ಮಂಗಳೂರು(ಏ.೧೬): ಕುಲಾಲ ಸಮಾಜದ ಬಡ ಕುಟುಂಬದ ವಿದ್ಯಾರ್ಥಿನಿ ದೀಕ್ಷಾ ಕುಲಾಲ್ ಅವರ ವಿದ್ಯಾಭ್ಯಾಸಕ್ಕಾಗಿ ಜಿ.ಎಸ್.ಬಿ ಹೆಲ್ಪ್ ಲೈನ್ ಚಾರಿಟಬಲ್ ಟ್ರಸ್ಟ್ ( ರಿ) ಸದಸ್ಯರು ಆರ್ಥಿಕ ಸಹಾಯ ನೀಡಿ ಮಾನವೀಯತೆ ತೋರಿದ್ದಾರೆ.
ಬಜಾಲ್ ಪಕ್ಕಲಡ್ಕ ನಿವಾಸಿ ಕಿಶೋರ್ ಕುಲಾಲ್ ರವರ ಹಿರಿಯ ಮಗಳಾಗಿರುವ 8 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ದೀಕ್ಷಾ ಕುಲಾಲ್ ಇವಳ ವಿದ್ಯಾಭ್ಯಾಸ ದ ಒಂದು ವರ್ಷದ ಸಂಪೂರ್ಣ ಶಿಕ್ಷಣ ಶುಲ್ಕ ರೂ. 11,000 ವನ್ನು ಜಿ.ಎಸ್.ಬಿ ಹೆಲ್ಪ್ ಲೈನ್ ಪಾವತಿಸಿದೆ.
ಪುಟ್ಟ ಬಾಡಿಗೆ ಮನೆಯಲ್ಲಿ ಇವರ ವಾಸವಾಗಿರುವ ಕಿಶೋರ್ ಕುಲಾಲರು ಕೂಲಿ ಕೆಲಸ ಮಾಡುತ್ತಿದ್ದರೆ ಇವರ ಪತ್ನಿ ಮನೆಯಲ್ಲಿ ಬೀಡಿ ಕಟ್ಟುತ್ತಾರೆ. ಯಾವುದೇ ಮೂಲದಿಂದ ಆರ್ಥಿಕ ಸಹಾಯ ಸಿಗದೆ ಇದ್ದಾಗ ಇವರ ಬೆಂಬಲಕ್ಕೆ ಜಿ.ಎಸ್.ಬಿ ಹೆಲ್ಪ್ ಲೈನ್ ನಿಂತು ಮಾದರಿಯಾಗಿದೆ.
ಮಂಗಳೂರು ಹೆಲ್ತ್ ಕೇರ್ ಆಸ್ಪತ್ರೆಯ ಮೀಟಿಂಗ್ ಹಾಲ್ ನಲ್ಲಿ ಚೆಕ್ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಆರ್ಥಿಕ ಸಹಾಯ ನೀಡಿ ನೆರವಾದ ಬಾಂಧವರಿಗೆ ಕಿಶೋರ್ ಕುಲಾಲ್ ಕುಟುಂಬ ಧನ್ಯವಾದಗಳನ್ನು ಸಲ್ಲಿಸಿದೆ.
ಪಕ್ಕಲಡ್ಕ ದೀಕ್ಷಾ ಕುಲಾಲ್ ವಿದ್ಯಾಭ್ಯಾಸಕ್ಕೆ ಜಿ.ಎಸ್.ಬಿ ಹೆಲ್ಪ್ ಲೈನ್ ನೆರವು
Students corner
1 Min Read


