ಸುಳ್ಯ(ಅ.೦೩,ಕುಲಾಲ್ ವರ್ಲ್ಡ್ ನ್ಯೂಸ್): ಉಪ್ಪಿನಂಗಡಿ ಇಂದ್ರಪ್ರಸ್ತ ಸಮೂಹ ವಿದ್ಯಾಕೇಂದ್ರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಪ್ರಾಥಮಿಕ ಹಿರಿಯ ವಿಭಾಗದ ತುಳು ಕಂಠಪಾಠ ಸ್ಪರ್ಧೆಯಲ್ಲಿ ಸ .ಹಿ .ಪ್ರಾ .ಶಾಲೆ ನೆಟ್ಟಾರು ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ .ಆರ್ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಪಾಠ ಹಾಗು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದುಕೊಳ್ಳುತ್ತಿರುವ ಈಕೆ, ವಿದ್ವತ್ ಯೋಗಿಶ್ವರೀ ಇವರಿಂದ ಭರಟನಾಟ್ಯವನ್ನು , ಮಾಲಿನಿ ಕೃಷ್ಣ ಮೋಹನ್ ಇವರಿಂದ ಸಾಸ್ತ್ರೀಯ ಸಂಗೀತ ತರಬೇತಿ ಪಡೆಯುತ್ತಿದ್ದು ಹಲವೆಡೆ ಪ್ರದರ್ಶನವನ್ನು ನೀಡಿ ಮೆಚ್ಚುಗೆ ಗಳಿಸಿದ್ದಾಳೆ.
ಶ್ರಾವ್ಯ ಬೆಳ್ಳಾರೆ ಗ್ರಾಮದ ಇಂದಿರಾನಗರ ನಿವಾಸಿಯಾದ ರಾಮ ಕೃಷ್ಣ ಕುಲಾಲ್ ಮತ್ತು ಜಯ ದಂಪತಿಗಳ ಪುತ್ರಿಯಾಗಿದ್ದಾಳೆ.


