ಮುಂಬಯಿ(ಜ.೧೭, ಕುಲಾಲ್ ವರ್ಲ್ಡ್ ನ್ಯೂಸ್): ಕಳೆದ ಬಾರಿಯ ಎಸ್ಎಸ್ಸಿ ಪರೀಕ್ಷೆಯಲ್ಲಿ ಸಾಂತಾಕ್ರೂಸ್ ನ ಗುರುನಾರಾಯಣ ನೈಟ್ ಹೈಸ್ಕೂಲ್ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಕು| ಪ್ರೀತಿ ಮೂಲ್ಯ ಅವರಿಗೆ ಶಾಲೆಯ 57ನೇ ವಾರ್ಷಿಕೋತ್ಸವ ಸಂದರ್ಭ ಅಕ್ಷಯ ಪತ್ರಿಕೆಯ ಮಾಜಿ ಗೌರವ ಪ್ರಧಾನ ಸಂಪಾದಕ, ಭಾರತ್ ಬ್ಯಾಂಕ್ನ ನಿರ್ದೇಶಕ ಎಂ.ಬಿ. ಕುಕ್ಯಾನ್ ಅವರು ಸ್ವರ್ಣ ಪದಕ ಪ್ರದಾನಿಸಿ ಅಭಿನಂದಿಸಿದರು. ಪ್ರೀತಿ ಮೂಲ್ಯ ಅವರು ಎಸ್ಎಸ್ಸಿ ಪರೀಕ್ಷೆಯಲ್ಲಿ 91.80% ಅಂಕ ಗಳಿಸಿದ್ದರು.
ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್ನ ನಿಕಟಪೂರ್ವ ಅಧ್ಯಕ್ಷ, ಕನ್ನಡ ಸಂಘ ಸಾಂತಾಕ್ರೂಜ್ನ ಅಧ್ಯಕ್ಷ ಎಲ್. ವಿ. ಅಮೀನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಬ್ಯಾಂಕ್ನ ನಿರ್ದೇಶಕ ಭಾಸ್ಕರ ಎಂ. ಸಾಲ್ಯಾನ್, ತುಳು ಚಿತ್ರರಂಗದ ನಟ, ತೌಳವ ಸೂಪರ್ಸ್ಟಾರ್ ಸೌರಭ್ ಸುರೇಶ್ ಭಂಡಾರಿ ಅವರು ಉಪಸ್ಥಿತರಿದ್ದರು. ಅಸೋಸಿಯೇಶನ್ನ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ಉಪಸ್ಥಿತರಿದ್ದರು.




