ಮಡಿಕೇರಿ: ಕೊಡಗು ಜಿಲ್ಲೆ ಸೋಮ ವಾರಪೇಟೆ ತಾಲ್ಲೂಕು ತೊರೆನೂರು ಗ್ರಾಮದ ಸಿದ್ದಲಿಂಗಾಪುರ– ಅರಶಿನಗುಪ್ಪೆಯಲ್ಲಿ ನಡೆದ ಪ್ರಾದೇಶಿಕ ಸಂಶೋಧನೆಯಲ್ಲಿ ಬೃಹತ್ ಶಿಲಾಯುಗ ಕಾಲದ ಮಡಕೆ–-ಕುಡಿಕೆಗಳು ಹಾಗೂ ನಿಲುವುಗಲ್ಲಿನ ಸಮಾಧಿಗಳು ಪತ್ತೆಯಾಗಿವೆ.
ಮಂಜುನಾಥ ದೇವಾಲಯ ಸಮಿತಿ, ಬೆಳ್ತಂಗಡಿಯ ಆರ್ಯ ಪ್ರತಿಷ್ಠಾನ, ಯೋಗೀಶ್ವರ ಸಿದ್ಧಮಠದ ಕೋರಿಕೆಯ ಮೇರೆಗೆ ಇತ್ತೀಚೆಗೆ ಶಿರ್ವದ ಮುಲ್ಕಿ ಸುಂದರ್ ರಾಮ್ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ವತಿಯಿಂದ ನಡೆದ ಸಂಶೋಧನೆಯಲ್ಲಿ ಸಮಾಧಿ ನೆಲೆಗಳು ಪತ್ತೆಯಾದವು ಎಂದು ವಿಭಾಗ ಮುಖ್ಯಸ್ಥ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.
ಬೃಹತ್ ಶಿಲಾಯುಗದ ಮಡಕೆಗಳು:
ಮಂಜುನಾಥ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಭೂಮಿ ಅಗೆಯು ವಾಗ ಸುಮಾರು 15 ಅಡಿ ಆಳದಲ್ಲಿ ವಿವಿಧ ರೀತಿಯ ಮಡಕೆಗಳು ಪತ್ತೆಯಾ ಗಿವೆ. ಈ ಮಡಕೆಗಳು ರಚನೆ, ವಿನ್ಯಾಸ, ಬಣ್ಣ, ಗಾತ್ರ, ಆಕಾರದಲ್ಲಿ ಹೆಗ್ಗಡೆಹಳ್ಳಿಯ ಉತ್ಖನನದಲ್ಲಿ ದೊರೆತ ಮಡಕೆಗಳನ್ನು ಸಂಪೂರ್ಣವಾಗಿ ಹೋಲುತ್ತವೆ. ಕೆಂಪು ಬಣ್ಣದ ಮಡಕೆ ಗಳು, ತೆಳುಗೆಂಪು ಬಣ್ಣದ ಮಡಕೆಗಳು ಹಾಗೂ ಕೆಂಪು ಲೇಪಿತ ಮಡಕೆಗಳು, ಕಪ್ಪು ಬಣ್ಣದ ಮಡಕೆಗಳು ಕಂಡು ಬಂದಿವೆ.
ಅರಸಿನಗುಪ್ಪೆಯಲ್ಲಿ ದೊರೆತ ಮಡಕೆಗಳು ಹೆಗ್ಗಡೆಹಳ್ಳಿಯ ಉತ್ಖನನ ದಲ್ಲಿ ದೊರೆತ ಮಡಕೆಗಳನ್ನು ಸಂಪೂರ್ಣವಾಗಿ ಹೋಲುವುದರಿಂದ, ಹೆಗ್ಗಡೆಹಳ್ಳಿಯ ಕಾಲಮಾನವನ್ನೇ ಅರಸಿನಗುಪ್ಪೆ ಸಮಾಧಿಗಳಿಗೆ ಅನ್ವಯಿಸ ಬಹುದು. ಹೆಗ್ಗಡೆಹಳ್ಳಿ ಬೃಹತ್ಶಿಲಾ ಯುಗದ ಸಮಾಧಿಗಳ ಕಾಲವನ್ನು ಕ್ರಿ.ಪೂ: 1200– 800 ಅಥವಾ ಕ್ರಿ.ಪೂ: 1000– 600 ಎಂದು ನಿರ್ಧರಿ ಸಲಾಗಿದೆ. ಅರಸಿನಗುಪ್ಪೆ ಸಮಾಧಿಗಳು ಸರಿ ಸಮಾರು ಇದೇ ಕಾಲಕ್ಕೆ ಸೇರಿದ ಸಮಾಧಿಗಳೆಂದು ಪರಿಗಣಿಸಬಹುದು.