ಕುಂಬಾರ ಜನಾಂಗದ ಶಿವಶರಣರಲ್ಲಿ ಸರ್ವಜ್ಞ ಮತ್ತು ಕುಂಬಾರ ಗುಂಡಯ್ಯನನ್ನು ಬಿಟ್ಟರೆ ಅತ್ಯಂತ ಪ್ರಮುಖರಾದ ಶಿವಶರಣರೆಂದರೆ ಗುಂಡು ಬ್ರಹ್ಮಯ್ಯರು. ಡಾ ಎಂ ಎಂ ಕಲಬುಗರ್ಿಯವರು ಶಾಸನಗಳಲ್ಲಿ ಶಿವಶರಣರು ಎಂಬ ಕೃತಿಯಲ್ಲಿ ಗುಂಡು ಬ್ರಹ್ಮಯ್ಯರು ಬಸವೋತ್ತರ ಯುಗದ ಶಿವಶರಣರು ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ ವಿ ಶಿವಾನಂದ ಕೂಡ ಗುಂಡು ಬ್ರಹ್ಮಯ್ಯರು ಓರಂಗಲ್ಲಿನ ಕಾಕತೀಯ ದೊರೆ ಗಣಪತಿರಾಜನ ಕಾಲದಲ್ಲಿ ಶೂಲಕ್ಕೇರಿದರು ಎಂದು ಅಭಿಪ್ರಾಯಪಟ್ಟಿದ್ದಾರೆ. ಶ್ರಿ ಮಲ್ಲಪ್ಪನವರು ಗುಂಡು ಬ್ರಹ್ಮಯ್ಯರು ಬಸವಪೂರ್ವ ಯುಗದವರು ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಕಾಲ ಸುಮಾರು 1012 ಇರಬಹುದೆಂದು ಅಭಿಪ್ರಾಯ. ಗುಂಡು ಬ್ರಹ್ಮಯ್ಯರ ವೀರವ್ರತ ನಿಷ್ಟೆಗೆ ಮಾರು ಹೋದ ಬಸವಣ್ಣನು “ನನಗೆ ಇಕ್ಕುವ ಶೂಲ ಪ್ರಾಪ್ತಿಸಲಿ ” ಎಂದು ಪ್ರಾಥರ್ಿಸಿದ್ದಾನೆ. ಈ ಎಲ್ಲಾ ಕಾರಣಗಳಿಂದ ಗುಂಡು ಬ್ರಹ್ಮಯ್ಯರು ಬಸವ ಪೂರ್ವ ಯುಗದವರೆಂದು ಹೇಳಬಹುದು.
ಸ್ಥಳನಾಮ :
ಡಾ ವಿ ಶಿವಾನಂದ ಅವರು ಗುಂಡು ಬ್ರಹ್ಮಯ್ಯರ ಸ್ಥಳ ಕುರಿತು ಚಾರಿತ್ರಿಕ ಕೆಲವು ಕುರುಹುಗಳನ್ನುಳ್ಳ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಆಣೆಗೆರೆ (ದೊಡ್ಡಾಣಗೆರೆ) ಮತ್ತು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಎಂಬವು ಇವರ ಸ್ಥಳವಾಗಿದ್ದು ನಂತರ ಓರಂಗಲ್ಲಿಗೆ ಹೋಗಿರಬೇಕೆಂದು ಊಹಿಸುತ್ತಾರೆ.
ಶಿಲ್ಪದಲ್ಲಿ ಗುಂಡು ಬ್ರಹ್ಮಯ್ಯರು :
ತಮ್ಮ ಪ್ರಾಣವನ್ನೇ ಶೂಲಕ್ಕೊಡ್ಡಿದ ಗುಂಡು ಬ್ರಹ್ಮಯ್ಯ ವಿಗ್ರಹಗಳ ದೇವಾಲಯಗಳು ಕನರ್ಾಟಕಾದ್ಯಂತ ದೊರಕಿವೆ. ಈ ವಿಗ್ರಹಗಳನ್ನು “ಶೂಲಬ್ರಹ್ಮ” ಎಂದೂ ಸಹ ಕರೆಯುತ್ತಾರೆ. ಗುಂಡು ಬ್ರಹ್ಮಯ್ಯರ ವಿಗ್ರಹಗಳು ಸಾಮಾನ್ಯವಾಗಿ ಜೋಡಿಯಾಗಿಯೇ ಇರುತ್ತವೆ. ಕೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಶೂಲದ ಮೇಲೆ ಕುಳಿತಿರುವ ಅಥವಾ ಶೂಲದ ಪಕ್ಕದಲ್ಲಿ ನಿಂತಿರುವ ಭಂಗಿಯಲ್ಲಿ ಈ ವಿಗ್ರಹಗಳು ದೊರೆತಿವೆ. ಇದು ಗುಂಡು ಬ್ರಹ್ಮಯ್ಯ ಶಿಲ್ಪದ ಸಾಮಾನ್ಯ ಸ್ವರೂಪ. ಇದುವರೆಗೆ ಗುಂಡು ಬ್ರಹ್ಮಯ್ಯರ ವಿಗ್ರಹಗಳು ಹಾವೇರಿ, ಗುಂಡೇನಹಳ್ಳಿ, ಕುಸನೂರು, ಚಿತ್ರದುರ್ಗ, ಬನವಾಸಿ, ನೀಲಗೆರೆ, ಬಳ್ಳಾರಿ, ಯಳಂದೂರು, ಹರದನಹಳ್ಳಿಯಲ್ಲಿ ದೊರೆತಿದ್ದು, ಇತ್ತೀಚೆಗೆ ಡಾ ಎಂ ಜಿ ಮಂಜುನಾಥ, ಹಾಸನ ತಾಲೂಕಿನ ದೊಡ್ಡಗದ್ದವಳ್ಳಿ ಹಾಗೂ ಹಾಸನ ಜಿಲ್ಲೆಯ ಹಾರನಹಳ್ಳಿಯಲ್ಲಿ ಗುಂಡು ಬ್ರಹ್ಮಯ್ಯರ ಶಿಲಾಫಲಕವನ್ನು ಪತ್ತೆ ಹಚ್ಚಿದ್ದಾರೆ.
ಗುಂಡು ಬ್ರಹ್ಮಯ್ಯರ ಕುರಿತು ಇರುವ ಸಾಮಾನ್ಯ ಕಥೆಯೆಂದರೆ ಓರಂಗಲ್ಲ ಪಟ್ಟಣದಲ್ಲಿದ್ದ ಈ ಗುಂಡು ಬ್ರಹ್ಮಯ್ಯರನ್ನು ಪರೀಕ್ಷಿಸಲು ಒಮ್ಮೆ ಪರಮೇಶ್ವರನು ಕಾಕತೀಯ ಅರಸನ ಮನೆಯಲ್ಲಿ ಕಳ್ಳತನ ಮಾಡಿ ಗುಂಡು ಬ್ರಹ್ಮಯ್ಯರಲ್ಲಿಗೆ ಹೋಗಿ ರಕ್ಷಣೆ ಬೇಡುತ್ತಾನೆ. ಮೊರೆ ಹೊಕ್ಕವರನ್ನು ಸಂರಕ್ಷಿಸಲು ಹೋಗಿ ಈ ಶಿವಶರಣರು ತಾವೇ ಶೂಲವನ್ನೇರಿ ಪ್ರಾಣ ಬಿಡುತ್ತಾರೆ. ಕೈಲಾಸವನ್ನು ಸೇರಿ, ಸದ್ಗತಿ ಪಡೆಯುತ್ತಾರೆ.
ಗುಂಡಯ್ಯನ ರಗಳೆ :
ಆಧಾರಮೆಯಾಧಾಮದಾಗಿರೆ
ವೇಧೆಯೆ ಚಕ್ರದ ಮೊಳೆ ತಾನಾಗಿರೆ
ಮಿಗೆ ಷಟ್ಚಕ್ರಮೆ ಚಕ್ರಮದಾಗಿರೆ
ಸೊಗಯಿಪ ನಾಭಿಯೆ ನಾಭಿಯದಾಗಿರೆ
ಕನಸಿನ ಕಾಯಂ ಮೃತ್ತಿಕೆಯಾಗಿರೆ
ನೆನಹಂ ಚಟೆದಾರಂಗಳವಾಗಿರೆ
ನಿಷ್ಠೆಯೆ ಪಿಡಿವುರುದಂಡಮದಾಗಿರೆ
ಮುಟ್ಟಿ ತಿರುಗುವುದು ಜೀವನಮಾಗಿರೆ
ಮಾಡುವ ಭಕ್ತಿ ಕಟಾಹಮದಾಗಲು
ಕೂಡಿದ ಕರಣದೆ ಮರ್ದಿಸುತಾಗಲು
ಮಿಗೆ ಶೋಷಷಣದಾತಪದಿಂದಾರಿಸಿ
ಬಗೆ ಮಿಗಲುದರಾಗ್ನಿಗಳಿಂ ದಾಹಿಸಿ
ಆನಂದಜಲಪ್ಲಾವನಮಾಗಿರೆ
ನಾನಾ ಭಕ್ತಿ ಕಟಾಹಮದಾಗಿರೆ
ಶಿವಕಾರುಣ್ಯಾಂಬುಗಳಿಂ ತೀವುತೆ
ಶಿಭಕ್ತರ್ಗಾನಂದದೊಳೀವುತೆ