ಕುಂಬಾರ ಜನಾಂಗದ ಪ್ರಥಮ ಶರಣೆಯ ಪಟ್ಟ ಕುಂಬಾರ ಗುಂಡಯ್ಯನ ಮಡದಿ ಕೇತಲದೇವಿಗೆ ಸಲ್ಲುತ್ತದೆ. ಈಕೆ ಬ್ರಹ್ಮ ಗುಂಡಯ್ಯನ ಸಹೋದರಿ. ಕುಂಬಾರ ಗುಂಡಯ್ಯ ಬೀದರ್ ಜಿಲ್ಲೆಯ ಭಾಲ್ಕಿಯವನು. ಕೇತಲದೇವಿಯ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ. ಆಕೆ ಬರೆದ ಎರಡು ವಚನಗಳು ಮಾತ್ರ ದೊರೆತಿವೆ. “ಕುಂಭೆಶ್ವರ” ಅಥವಾ “ಕುಂಭೆಶ್ವರಲಿಂಗ” ಎಂಬ ಅಂಕಿತದಿಂದ ಬರೆದಿದ್ದಾಳೆ.
ಕೇತಲದೇವಿ ನಿತ್ಯವೂ ಲಿಂಗಕ್ಕೆ ಪಾವುಡವನ್ನು ಹಾಕುವ ವೃತವನ್ನು ಕೈಗೊಂಡಿದ್ದಳಂತೆ. ಒಮ್ಮೆ ಅದು ದೊರೆಯದೇ ಇರಲು ತನ್ನ ಎದೆಯ ಚರ್ಮವನ್ನೇ ತೆಗೆದು ಹಾಕಲು ಶಿವನು ಮೆಚ್ಚಿದನಂತೆ. ಈ ಕಥೆಯು ಅವಳ ವ್ರತ ನಿಷ್ಠೆಗೆ ಸಾಕ್ಷಿ. ಒಂದು ಸಂಸ್ಕೃತ ಶ್ಲೋಕವನ್ನು ಬಳಸಿರುವಳು. ಆಗ ಕನ್ನಡದಲ್ಲಿ ಸಂಸ್ಕೃತವನ್ನು ಹೆಚ್ಚು ಬಳಸುತ್ತಿದ್ದರು. ಕೇತಲದೇವಿಗೆ ಸಂಸ್ಕೃತದಲ್ಲಿ ಜ್ಞಾನವಿತ್ತೆಂಬುದಕ್ಕೆ ಇದೊಂದು ಸ್ಪಷ್ಟವಾದ ಉದಾಹರಣೆ.