ಬಂಟ್ವಾಳ(ಮಾ.೦೬): ದಾವಣಗೆರೆಯಲ್ಲಿ ಈಚೆಗೆ ನಡೆದ ವಾಕ್ ಶ್ರವಣದೋಷವುಳ್ಳ ಮಕ್ಕಳ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಸರಕಾರಿ ಪ್ರೌಢಶಾಲೆಯ 8 ನೇ ತರಗತಿಯ ವಿದ್ಯಾಥಿ೯ನಿ ಯಶಸ್ವಿ ಕುಲಾಲ್ 15ರ ಹರೆಯದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಚೆಸ್ ಪಂದ್ಯಾಟದಲ್ಲೂ ಈಕೆ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು. ಪುತ್ತೂರು ಜೀನಿಯಸ್ ಚೆಸ್ ಸ್ಕೂಲ್ ನ ನಿರ್ದೇಶಕ ಸತ್ಯಪ್ರಸಾದ್ ಕೋಟೆ ಹಾಗೂ ಆಶಾ ಕಾವೇರಿ ಅವರು ಈಕೆಗೆ ತರಬೇತಿ ನೀಡಿದ್ದರು. ಯಶಸ್ವಿ ಅವರು ಕಡೇಶಿವಾಲಯ ತಿಮ್ಮಪ್ಪ .ಎಂ. ಕುಲಾಲ್ ಹಾಗೂ ಯಶೋದಾ ದಂಪತಿಯ ಸುಪುತ್ರಿಯಾಗಿದ್ದಾಳೆ.
ಚೆಸ್ ಪಂದ್ಯಾಟದಲ್ಲಿ ಯಶಸ್ವಿ ಕುಲಾಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ
Students corner
1 Min Read


