(ಕುಲಾಲ್ ವರ್ಲ್ಡ್ ಡಾಟ್ ಕಾಮ್)
ಹುಟ್ಟಿದ ಪ್ರತಿಯೊಂದು ಮಗು ಹಾಗೆ ಆಗಬೇಕು ಹೀಗೆ ಆಗಬೇಕು ಎಂದು ಕನಸು ಕಾಣುವುದು ಸಹಜ. ತಮ್ಮ ಮಗ ಸಾಧಿಸಬೇಕು ಎಂದೆಲ್ಲಾ ಕನಸ ಹೊತ್ತ ಹೆತ್ತವರು ಮಕ್ಕಳ ಪ್ರತಿಭೆಗೆ ಮನಸೋಲುತ್ತಾರೆ. ಹಾಗೆ ತಮ್ಮ ಮಗುವಿನ ಬಾಳಿಗೆ ಬೆಳಕು ಚೆಲ್ಲುವ ಮೂಲಕ ವಿವಿಧ ಕಲೆಗಳಲ್ಲಿ ತನ್ನನ್ನೂ ತಾನು ಗುರುತಿಸಿಕೊಳ್ಳಲು ಸಹಕಾರಿಯಾಗುವರು. ಹೆತ್ತವರ ಪ್ರೋತ್ಸಾಹ ಇನ್ನಷ್ಟೂ ವೃದ್ಧಿಯಾಗಿ, ತಮ್ಮ ಮಗುವಿಗೆ ಎಳೆಯ ವಯಸ್ಸಿನಲ್ಲಿಯೇ ಕಲಿಕೆಯ ಜೊತೆಗೆ ಇತರ ಕಲೆಗಳ ಅಭ್ಯಸಿಸಲು ಅವಕಾಶ ಮಾಡಿಕೊಡುವರು . ಅಂತವರಲ್ಲಿ ಈ ಬಾಲಕನು ಒಬ್ಬ.
ಪಾರ್ಪಾಡಿ ಗ್ರಾಮದ ಕೋಟೆ ಬಾಗಿಲಿನ ಲಲಿತ ನಿವಾಸದ ಸತೀಶ್ ಕುಲಾಲ್ ಮತ್ತು ಪವಿತ್ರ ದಂಪತಿಯ ಪುತ್ರನಾಗಿ ೩೦-೦೪-೨೦೧೨ ರಲ್ಲಿ ಜನಿಸಿರುವ ಸನ್ವಿತ್ ಕುಲಾಲ್ ಈಗ ರೋಟರಿ ಸೆಂಟ್ರಲ್ ಸ್ಕೂಲ್ ಒಂದನೇ ತರಗತಿ ವಿದ್ಯಾರ್ಥಿ. ಲಿಟ್ಲ್ ಪ್ಲವರ್ ಪ್ಲೇ ಸ್ಕೂಲ್ ನಲ್ಲಿ ಓದುತ್ತಿರುವಾಗಲೇ ಕರಾವಳಿಯ ಗಂಡುಕಲೆ ಯಕ್ಷಗಾನ, ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ ಕುಣಿತ ಅಲ್ಲದೇ ಸಿನಿಮಾ ನೃತ್ಯ ಗಳಲ್ಲಿ ತನ್ನನ್ನು ತೊಡಗಿಸಿಕೊಂಡವನು. ಚಿಕ್ಕ ವಯಸ್ಸಿನಲ್ಲೇ ತನ್ನ ಪ್ರತಿಭೆಯನ್ನು ಎತ್ತರಕ್ಕೆರಿಸಿ ಸಾರ್ವಜನಿಕ ಪ್ರಶಂಸೆಗೆ ಪಾತ್ರನಾಗಿದ್ದಾನೆ.
2017-2018ರಲ್ಲಿ ಮೂಡುಬಿದಿರೆಯ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ನವರು ಆಯೋಜಿಸಿರುವ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ೪ರಿಂದ ೬ ವರ್ಷದ ವಿಭಾಗದಲ್ಲಿ ಪ್ರಥಮಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ೪ ರಿಂದ ೬ ವರ್ಷದ ವಿಭಾಗದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ತೋಕುರು ಸುಬ್ರಮಣ್ಯ ದೇವಸ್ಥಾನದಲ್ಲಿ ನಾಲ್ಕರಿಂದ ಆರುವರ್ಷದ ವಿಭಾಗದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನದವರು ಆಯೋಜಿಸಿರುವ ನಾಲ್ಕರಿಂದ ಆರು ವರ್ಷ ವಿಭಾಗದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಕಾರ್ಕಳ ಜೆಸಿಐ ಸಪ್ತಾಹದ ಅಂಗವಾಗಿ ನಡೆದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಇದಲ್ಲದೆ ಅನೇಕ ಕಡೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹುಲಿವೇಷ, ಯಕ್ಷಗಾನ ಪಾತ್ರಧಾರಿಯಾಗಿ ನಟಿಸಿ ತನ್ನ ಉತ್ತಮ ಬಾಲ ನಟನೆಯ ಮೂಲಕ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾನೆ. ಆತ್ಮರಕ್ಷಣೆಯ ಕ್ರೀಡೆ ಕರಾಟೆ ಹಾಗೂ ಚಿತ್ರ ಕಲೆಯಲ್ಲೂ ಆಸಕ್ತಿ ಹೊಂದಿರುವ ಸನ್ವಿತ್ ಕುಲಾಲ್ ಕಲಿಕೆಯಲ್ಲೂ ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾನೆ. ಹೀಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನ ಆಸಕ್ತಿಯನ್ನು ಹೊಂದಿ ಉತ್ತಮ ಬಾಲಪ್ರತಿಭೆಯಾಗಿ ಮೂಡಿಬರುತ್ತಿರುವ ಸನ್ವಿತ್ ಕುಲಾಲ್.
ಲಿಟ್ಲ್ ಪ್ಲವರ್ ಸ್ಕೂಲಿನ ಗುರುಪ್ರಸಾದ್ ಮತ್ತು ಲಕ್ಷ್ಮೀ ಗುರುಪ್ರಸಾದ್ ಹಾಗೂ ಎಂ.ಜೆ ಎಂ ಪ್ರೆಸ್ ನ ಅನೀಶ್ ಮತ್ತು ಸುಕೇಶ್ ಅವರ ಪ್ರೋತ್ಸಾಹ ಈತನಿಗೆ ಪ್ರೇರಣೆಯಾಗಿದೆ. ಅಲ್ಲದೇ ಯುವಗಾಯಕ ಮನೋಹರ ಕುಲಾಲ್ ರವರು ಒಬ್ಬ ಗುರುವಾಗಿ ಈತನಿಗೆ ಸ್ಪೂರ್ತಿ ನೀಡಿದರು. ತನ್ನ ಕಲಾಸೇವೆಯ ಮೂಲಕ ಬದುಕಿನಲ್ಲಿ ಈತ ಇನ್ನಷ್ಟು ಎತ್ತರಕ್ಕೇರಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಹೆತ್ತವರಿಗೆ , ಊರಿಗೆ ಕೀರ್ತಿ ತರಲಿ .
ಬರಹ : ಹರ್ಷಿತಾ ಕುಲಾಲ್ ಕಾವು






