ. ಕಷ್ಟಪಟ್ಟು ಕಟ್ಟಿದ್ದ ಮನೆ, ಅಷ್ಟಿಷ್ಟು ಕೂಡಿಟ್ಟಿದ್ದ ಗೃಹೋಪಯೋಗಿ ವಸ್ತು, ಅಮೂಲ್ಯ ದಾಖಲೆ ಪತ್ರಗಳೆಲ್ಲವನ್ನೂ ಬೆಂಕಿಯ ಕೆನ್ನಾಲೆಗೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಗಳಿಸಿದ್ದೆಲ್ಲವನ್ನೂ ಕಳೆದುಕೊಂಡ ಅವರೀಗ ಅಸಹಾಯಕರಾಗಿದ್ದಾರೆ. ಅವರ ಉಟ್ಟಿದ್ದ ಉಡುಗೆ ಬಿಟ್ಟರೆ ಯಾವುದೂ ಉಳಿದಿಲ್ಲ. ಇತ್ತ ಅಡುಗೆ ಮಾಡಲು ಪಾತ್ರೆಗಳೂ ಇಲ್ಲ. ಅವರ ಇಂದಿನ ಸ್ಥಿತಿ ನೋಡಿದರೆ ಮನಕಲುವುದು…
ಬೈಕಂಪಾಡಿ ಸಮೀಪ ಚಿಕ್ಕದೊಂದು ಕ್ಯಾಂಟೀನ್ ಇಟ್ಟುಕೊಂಡು, ಮೀನಕಳಿಯ ಎಂಬಲ್ಲಿ ವಾಸದ ಮನೆ ಕಟ್ಟಿಕೊಂಡು ಪತ್ನಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೆಲೆಸಿದ್ದ ಕೇಶವರ ಬದುಕಿನ ದಿಕ್ಕನ್ನು ಬೆಂಕಿಯ ಕಿಡಿಯೊಂದು ಕ್ಷಣ ಮಾತ್ರದಲ್ಲಿ ಬದಲಾಯಿಸಿದೆ. ಡಿ. 12ರಂದು ಕೇಶವ ಕುಲಾಲರು ಎಂದಿನಂತೆ ಬೆಳಿಗ್ಗೆ ತಮ್ಮ ನಿತ್ಯ ಕಾರ್ಯ ಮುಗಿಸಿ, ದೇವರಿಗೆ ದೀಪ ಹಚ್ಚಿ, ತಮ್ಮ ಪತ್ನಿ ಇಂದಿರಾ ಅವರ ಜೊತೆ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ತಮ್ಮ ಕ್ಯಾಂಟೀನಿಗೆ ತೆರಳಿದ್ದರು. ಮನೆಯಲ್ಲಿದ್ದ ಮಗಳು ಬಬಿತಾ ಅವರೂ ತಮ್ಮ ನೌಕರಿಗೆ ಹೋಗಿದ್ದಳು. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಮನೆಗೆ ಬೆಂಕಿ ಬಿದ್ದಿದ್ದು, ನೆರೆಕೆರೆಯವರು ಇವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಗ್ನಿ ಶಾಮಕದವರು ಸ್ಥಳಕ್ಕೆ ಬರುವ ವೇಳೆಗಾಗಲೇ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕುಟುಂಬಕ್ಕೆ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ.
“ಮನೆಗೆ ಹೇಗೆ ಬೆಂಕಿ ಬಿತ್ತು ಎನ್ನುವುದು ಗೊತ್ತಾಗಿಲ್ಲ. ದೇವರಿಗೆ ಹಚ್ಚಿದ ದೀಪದಿಂದ ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತ ಆಯಿತೋ.. ಗೊತ್ತಿಲ್ಲ. ನಾವು ಉಟ್ಟಿದ್ದ ಬಟ್ಟೆ ಬರೆ ಬಿಟ್ಟರೆ ಇನ್ನೇನೂ ಉಳಿದಿಲ್ಲ. ಮಕ್ಕಳಿನ್ನೂ ಚಿಕ್ಕವರು. ಹೆಚ್ಚಿನ ಆದಾಯವೇನೂ ಇಲ್ಲ. ಎಲ್ಲವನ್ನೂ ಕಳೆದುಕೊಂಡ ನಾವೀಗ ಬೀದಿಯಲ್ಲಿ ನೆಲೆಸುವ ಪರಿಸ್ಥಿತಿ ಬಂದಿದೆ. ಈಗ ನಮಗೆ ಹೊಸ ಬದುಕು ಕಟ್ಟಿಕೊಳ್ಳಲು ಹೃದಯವಂತ ದಾನಿಗಳು ಮನಸ್ಸು ಮಾಡಬೇಕು” ಎಂದು ಕೇಶವ ಮೂಲ್ಯ ಅವರು ಕಣ್ಣೀರಿಟ್ಟಿದ್ದಾರೆ. ಕೇಶವ ಮೂಲ್ಯರು ಇದುವರೆಗೆ ಅದೆಷ್ಟು ಕಷ್ಟವಿದ್ದರೂ ಇನ್ನೊಬ್ಬರ ಮುಂದೆ ಕೈಚಾಚಿದವರಲ್ಲ. ಇದೀಗ ಅಸಹಾಯಕ ಸ್ಥಿತಿಯಲ್ಲಿ ದಾನಿಗಳ ಮೊರೆ ಹೋಗಿದ್ದಾರೆ.
ಇವರ ಕಷ್ಟಕ್ಕೆ `ಕುಲಾಲ್ ವರ್ಲ್ಡ್’ ವಾಟ್ಸಾಪ್ ಮಿತ್ರರು ಸೇರಿ ಇವರಿಗೆ ನೆರವು ಸಂಗ್ರಹಿಸಿ ನೀಡಲು ನಿರ್ಧರಿಸಿದ್ದೇವೆ. ಮಾನವೀಯ ಮನವುಳ್ಳ ಮಿತ್ರರು ಕಷ್ಟಕ್ಕೆ ಮಿಡಿಯುವ ಹೃದಯಗಳು ಈ ಕುಟುಂಬದ ನೆರವಿಗೆ ಬರುತ್ತೀರಿ ಎಂಬ ವಿಶ್ವಾಸ ನಮಗಿದೆ. ದೊಡ್ಡ ಮೊತ್ತವನ್ನು ಕೇಳುತ್ತಿಲ್ಲ. ಕನಿಷ್ಠ ನೂರು ರೂಪಾಯಿ ಆದರೂ ಸರಿಯೇ..ಕೇಶವ ಮೂಲ್ಯರ ನಾವಿದ್ದೇವೆ ಎಂಬುದನ್ನು ನಿರೂಪಿಸೋಣ..
ಕುಟುಂಬಕ್ಕೆ ನೆರವು ನೀಡುವವರು ಈ ಖಾತೆಗೆ ಹಣ ಕಳಿಸಿ ಬೆಂಬಲಿಸಿರಿ..
IFSC CODE – ICIC0000156
ICICI bank
Mobile number – 7760215863
Bank: Corporation Bank
IFSC code: CORP0000272
A/C :52010 10544 05536
Branch: Muloor, Udupi
Google Pay: 9880922412
Paytm: 9880922412
Phone : 9964245278
: 9480922412