ಒಂದು ಪುಟ್ಟ ಮಗುವಿನ ಅಮ್ಮ ನ ಪ್ರಾಣ ಉಳಿಸಲು ಕೈಜೋಡಿಸಿ
ಮೂಡಬಿದ್ರೆ(ಕುಲಾಲ ವರ್ಲ್ಡ್ ಡಾಟ್ ಕಾಮ್) ಕ್ಯಾನ್ಸರ್ ಎಂದ ಕೂಡಲೇ ಎಂತಹವರೂ ಒಂದು ಬಾರಿ ಬೆಚ್ಚಿ ಬೀಳುತ್ತಾರೆ. ಈ ಖಾಯಿಲೆ ಶತ್ರುಗಳಿಗೂ ಬಾರದಿರಲಿ ಎಂದು ಚಿಕಿತ್ಸೆ ಪಡೆದು ಗುಣಮುಖರಾಗುವವರು ಪ್ರಾರ್ಥಿಸುತ್ತಾರೆ. ಚಿಕಿತ್ಸೆ ವೇಳೆ ಅನುಭವಿಸುವ ಆ ನೋವು, ಹೇಳಿಕೊಳ್ಳಲಾಗದ ಅತೀವ ಸಂಕಟವೇ ಇದಕ್ಕೆ ಕಾರಣ. ಇನ್ನು ಇದಕ್ಕೆ ತಗುಲುವ ವೆಚ್ಚವೂ ಅಷ್ಟೇ ದುಬಾರಿ, ಶ್ರೀಮಂತರಿಗೆ ಕ್ಯಾನ್ಸರ್ಗೆ ಚಿಕಿತ್ಸೆಗೆ ಹಣ ಭರಿಸುವುದು ಅಷ್ಟೇನೂ ಕಷ್ಟವಲ್ಲದಿದ್ದರೂ, ಬಡವರಿಗೆ ಮಾತ್ರ ಇದು ಏಳು ಸಮುದ್ರ ದಾಟಿ ಸಿಕ್ಕ ನಿಧಿಯಂತೆ. ಇಂತಹುದೇ ವೇದನೆ ಮೂಡಬಿದ್ರೆ ಸಮೀಪದ ಬೆಳುವಾಯಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ದಿವಂಗತ ಕೃಷ್ಣ ಮೂಲ್ಯ ಮತ್ತು ಶಾರದಾ ದಂಪತಿಯ ಪುತ್ರಿಯಾದ 30 ವರ್ಷದ ದಿವ್ಯಾ ಎಂಬ ಮಹಿಳೆ ಅನುಭವಿಸುತ್ತಿದ್ದಾರೆ. ಬಡ ವರ್ಗದ ಕುಟುಂಬದ ಗೃಹಿಣಿ, ಪುಟ್ಟ ಮಗುವಿನ ತಾಯಿಯಾಗಿರುವ ಇವರಿಗೆ ಬೋನ್ ಕ್ಯಾನ್ಸರ್ (3 TP53 Mutated B-cell Acute Lymphoblastic Leukemia) ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ಸಹೃದಯ ದಾನಿಗಳ ಆರ್ಥಿಕ ಸಹಾಯದ ಅವಶ್ಯಕತೆ ಇದೆ.
ದಿವ್ಯಾ ಹಾಗೂ ಭರತ್ ದಂಪತಿಗೆ ಒಬ್ಬಳು ಪುಟ್ಟ ಮಗುವಿದ್ದು ಊರಿನಲ್ಲಿ ಕೆಲಸ ಮಾಡಿಕೊಂಡಿದ್ದ ಭರತ್ ಕುಟುಂಬ ಬಡತನದಲ್ಲಿದ್ದರೂ ಖುಷಿಯಿಂದ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗಷ್ಟೇ ಭರತ್ ಗೆ ವಿದೇಶದಲ್ಲಿ ಉದ್ಯೋಗದೊರೆತ ಸಂಭ್ರಮದಿಂದಿದ್ದ ಕುಟುಂಬದಲ್ಲಿ ಕೆಲ ದಿನಗಳ ಹಿಂದೆ ಬಿರುಗಾಳಿ ಬೀಸಿತ್ತು, ಇದ್ದಕ್ಕಿದ್ದಂತೆ ದಿವ್ಯಾ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೆಎಂಸಿ ಆಸ್ಪತ್ರೆಗೆ ಬಂದು ಪರೀಕ್ಷೆ ನಡೆಸಿದಾಗ ಆಘಾತವೇ ಕಾದಿತ್ತು. ಪರೀಕ್ಷೆ ನಡೆಸಿದ್ದ ವೈದ್ಯರು ದಿವ್ಯಾ ಅವರಿಗೆ ರಕ್ತದ ಕ್ಯಾನ್ಸರ್ ರೋಗಕ್ಕೀಡಾಗಿದ್ದಾರೆಂದು ತಿಳಿಸಿದ್ದರು. ಅಲ್ಲದೇ ಬೋನ್ ಮ್ಯಾರೋ ಮಾಡಿದರೆ ಇದನ್ನು ಸಂಪೂರ್ಣವಾಗಿ ಶಮನಗೊಳಿಸಲು ಸಾಧ್ಯ ಎಂದಿದ್ದರು. ಈ ವಿಚಾರ ಕೇಳಿದ ವಿಜಯ್ ದಂಪತಿಗೆ ಬರಸಿಡಿಲು ಬಡಿದಂತಾಗಿತ್ತು. ಯಾಕೆಂದರೆ ಬೋನ್ ಮ್ಯಾರೋಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತವೆ ಇಷ್ಟು ಹಣ ಒಂದುಗೂಡಿಸುವುದು ಬಡ ದಂಪತಿಗೆ ಅಸಾಧ್ಯದ ಮಾತು. ಹೀಗಿದ್ದರೂ ಚಿಕಿತ್ಸೆ ನೀಡದೇ ಸುಮ್ಮನಿದ್ದರೂ ಆತಂಕ ತಪ್ಪಿದ್ದಲ್ಲ. ಕಿಮೋಥೆರಪಿ ನೀಡಿ ಬಳಿಕ ಬೋನ್ ಮ್ಯಾರೋ (bone marrow) ಚಿಕಿತ್ಸೆ ನೀಡಬಹುದೆಂಬ ಸಲಹೆ ನೀಡಿದ್ದರು. ಆದರೆ ಇದಕ್ಕೆ ಒಟ್ಟು ರೂ. 25 ಲಕ್ಷ ಖರ್ಚಾಗುತ್ತದೆ ಎಂದೂ ತಿಳಿಸಿದ್ದಾರೆ.
ವಿದೇಶದ ಉದ್ಯೋಗಕ್ಕಾಗಿಕೈಕಾಲಿ ಮಾಡಿಕೊಂಡಿದ್ದ ಭರತ್ ಎದೆಗುಂದದೇ ಸಾಲ ಸೋಲ ಮಾಡಿ ಕಿಮೋಥೆರಪಿ ಮಾಡಿಸಿದ್ದಾರೆ. ದಿವ್ಯಾ ಚಿಕಿತ್ಸೆಗೆ ಈಗಾಗಲೇ ಹಲವು ಲಕ್ಷ ಖರ್ಚಾಗಿದೆ. ಆದರೆ ಮುಂದೇನು ಎಂಬುವುದು ತಿಳಿದಿಲ್ಲ. ಬೋನ್ ಮ್ಯಾರೋಗೆ ಈ ಬಡ ಕುಟುಂಬಕ್ಕೆ ಇನ್ನೂ 25 ಲಕ್ಷದ ಅಗತ್ಯವಿದೆ. ಸದ್ಯ ಸಾಲ ಮಾಡಿ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಹೃದಯಿ ದಾನಿಗಳ ಆರ್ಥಿಕ ನೆರವಿನ ಅಗತ್ಯವಿದೆ. ಕುಟುಂಬಕ್ಕೆ ನೆರವು ಮಾಡಲು ಬಯಸುವವರು ಈ ಕೆಳಗೆ ನೀಡಿರುವ ಬ್ಯಾಂಕ್ ಅಕೌಂಟ್ಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬುವುದಷ್ಟೇ ನಮ್ಮ ಮನವಿ. ಈ ಕುಟುಂಬದಲ್ಲಿ ಮನೆ ಮಾಡಿರುವ ದುಃಖವನ್ನು ಹೋಗಲಾಡಿಸಿ ಮತ್ತೆ ನಗು ತರಿಸಲು ದಾನಿಗಳಿಂದಷ್ಟೇ ಸಾಧ್ಯ. ಈ ನಗುವಿನಲ್ಲಿ ನಮ್ಮದೂ ಒಂದು ಪಾಲಿರಲಿ.
Name: Divya
Account No: 01382200086460
IFSC Code: CNRBOO10138
MICR Code: 576015022
Google Pay Numbers: 9632492659 : 849786581
————————–OR———————–
ICICI A/c No :241801000860
IFSC Code: ICIC0002418
MICR Code: 575229013
Google Pay Numbers of her own sisters
Divya-9632492659
Nalini-8497865818
Sunitha-9967453132



