(ಕುಲಾಲ್ ವರ್ಲ್ಡ್ ಡಾಟ್ ಕಾಮ್ ಲೇಖನ)
ಮಹಾರಾಷ್ಟ್ರ ಸ್ವಾಭಿಮಾನ ಭೂಮಿ ಶಿವಾಜಿ, ಅಂಬೇಡ್ಕರ್, ಪುಲೆ ದಂಪತಿಗಳ ಜನ್ಮ ಮತ್ತು ಕರ್ಮ ಭೂಮಿ ಈ ಕರ್ಮಭೂಮಿಯಲ್ಲಿ ರತ್ನ ಶ್ರೇಷ್ಠ ದೇಶ ಭಕ್ತ ರತ್ನಪ್ಪ ಕುಂಬಾರ ಅವರು ಬಾಳಾಬಾಯಿ ಮಗನಾಗಿ ಜನ್ಮತಾಳಿದ. ತಾಯಿಯ ಅಕಾಲಿಕ ನಿಧನ ಕಾರಣ ತಂದೆ ಭರಮಪ್ಪನವರ ಆರೈಕೆಯಲ್ಲಿ ಬೆಳೆದನು.
ಕೊಲ್ಲಾಪುರದಲ್ಲಿ ತಮ್ಮ ಪ್ರೌಢ ಕಾಲೇಜು ಶಿಕ್ಷಣ ಕಾನೂನು ಪದವಿ ಪೂರೈಸಿ 1935 ವಕೀಲ ವೃತ್ತಿ ಆರಂಭ ಮತ್ತು ವೃತ್ತಿಯೂಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದನು. 1935ರ ಜುಲೈ 8ರಂದು ಬಂಧಿಸಲಾಯಿತು. ಇದರಿಂದ ಅಪಾರ ಜನಪ್ರಿಯತೆಯ ವ್ಯಕ್ತಿಯಾದ ಕಾರಣ ಜನರಿಂದ ಜೈಲಿಗೆ ಮುತ್ತಿಗೆ, ಕುಂಬಾರ ಜಿಂದಾಬಾದ ಘೋಷಣೆ, ಜನ ಚದುರಿಸಲು ಲಾಟಿ ಪ್ರಹಾರ ಮರು ದಿನ ಕುಂಬಾರರ ಬಿಡುಗಡೆ.
ನಂತರವ ಬ್ರಿಟಿಷ್ ಸರಕಾರದ ವಿರುದ್ದ ಬಂಡೇಳಲು ಕೊಲ್ಹಾಪುರದ ಬಿಂದು ಚೌಕನಿಂದ ಕರೆ ನೀಡಿದರು. ಕುಂಬಾರ ರ ಚಟುವಟಿಕೆಗಳು ಬ್ರಿಟಿಷ್ ವಿರುದ್ದ ಎಂಬುದು ಸರಕಾರದ ಗಮನ ಸೆಳೆಯಿತು. ಕುಂಬಾರರನ್ನು ಬಂಧಿಸಲು ಸರಕಾರದ ಆದೇಶ. ಇವರನ್ನು ಬಂಧಿಸುವುದೆಂದರೆ ಮೃತ್ಯುದೇವತೆಯನ್ನು ಮೈಮೇಲೆ ಎಳೆದುಕೂಂಡಂತೆ. ಬಂಧನ ಮಾಡುವಂತೆ ಸರಕಾರ ಆದೇಶ ಮಾಡಿ ಆರು ತಿಂಗಳು ಕಳೆದರೂ ಮತ್ತೆ ಬಂಧನವಾಗಲಿಲ್ಲ. ಕೊಲ್ಲಾಪುರದ ಪೋಲಿಸ ಅಧಿಕಾರಿಗಳ ಸಾಮೂಹಿಕ ವರ್ಗ ಶ್ರೇಷ್ಠರೆನಿಸಿಕೂಂಡ ಅಧಿಕಾರಗಳೆಲ್ಲ ಬಂದು ಹೋದರು. ಕೂನೆಗೆ ಕುಂಬಾರ ಗುಪ್ತ ಕಾರಸ್ಥಾನ ಕಂಡುಹಿಡಿದ ಪೋಲಿಸ್ ರು ಬಂಧಿಸಲು ಬಂದಾಗ ವೇಷ ಮರೆಯಿಸಿಕೂಂಡು ಅವರ ಮಂದೆಯೇ ಸಾಗಿ ಹೋಗಿ ಶೂನ್ಯ ಸಿಂಹಾಸನದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭು ತಪಸ್ಸು ಮಾಡಿದ ಕುಂಬೋಜ ಗುಹೆಯನ್ನು ತಮ್ಮ ಗುಪ್ತ ಕಾರ್ಯಕ್ಷೇತ್ರ ಮಾಡಿಕೊಂಡರು.
ಮಠಾಧೀಶರ ವೇಷ ಧರಿಸಿ ಸಾವಿರಾರು ಯುವಕರಿಗೆ ಸ್ವಾತಂತ್ರ್ಯದ ತರಬೇತಿ ನೀಡಿದರು. ಸುಭಾಷ್ ಚಂದ್ರ ಬೋಸ್ ಅವರ ಹೋರಾಟದ ರೀತಿಯಲ್ಲಿ ನಡೆದರು. ರಮಾಕಾಂತನೆಂದು ಹೆಸರು ಬದಲಿಸಿಕೂಂಡರು. ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ, ತೆಲಂಗಾಣ ಪ್ರದೇಶಗಳಿಗೆ ಬೇಟಿ ಕೊಟ್ಟರು. ಚಲೇಜಾವ ಚಳುವಳಿ ಪಶ್ಚಿಮ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ದೈತ್ಯ ಸ್ವರೂಪ ತೆಳೆಯಿತು. ಇದರ ಪ್ರೇರಕ ಶಕ್ತಿ ರತ್ನಪ್ಪ ಕುಂಬಾರ ಈ ಸಮಾಚಾರ ಲಂಡನ್ ಸಂಸತ್ತಿನಲ್ಲಿ ಬಾರಿ ಕೋಲಾಹಲ ಎಬ್ಬಿಸಿತು. 1944ರಲ್ಲಿ ಇವರ ತಂದೆ ನಿಧನರಾದಾಗ ಅಂತ್ಯಕ್ರಿಯೆಗೆ ಬರುವರು ಎಂದು ಗ್ರಾಮಕ್ಕೆ ಪೋಲಿಸ ಚಕ್ ಬಂದಿ ಹಾಕಲಾಗಿತ್ತು. ಆದರೆ ಮುನ್ನಾ ದಿನ ಬಂದು ತಂದೆಯ ದರ್ಶನ ಪಡೆದು ಭೂಗತರಾದರು. ಪೋಲಿಸರಿಗೆ ಬಂದ ದಾರಿಗೆ ಸುಂಕವಿಲ್ಲದಾಯಿತು. ರತ್ನಪ್ಪ ಕುಂಬಾರ ಅವರ ಸುಳಿವು ನೀಡಿದವರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ ಘೂಷಿಸಿತು ಬ್ರಿಟಿಷ್ ಸರಕಾರ. ಸರಕಾರ ತಿಪ್ಪರಲಾಗ ಹಾಕಿದರೂ ಸಿಗದಾದರು. ಅವರ ದೇಶಾಭಿಮಾನಕ್ಕೆ ಬ್ರಿಟಿಷ್ ಸರಕಾರ ಅವರ ಮೇಲೆ ಹಾಕಿದ್ದ ನೂರಾರು ಕೇಸುಗಳನ್ನು ಹಿಂತಗೆದರು. ಬ್ರಿಟಿಷ್ ಸಂಸತ್ತು ಕುಂಬಾರರ ವಿಷಯದಲ್ಲಿ ಸಂಪೂರ್ಣ ಕೈಚೆಲ್ಲಿತ್ತು. ಭಾರತಕ್ಕೆ ಸ್ವಾತಂತ್ರ್ಯ ನೀಡುವ ತಿರ್ಮಾಣ ಹೊರಬಿದ್ದಿತು. ಭೂಗತರಾದ ರತ್ನಪ್ಪ ಕುಂಬಾರರು 1947 ಮಾರ್ಚ್ 7ರಂದು ಕೋಲ್ಲಾಪುರದ ಬಿಂದು ಚೌಕದಲ್ಲಿ ಪ್ರತ್ಯೇಕವಾಗಿ ಕಂಡರು. ಆಗ ಛತ್ರಪತಿ ಶಾಹು ಮಹಾರಾಜರು ದೇಶಭಕ್ತ ಬಿರುದು ಮತ್ತು ಒಂದು ಲಕ್ಷ ರೂಪಾಯಿ ಗೌರವ ಮೂತ್ತ ನೀಡಿದರು. ಇಡೀ ದೇಶವ್ಯಾಪೀ ಗೌರವ ದೊರೆತವು. ದೇಶ ವಿಭಜನೆಯನ್ನು ಉಗ್ರವಾಗಿ ಖಂಡಿಸಿದರು ಮತ್ತು ಪಾಕಿಸ್ತಾನ ಯಶಸ್ವಿ ರಾಷ್ಟ್ರವಾಗಲಾರದು ಎಂದು ಭವಿಷ್ಯ ನುಡಿದರು.
ಭಾರತ ಒಕ್ಕೂಟ ನಿರ್ಮಾಣದಲ್ಲಿ ಸರದಾರ ವಲ್ಲಭ ಬಾಯಿ ಪಟೇಲ್ ನಂತರ ಇವರದೇ ನಿರ್ಣಾಯಕ ಪಾತ್ರ. ಮಹಾರಾಷ್ಟ್ರದ ಅಕ್ಕಲಕೋಟ ಸಂಸ್ಥಾನ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವೀಲಿನಗೂಳ್ಳಲು ನಿರಾಕರಿಸಿದಾಗ ಅದರ ಕುರಿತು ಅಂತಿಮ ತಿರ್ಮಾಣಕೈಗೊಳ್ಳಲು ಸರದಾರ ಪಟೇಲ್ ರು ರತ್ನಪ್ಪ ಕುಂಬಾರರಿಗೇ ಜವಾಬ್ದಾರಿ ನೀಡಿದರು. ಅಕ್ಕಲ್ ಕೋಟದ ದೂರೆಯ ಹೆಡೆಮುರಿ ಕಟ್ಟಿ ಭಾರತದ ಒಕ್ಕೂಟಕ್ಕೆ ಸೇರಿಸಿ ಸಂಸ್ಥಾನದ ಮೇಲೆ ಭಾರತದ ಧ್ವಜ ಹಾರಿಸಿದರು. ದಕ್ಷಿಣ ಭಾರತದ ಹಲವಾರು ಸಂಸ್ಥಾನಗಳ ವಿಲೀನದಲ್ಲಿ ನಿರ್ಣಾಯಕ ಪಾತ್ರವಹಿಸಿದ ಕಾರಣ ದಕ್ಷಿಣದ ಸರದಾರ ವಲ್ಲಭಭಾಯ್ ಪಟೇಲ್ ಎನ್ನುವರು.
ಸ್ವಾತಂತ್ರ ನಂತರ ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರಾಗಿ ಅಂಬೇಡ್ಕರ್ ಅವರ ಹಿಂದೆ ನಿಂತು ಕೆಲಸ ಮಾಡಿದರು. ಮೂಲ ಕರಡು ಪ್ರತಿಗೆ ಅಂಬೇಡ್ಕರ್ ಅವರ ಜೊತೆ ಸಹಿ ಹಾಕಿದ ಮಹಾನ ತಜ್ಞರು.1954 ರಲ್ಲಿ ಪಂಚ ಗಂಗಾ ಸಹಕಾರಿ ಕಾರಖಾನೆ ಸ್ಥಾಪಿಸಿದರು.ರಾಷ್ಟ ಮಟ್ಟದ ಅತ್ಯುತ್ತಮ ಸಹಕಾರಿ ಸಕ್ಕರೆ ಕಾರಖಾನೆಗಳಲ್ಲಿ ಒಂದು. ಮಹಾರಾಷ್ಟ್ರದಲ್ಲಿ ಅರವತ್ತು ಏತ ನೀರಾವರಿ ಯೋಜನೆಯನ್ನು ಸಹಕಾರಿ ತಳಹದಿಯ ಮೇಲೆ ನಿರ್ಮಿಸಿದರು. ಇವತ್ತು ಮಹಾರಾಷ್ಟ್ರದ ಭಾರತದ ಮಾಜಿ ರಕ್ಷಣಾ ಸಚಿವ ಯಶವಂತರಾವ ಚವ್ಹಾಣ ಇವರನ್ನು ಸಹಕಾರಿ ವ್ಯವಸ್ಥೆ ಯ ಮಹರ್ಷಿ ಎಂದು ಕರೆದರು. ಇವರ ಪ್ರಯತ್ನದಿಂದ ಬರಡು ಭೂಮಿ ಬಂಗಾರ ಬೇಳೆಯುವ ನಾಡಾಯಿತು. ಜನತಾ ನೂಲಿನ ಗಿರಣಿ, ಜನತಾ ಸಹಾಕಾರಿ ಬ್ಯಾಂಕ ನ ಸಂಸ್ಥಾಪಕ ಅಧ್ಯಕ್ಷರಾಗಿ ಇವುಗಳನ್ನು ಶಿಖರಕ್ಕೆ ಏರಿಸಿದರು. ಇವರು ಕಟ್ಟಿದ ಸಂಸ್ಥೆಯ ಅಂಗ ಸಂಸ್ಥೆಗಳು ಇಂದು ಐದನೂರು ದಾಟಿದೆ. ಕೋಲ್ಹಾಪುರದಲ್ಲಿ ಶಿವಾಜಿ ವಿಶ್ವವಿದ್ಯಾಲಯ ಸ್ಥಾಪನೆಗೆ ನೆರವು ನೀಡಿದರು, ಕೌನ್ಸಿಲ್ ಆಪ್ ಎಜುಕೇಶನ್ ಸೂಸಾಯಿಟಿ ಸ್ಥಾಪಿಸಿ ವಿವಿಧ ಉನ್ನತ ಶಿಕ್ಷಣದ ಕೋರ್ಸ ಆರಂಭಿಸಿದರು. ಕೋಲ್ಹಾಪುರಲ್ಕಿ ನೈಟ್ ಆರ್ಟ್ಸ್ ಕಾಲೇಜ್ ಸ್ಥಾಪಿಸಿದರು. ಎರಡು ನೂರಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಇಂದು ನಡೆಯುತ್ತಿವೆ.
ಇವರ ಶಿಕ್ಷಣ ಸೇವೆ ಗಮನಿಸಿ ಪುಣಾ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ. ಹಲವಾರು ಪತ್ರಿಕಾ ಸಂಪದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಖಿಲ ಭಾರತೀಯ ಸಕ್ಕರೆ ಮಂಡಳಿಯ ಅಧ್ಯಕ್ಷರಾಗಿ, ಲೋಕಸಭಾ ಸದಸ್ಯರಾಗಿ,ಮಹಾರಾಷ್ಟ್ರದ ಗೃಹಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು .1985 ಇವರಿಗೆ ಪದ್ಮಶ್ರೀ ಪ್ರಶಸ್ತಿ ಹುಡುಕಿ ಬಂದಿದೆ. ಇವರು ಕಟ್ಡಿದ ಸಂಸ್ಥೆಗಳಿಂದ ಇಂದು ದುಡಿದು ಹೂಟ್ಟೆ ತುಂಬಿಕೊಳ್ಳುವರ ಸಂಖ್ಯೆ 4ಲಕ್ಷಕ್ಕೂ ಅಧಿಕ. ಇವರಿಗೆ ಪುತ್ರ ಸಂತಾನವಿಲ್ಲದ ಕಾರಣ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಸಮಾಜಕ್ಕೆ ಅರ್ಪಿಸಿದರು. ತಾವು ಇಷ್ಟೇಲ್ಲಾ ದೈತ್ಯ ಹುದ್ದೆ ಅನುಭವಿಸಿದರು ಅದರಿಂದ ಒಂದು ಪೈಸೆ ಲಾಭಮಾಡಿಕೂಳ್ಳದ ಸಂಸಾರಿ ಸಂತ.