ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಹೇಮಲ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಟಿ.ವಿ. 06 (ಕರುನಾಡ ಸಾಧಕರ ಧ್ವನಿ) ಮಾಧ್ಯಮದ ಸಹಯೋಗದೊಂದಿಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಆಯೋಜಿಸಲಾಗಿದ್ದ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುಮುಖ ಪ್ರತಿಭೆ ಕುಮಾರಿ ಮನಿಷ್ಕಾ ಡಿ ಕುಲಾಲ್ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ಕರುನಾಡ ಕಲಾ ಕೇಸರಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ದಿನಾಂಕ 03-05-2026ರಂದು ನಡೆದ ಈ ಸಮಾರಂಭದಲ್ಲಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಮಂಗಳೂರು ಕುಂಟಿಕಾನ ಸೆಂಟ್ ಆನ್ಸ್ ಸ್ಕೂಲ್ ನ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಮನಿಷ್ಕಾ ಅವರು ಸೆಮಿ ಕ್ಲಾಸಿಕಲ್, ವೆಸ್ಟರ್ನ್ ಡ್ಯಾನ್ಸ್ ಮತ್ತು ಕರಾಟೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಈ ಸಮಾರಂಭದಲ್ಲಿ ಟ್ರಸ್ಟ್ನ ಅಧ್ಯಕ್ಷರಾದ ಡಾ. ಪ್ರಕಾಶ್ ಡಿ.ಸಿ. ಮತ್ತು ಕಾರ್ಯದರ್ಶಿಗಳಾದ ಡಾ. ನವೀನ್ಕುಮಾರ್ ಎಲ್.ಸಿ. ಅವರು ಉಪಸ್ಥಿತರಿದ್ದು ಪ್ರಶಸ್ತಿ ನೀಡಿ ಅಭಿನಂದಿಸಿದರು. ಮನಿಷ್ಕಾ ಅವರು ಬಿಜೈ ಕಾಪಿಕಾಡ್ ನ ದಯಾನಂದ್ ಕುಲಾಲ್ ಮತ್ತು ಸುಮಿತಾ ದಯಾನಂದ್ ಅವರ ಸುಪುತ್ರಿ.



