ಕುಲಾಲರು ಕುಂಬಾರರು ನಾವೆಲ್ಲ
ಮಣ್ಣಿನ ಕಲಾಕೃತಿ ಮಾಡೋ ಕುಲವೃತ್ತಿ ನಮದೆಲ್ಲ..
ದೀಪವ ಬೆಳಗಿಸಲು ಮಣ್ಣಿನ ದೀಪವ ತಯಾರು ಮಾಡಿರೋರು ನಾವೆಲ್ಲ..
ಆ ಮಣ್ಣಿನ ದೀಪವೇ ಇಂದು ಬೆಳಕು ಜಗಕೆಲ್ಲ..
ಆದರೆ ಇಂದು ಈ ಜಗವೆ ಮರೆತಿದೆ ನಮ್ಮನ್ನೆಲ್ಲ….
ಮಣ್ಣಿನ ರೊಟ್ಟಿಯ ಅಂಚು ಕಂಡು ಹುಡುಕಿದವರು ನಾವೆಲ್ಲ….
ಆ ಮಣ್ಣಿನ ಅಂಚಿನಲೆ ಮಾಡಿದ ರೊಟ್ಟಿಯ
ತಿಂದು ಬದುಕಿದರು ಜನರು ಹಿಂದೆಲ್ಲ..
ಆದರೆ ಆ ಜನರಿಗೆ ಬೇಡ ಇಂದು ನಾವೆಲ್ಲ …
ಯಾಕೆಂದರೆ…
ಆ ಮಣ್ಣಿನ ಕಲಾಕೃತಿ ಯಾರಿಗೂ ಇಂದು ಬೇಕಿಲ್ಲ..
ಬಂದಿದೇ ಇಂದು ಪಾಶ್ಚತ್ಯ ಸಂಸ್ಕೃತಿಗಳು ಜಗಕೆಲ್ಲ..
ಕಡಿಮೆ ಬೆಲೆಗೆ ಸಿಗುತಿದೆ ಚೈನ ಸಾಮಾಗ್ರಿಗಳು ಲೋಕಕ್ಕೆಲ್ಲ…
ಇದುವೇ ಎರಡು ಕಾರಣ ಅದಕೆಲ್ಲ……
-ಚಂದು ಕುಲಾಲ್, ವಗ್ಗ