ಪಾಪ..ನನ್ನ ಆತ್ಮೀಯ ಗೆಳೆಯರೊಬ್ಬರು ದೂರದ ಗಲ್ಫ್ ರಾಷ್ಟ್ರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಲಕ್ಷಕ್ಕೂ ಮಿಕ್ಕಿ ತಿಂಗಳಿಗೆ ಸಂಬಂಳ ಉಂಟು. ತೀರಾ ಮೊನ್ನೆ ಹೆಣ್ಣು ನೋಡಲು ಊರಿಗೆ ಬಂದಿದ್ದರು.. ಹೆಣ್ಣು ನೋಡಲು ಹೋದರೆ ಕಾಲೇಜು ಕಲಿಯುತ್ತಿದ್ದ ಆ ವಯ್ಯಾರಿ ಒಂದೇ ಮಾತಿನಲ್ಲಿ ಅವರನ್ನು ತಿರಸ್ಕರಿಸಿಬಿಟ್ಟಳು. ‘ಯಾಕೆ ತಂಗ್ಯವ್ವ..ಲಕ್ಷ ಲಕ್ಷ ಎಣಿಸುವ ಸಂಬಳದ ಹುಡುಗ ಇಂವ. ಜೀವನ ಪೂರ್ತಿ ಕೂತು ಉಣ್ಣಬಹುದು. ಯಾಕೆ ರಿಜೆಕ್ಟ್ ಮಾಡಿದೆ’ ಕೇಳಿದಕ್ಕೆ ಅವಳು ಕೊಡುವ ಉತ್ತರ.. “ಹುಡುಗನ ಮಂಡೆ ಬೋಳಾಗಿದೆ. ಕೂದಲು ಉದುರಿದೆ. ಹೊಟ್ಟೆ ಮುಂದೆ ಬಂದಿದೆ. ನನ್ನ ಪ್ರೆಂಡ್ಸ್ ಎಲ್ಲ ನಗ್ತಾರೆ. ಸೋ ಇಂವ ನಂಗೆ ಬ್ಯಾಡ”
ಖಂಡಿತಾ ಕಾಲ ಬದಲಾಗಿ ಹೋಗಿದೆ. ಮೊದಲೆಲ್ಲ ಹುಡುಗ ಹುಡುಗಿಯನ್ನು ಒಪ್ಪುತ್ತಾನೋ ಇಲ್ಲವೂ ಅನ್ನುವುದಷ್ಟೆ ಮುಖ್ಯವಾಗುತಿತ್ತು. ಒಪ್ಪಿದರೆ ಮದುವೆ ಬ್ಯಾಂಡ್ ಊದುತಿದ್ದರು. ಅಪ್ಪಿ ತಪ್ಪಿ ಹುಡುಗಿಗೆ ಮಾತನಾಡಲು ಅವಕಾಶವೇ ಇರುತ್ತಿರಲಿಲ್ಲ.
ಆದರೆ ಇಗ ಕಾಲ ಎಷ್ಟು ಬದಲಾಗಿ ಹೋಯ್ತು ನೋಡಿ. ಈಗೆನಿದ್ದರು ಹುಡುಗಿಯರದ್ದೆ ಹವಾ..ಥೇಟ್ ಬೆಪ್ಪನ ಹಾಗೇ ಹುಡುಗರು ಅವರೆದುರು ತಲೆ ತಗ್ಗಿ ನಿಲ್ಲುವ ಕಾಲ ಬಂದಿದೆ.. ಅವಳು ಅಳೆದು ತೂಗಿ ಒಪ್ಪಿದರಷ್ಟೆ ಮುಂದಿನ ಮಾತುಕತೆ.
ಒಂದು ಮಾತು ಅರ್ಥ ಮಾಡಿಕೊಳ್ಳಿ ಹೆಣ್ಣುಮಕ್ಕಳೆ “ಎಲ್ಲ ಹುಡುಗರು ಶಾರೂಕ್, ಹೃತಿಕ್ ತರಹ ಇರಲ್ಲ. ಮನೆಯ ಜವಬ್ದಾರಿಯನ್ನು ಹೆಗಲಲ್ಲಿ ಹೊತ್ತು ಬಿಸಿಲು ಬೆಂಕಿಯೆನ್ನದೆ ದುಡಿಯ ಬೇಕಾದ ಜವಬ್ದಾರಿ ಗಂಡುಹುಡುಗನ ತಲೆಯ ಮೇಲೆ ಇರುತ್ತದೆ.. ದಿನಾ ಜಿಮ್ ಗೇ ಹೋಗಿ ಬಾಡಿ ಬಿಲ್ಡ್ ಮಡ್ತಾ ಕೊರೊಕೆ ಅವನಿಗೆ ಆಗಲ್ಲ. ಬದುಕಿಕೆ ಫಿಟ್ನೆಸ್ ಅಷ್ಟೆ ಮುಖ್ಯ ಅಲ್ಲ.
ಸೋ ಯಾವ ಹುಡುಗನ ಬಾಹ್ಯ ಸೌಂದರ್ಯ ಅಷ್ಟೆ ನೋಡಬೇಡಿ..ಅವನ ಅಂತರಂಗದೊಳಗಿನ ನಿಜವಾದ ಸೌಂದರ್ಯಕ್ಕೆ ಬೆಲೆ ಕೊಡಿ. ನಿಮ್ಮ ಬದುಕು ಹಸನಾದಿತು..
ಇದು ನನ್ನ ಅಮೂಲ್ಯ ಸಲಹೆ.
ಮಂಜುನಾಥ ಕುಲಾಲ್, ಹಿಲಿಯಾಣ