ಈ ಹಣ ಎಲ್ಲರ ಬಳಿ ಸುಲಭವಾಗಿ ನಿಲ್ಲುವುದಿಲ್ಲ. ಕೆಲವರು ಮುಟ್ಟಿದ್ದೆಲ್ಲಾ ಚಿನ್ನವಾದರೆ, ಇನ್ನೂ ಕೆಲವರು ಮುಟ್ಟಿದ್ದೆಲ್ಲಾ ಮಣ್ಣು ಎಂಬಂತಾಗುತ್ತದೆ. ಎಷ್ಟೇ ಹಣ ಸಂಪಾದಿಸಿದರೂ ಕರಗಿ ಹೋಗುತ್ತದೆ..ಆದ್ರೆ ನಿಮಗೆ ಲಕ್ಷ್ಮಿಯನ್ನು ನಿಮ್ಮ ಮನೆಯಲ್ಲೇ ಉಳಿಯಬೇಕೇ ? ಅದೃಷ್ಟ ನಿಮ್ಮನ್ನು ಹಿಂಬಾಲಿಸಬೇಕೇ..? ಹಾಗಿದ್ದರೆ ಇಲ್ಲಿದೆ ಸುಲಭ ಮಾರ್ಗಗಳು..
ಹಣವಿಲ್ಲದೇ ಇಂದು ಜೀವನವನ್ನು ಕಟ್ಟಿಕೊಳ್ಳುವುದೇ ಕಷ್ಟಸಾಧ್ಯವಾಗಿದೆ. ಹಣವನ್ನು ಬಯಸದವರು ಯಾರಿದ್ದಾರೆ ಹೇಳಿ..ಹಿಂದೆಲ್ಲಾ ಹಣಕ್ಕಿಂತ ಮನುಷ್ಯನ ಗುಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಇಂದು ಹಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಯಾವ ಅರ್ಹತೆಯನ್ನು ಬಯಸದೇ ಕೇವಲ ಹಣವಿದ್ದರೆ ಸಾಕು ಎಂದು ಬಯಸುವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಆದರೆ ಈ ಹಣ ಎಲ್ಲರ ಬಳಿ ಸುಲಭವಾಗಿ ನಿಲ್ಲುವುದಿಲ್ಲ. ಕೆಲವರು ಮುಟ್ಟಿದ್ದೆಲ್ಲಾ ಚಿನ್ನವಾದರೆ, ಇನ್ನೂ ಕೆಲವರು ಮುಟ್ಟಿದ್ದೆಲ್ಲಾ ಮಣ್ಣು ಎಂಬಂತಾಗುತ್ತದೆ. ಎಷ್ಟೇ ಹಣ ಸಂಪಾದಿಸಿದರೂ ಕರಗಿ ಹೋಗುತ್ತದೆ..ಆದ್ರೆ ನಿಮಗೆ ಲಕ್ಷ್ಮಿಯನ್ನು ನಿಮ್ಮ ಮನೆಯಲ್ಲೇ ಉಳಿಯಬೇಕೇ ? ಅದೃಷ್ಟ ನಿಮ್ಮನ್ನು ಹಿಂಬಾಲಿಸಬೇಕೇ..? ಹಾಗಿದ್ದರೆ ಇಲ್ಲಿದೆ ಸುಲಭ ಮಾರ್ಗಗಳು.
* ನಿಮ್ಮ ಮನೆಗೆ ಬಂದ ಹಣ ಉಳಿಸಿಕೊಳ್ಳುವುದು ಹಾಗೂ ಹೆಚ್ಚಾಗಿ ಹಣ ಬರುವಂತಾಗಲು ಮನೆಯ ಪೂಜಾಗೃಹದಲ್ಲಿ ಒಂದು ಲಕ್ಷ್ಮಿ ದೇವಿಯ ವಿಗ್ರಹವಿರಬೇಕು. ಪ್ರತಿ ದಿನ ಪೂಜೆ ಸಲ್ಲಿಸುತ್ತಿದ್ದರೆ ಮನೆಗೆ ಹೆಚ್ಚು ಹಣ ಹರಿದುಬರುತ್ತದೆ ಹಾಗೂ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
* ಮನೆಯ ಯಾವುದೇ ಭಾಗದಲ್ಲಿ ವಾಸ್ತು ದೇವರ ವಿಗ್ರಹ ಅಥವಾ ಚಿತ್ರವಿರಬೇಕು. ಇದರಿಂದ ಮನೆಯಲ್ಲಿ ವಾಸ್ತುದೋಷ ಸರಿಹೋಗುತ್ತದೆ. ಹಾಗೂ ಮನೆಯಲ್ಲಿ ಉತ್ತಮ ಬಾಂಧವ್ಯ ಏರ್ಪಡುತ್ತದೆ.
* ಮನೆಯಲ್ಲಿ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಕೆ ಇರಿಸಿ. ಇದರಿಂದ ಮನೆಗೆ ಆಗಮಿಸಿದ ಹಣ ಮನೆಯಲ್ಲಿಯೇ ಉಳಿಯುತ್ತದೆ.
* ಮನೆಯ ಹೂಸ್ತಿಲು ದಾಟಿ ಒಳಗೆ ಕಾಲಿಡುತ್ತಿದ್ದಂತೆ ಕಣ್ಣಿಗೆ ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ, ಕುಬೇರ ಒಂದೇ ಫೊಟೋದಲ್ಲಿ ಇರುವಂತೆ ಇರಿಸಿ. ಹಾಗೂ ಸ್ವಸ್ತಿಕ್ ಚಿಹ್ನೆಯ ಫೊಟೋ ಇದ್ದರೆ ಉತ್ತಮ. ಇದರಿಂದ ಮನೆಗೆ ಹಣ ಆಗಮಿಸುತ್ತದೆ.
* ಗ್ಯಾಸ್ ಒಲೆಯನ್ನು ಉತ್ತರ ದಿಕ್ಕಿನಲ್ಲಿ ಇಡಿ ಇದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ.
* ಪೊರಕೆ, ಪಾದರಕ್ಷೆ, ನೆಲ ಒರೆಸುವ ಬಟ್ಟೆ ಇವುಗಳನ್ನು ಮನೆಯ ಬಾಗಿಲಿನ ಎದುರಿಗೆ ಇಡಬೇಡಿ. ಇದರಿಂದ ಮನೆಗೆ ಬರುವ ಹಣಕ್ಕೆ ಅಡ್ಡಿಯಾಗುತ್ತದೆ.
* ಮನೆಯ ದಕ್ಷಿಣ ಭಾಗದಲ್ಲಿ ಹನುಮಂತನ ಪಂಚರೂಪದ ವಿಗ್ರಹವನ್ನು ಇಟ್ಟು ಪ್ರತಿದಿನ ಪೂಜಿಸಿ. ಇದರಿಂದ ಮನೆಯ ಅಭಿವೃದ್ಧಿಗೆ ಹಾಗೂ ಹಣದ ಒಳ ಹರಿವಿಗೆ ಅಡ್ಡಿಯಾಗುತ್ತಿದ್ದ ತಡೆಗಳು ನಿವಾರಣೆಯಾಗುತ್ತದೆ.
ಹೀಗೆ ಸುಲಭೋಪಾಯಗಳನ್ನು ಅನುಸರಿಸುವ ಮೂಲಕ ಧನಲಕ್ಷ್ಮೀ ಮನೆಯಲ್ಲೇ ಇರುವಂತಾಗುತ್ತದೆ. ಹಾಗೂ ಕುಟುಂಬಸ್ಥರ ಅಭಿವೃದ್ಧಿಗೆ, ಮನೆಯಲ್ಲಿ ಶಾಂತಿ, ನೆಮ್ಮದಿ ಮನೆ ಮಾಡಲೂ ಕಾರಣವಾಗುತ್ತದೆ.