ಕರ್ನಾಟಕದಲ್ಲಿರುವ ದಕ್ಷಿಣಕನ್ನಡ-ಉಡುಪಿ ಸಾಹಸಕ್ಕೆ ಹೆಸರಾದ ಕರಾವಳಿ ತೀರ ಬಹುಶಃ ಭೋರ್ಗರೆವ ಕಡಲು ಸುತ್ತುವರಿದ ಬೆಟ್ಟಗಳ ಸಾಲು ಅದಕ್ಕೆ ಕಾರಣವಾಗಿರಬಹುದು. ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಉಡುಪಿ-ದಕ್ಷಿಣಕನ್ನಡವನ್ನು ಸರಿಗಟ್ಟುವ ಪ್ರದೇಶ ಕನರ್ಾಟಕದಲ್ಲಿ ಅಷ್ಟೇ ಏಕೆ? ಇಡೀ ದೇಶದಲ್ಲಿಯೇ ಬಹಳ ವಿರಳ. ಮಾಧ್ವ ಪರಂಪರೆಯ ಉಡುಪಿಯ ಅಷ್ಟ ಮಠಗಳು ಧಾಮರ್ಿಕ ನೆಲೆಗಟ್ಟನ್ನು ಈ ಪ್ರದೇಶಕ್ಕೆ ಒದಗಿಸಿದವು.
ಡಾ ಟಿಎಂಎ ಪೈಯವರ ಸಾಹಸದ ಫಲವಾಗಿ, ಮಣಿಪಾಲ ಕಲ್ಲು ಮರದಡಿ `ಹೂವಾಗಿ’ ಅರಳಿತು. ರಾಜಕಾರಣಿ ಶ್ರೀನಿವಾಸ ಮಲ್ಯರ ಮುತ್ಸದ್ದಿತನದಿಂದಾಗಿ ಮಂಗಳೂರು ಸರ್ವ ಋತು ಬಂದರು, ಬಜಪೆಯ ವಿಮಾನ ನಿಲ್ದಾಣ, ದೇಶದಲ್ಲಿಯೇ ಹೆಸರಾದ ಸುರತ್ಕಲ್ ತಾಂತ್ರಿಕ ಮಹಾವಿದ್ಯಾಲಯ ಮೈದಳೆದು ನಿಂತವು. ಧರ್ಮಸ್ಥಳದ ಹೆಗಡೆಯವರ ಜ್ಞಾನಪೂರಿತ ಕ್ರಿಯಾತ್ಮಕ ಚಟುವಟಿಕೆಗಳಿಂದಾಗಿ ಧರ್ಮಸ್ಥಳ ಧಾಮರ್ಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರವಾಗಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಇಡೀ ದೇಶವೇ ನಿಬ್ಬೆರಗಾಗುವಂತೆ ಹೆಗ್ಗಡೆಯವರು ಮಾಡಿ ತೋರಿಸಿದ್ದಾರೆ.
ಈಗ ಅದೇ ಪರಂಪರೆಯಲ್ಲಿ ಮಾಣಿಲದ ಪರಿಸರದಲ್ಲಿ ಪುಟ್ಟ ಪ್ರಣತಿಯೊಂದು ಬೆಳಕು ಚೆಲ್ಲತೊಡಗಿದೆ. ಆ ಬೆಳಕಿನ ಬೇರಾರೂ ಅಲ್ಲ. ದಕ್ಷಿಣಕನ್ನಡದ ಇತಿಹಾಸದಲ್ಲೇ ಮೊದಲಿಗೆ ಸಹಸ್ರ ಚಂಡಿಕಾಯಾಗ ನಡೆಸಿದ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ. ಮಾಣಿಲದ ಮಣ್ಣಿಗೆ ಚೈತನ್ಯ ತುಂಬುತ್ತಿರುವ ಸಂತ. ಅವರ ಅದ್ಭುತ ಕ್ರಿಯಾ ಶಕ್ತಿಯ ಫಲವಾಗಿ ಮಾಣಿಲದಲ್ಲೊಂದು ಪುಣ್ಯಧಾಮ ಮೈದಳೆದಿದೆ.
ಮೋಹನದಾಸ ಪರಮಹಂಸ ಸ್ವಾಮೀಜಿ ಹುಟ್ಟಿದ್ದು ಸಾಮಾನ್ಯ ಕುಂಬಾರ ಕುಟುಂಬದಲ್ಲಿ. ಮಂಗಳೂರಿನ ಡೊಂಗರಕೇರಿಯ ಶ್ರೀ ಪರಮೇಶ್ವರ ಮೂಲ್ಯ ಶ್ರೀಮತಿ ಕಮಲ ದಂಪತಿಗಳ ನಾಲ್ಕನೆಯ ಮಗನಾಗಿ ಮೋಹನದಾಸರು 16-04-1962ರಲ್ಲಿ ಜನಿಸಿದರು. ಬಾಲ್ಯದಲ್ಲಿ ಇವರ ಪ್ರತಿಭೆ ಅಷ್ಟೇನು ಎದ್ದು ಕಾಣಲಿಲ್ಲ. ಯಾವಾಗಲೂ ಅಂತರ್ಮುಖಿಯಾಗಿರುತ್ತಿದ್ದ ಇವರು ಲೌಕಿಕ ಪ್ರಪಂಚದಿಂದ ದೂರ ಉಳಿದು ಬೆಳೆದು ಬಂದರು.
ಪಾರಮಾಥರ್ಿಕ ಚಿಂತನೆ ಅವರನ್ನು ಸದಾ ಕಾಡುತ್ತಿದ್ದಂತೆ ತೋರುತ್ತದೆ. ಐಹಿಕ ಜೀವನವನ್ನು ದಾಟಿ ನಿಲ್ಲುವ ಅವರ ಹಂಬಲಕ್ಕೆ ಸರಿಯಾಗಿ ಅವರ ಮನೆಯ ಪಕ್ಕದ ನಾಗಬನ ಅವರ ತಪೋಭೂಮಿಯಾಯಿತು. ಅಲ್ಲಿಯ ಧ್ಯಾನ ಸಮಾಧಿಯಿಂದ ಎದ್ದು ಭಗವದ್ಭಕ್ತಿಯ ದೀವಟಿಗೆ ಹಿಡಿದು ಮುಂದೆ ಹಿಡಿದು ನಡೆದದ್ದು ಹಚ್ಚ ಹಸಿರಿನ ವನರಾಶಿಯಿಂದ ಕಂಗೊಳಿಸುತ್ತಿದ್ದ ಮಾಣಿಲಕ್ಕೆ. ಊರು ಕೇರಿ, ಜನಸಂಪರ್ಕ ಬೇಡವೆಂದು ತೊರೆದು ನಡೆದಾಗ ದೈವ ಸಂಕಲ್ಪವೆಂಬಂತೆ ಮತ್ತೆ ಅವರನ್ನು ಬೆನ್ನು ಹತ್ತಿದವು. ಮಾಣಿಲದ ಮಹಾಲಕ್ಷ್ಮೀ ಕೈ ಬೀಸಿ ಕರೆದಳು. ಎರಡು ದಶಕಗಳ ಹಿಂದೆ ದಕ್ಷಿಣ ಕನ್ನಡದ ಹತ್ತು ಕುಗ್ರಾಮಗಳಲ್ಲಿ ಬಂಟ್ವಾಳ ತಾಲೂಕಿನ ಕಾಸರಗೋಡು ಸೆರೆಗಂಚಿನಲ್ಲಿರುವ `ಮಾಣಿಲ’ವು ಒಂದೆಂದು ಗುರುತಿಸಲ್ಪಟ್ಟಿದ್ದಿತು. ಆ ಬಳಿಕ ಬದಲಾವಣೆಯ ಗಾಳಿ ಬೀಸಿತು. ದಾರಿ ದೀಪ, ನೀರು ಹೀಗೆ ಒಂದೊಂದಾಗಿ ಸೌಲಭ್ಯಗಳು ಹರಿದು ಬಂದವು. `ಶರಣರಡಿಯಿಟ್ಟ ನೆಲ ಪಾವನ’ ವೆಂಬಂತೆ ಕುಗ್ರಾಮವಾಗಿದ್ದ ಮಾಣಿಲದಲ್ಲಿ ಪುಟ್ಟ ಹಣತೆಯೊಂದು ಬೆಳಕು ಚೆಲ್ಲಿತು. ಇಲ್ಲಿ ಆಶ್ರಮವೊಂದು ರೂಪಗೊಂಡಿದೆ.
ಧಾಮರ್ಿಕ ಶ್ರದ್ಧಾ ಕೇಂದ್ರಗಳಲ್ಲಿ ದೇವಸ್ಥಾನಗಳಲ್ಲಿ, ಸ್ವಯಂಪ್ರೇರಿತವಾಗಿ ಊರಿನ ಯುವಕರೊಂದಿಗೆ ತಾವೇ ಸೇವೆಗೆ ಮುಂದಾದರು. ಅದರ ಪರಿಣಾಮವಾಗಿ ಮಾಣಿಲದ ಮಣ್ಣಲ್ಲಿ ಚೇತನದ ಚಿಲುಮೆ ಪುಟಿದೆದ್ದಿತು. ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಶ್ರಮದಾನವನ್ನು ಗಮನಿಸಿದಾಗ ಕೌತುಕವೆನಿಸುತ್ತದೆ. ಹತ್ತು ಸಹಸ್ರಕ್ಕೂ ಮಿಕ್ಕಿ ಕಾರ್ಯಕರ್ತರು, ಅನೇಕ ಸಂಘ ಸಂಸ್ಥೆಗಳು ಇಲ್ಲಿ ನಿಂತು ಕೆಲಸ ಮಾಡಿವೆ. ಶ್ರೀಧಾಮಕ್ಕೆ ಸಹಾಯ ಸಹಕಾರಗಳು ಹರಿದು ಬಂದಿವೆ. ಸುಮಾರು ಮೂವತೈದು ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಅನ್ನಛತ್ರ ನಿಮರ್ಾಣ ಮಾಡಲಾಗಿದೆ. ಇಲ್ಲಿಯ ಎಲ್ಲ ನಿಮರ್ಾಣಗಳಲ್ಲಿ ಜನರ ಸ್ವಯಂಪ್ರೇರಿತ ಕೆಲಸ ಎದ್ದು ಕಾಣುತ್ತದೆ. “ಧ್ಯಾನಿಸುವ ತುಟಿಗಳಿಗಿಂತ ಕೆಲಸ ಮಾಡುವ ಕೈಗಳು ಶ್ರೇಷ್ಟ” ಎನ್ನುವುದನ್ನು ಸ್ವಾಮೀಜಿ ಇಲ್ಲಿ ಮಾಡಿ ತೋರಿಸಿದ್ದಾರೆ. ಸ್ವಾಮೀಜಿಯವರ ಆಶೀವರ್ಾದದಿಂದ “ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ” ಎಂಬ ಸಮಾಜ ಸೇವಾ ಸಂಸ್ಥೆ ಕಾಯರ್ಾರಂಭ ಮಾಡಿದೆ. ಭಜನೆ, ಧಾಮರ್ಿಕ ಸಭೆಗಳು, ಸಾಂಸ್ಕೃತಿಕ , ಸಾಹಿತ್ಯಿಕ ಚಟುವಟಿಕೆಗಳು ಜರುಗತೊಡಗಿದೆ. ದೇಶೀಯ ಸಂಸೃತಿಯನ್ನು ಇಲ್ಲಿ ಅರಳಿಸಬೇಕೆಂಬ ಸ್ವಾಮೀಜಿಯವರ ಹಂಬಲ ಸಾಕಾರಗೊಂಡಿದೆ.
ಯೋಗ ತರಬೇತಿ ಶಾಲೆ, ಸಂಸ್ಕೃತ ಶಾಲೆ, ಆಯುವರ್ೇದ ಮನೆಮದ್ದುಗಳ ಪ್ರಕೃತಿ ಚಿಕಿತ್ಸಾಕೇಂದ್ರ, ಲಲಿತಕಲೆ, ಜನಪದ ಕಲೆಗಳ ಅಧ್ಯಯನ ಹೀಗೆ ಹಲವಾರು ಯೋಜನೆಗಳನ್ನು ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ ಸಿದ್ಧಗೊಳಿಸಿದೆ. ದಕ್ಷಿಣಕನ್ನಡದ ಒಂದು ಮೂಲೆಯಲ್ಲಿ ಕುಗ್ರಾಮವಾಗಿ ಮಲಗಿದ್ದ ಈ ಗ್ರಾಮ, ಮೋಹನದಾಸ ಸ್ವಾಮೀಜಿಯವರ ಸ್ಪರ್ಶದಿಂದ ಎಚ್ಚೆತ್ತು ಹೊಸ ರೂಪ ಧರಿಸಿ ಎದ್ದು ನಿಂತಿದೆ.
“ಎಲ್ಲರಲ್ಲೂ ಭಗವಂತನ ಚೇತನ ಇದೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಿರಿ” ಇದು ಮೋಹನದಾಸ ಪರಮಹಂಸ ಸ್ವಾಮೀಜಿಯವರ ಸಂದೇಶ.