ಮಂಗಳೂರು : ಈಗೀಗ ಡೀಜೆ ಅಬ್ಬರವಿಲ್ಲದ ಯಾವುದೇ ಕಾರ್ಯಕ್ರಮಗಳಿಲ್ಲ.., ಕಾಲ ಬದಲಾದಂತೆ ಮನುಷ್ಯನ ಅಭಿರುಚಿಗಳೂ ಬದಲಾಗುತ್ತಿವೆ.. ಇಂದಿನ ಯುವ ಪೀಳಿಗೆಯ ಮನಸ್ಥಿತಿಗೆ ತಕ್ಕಂತೆ ಯಾವುದೇ ತರಹದ ಕಾರ್ಯಕ್ರಮಗಳಿಗೆ ಅಬ್ಬರದ ಸಂಗೀತ ಒದಗಿಸುವ ಸಂಸ್ಥೆಯೊಂದನ್ನು ನಮ್ಮ ನಡುವಿನ ಯುವಕನೊಬ್ಬ ಆರಂಭಿಸಿದ್ದಾನೆ.
ಈತನ ಹೆಸರು ಪ್ರಸಾದ್ ಮಂಗಳೂರು. ಮೂಲತಃ ಮೂಡುಶೆಡ್ಡೆಯವನು. ಬಡತನದ ಬೇಗೆಯಲ್ಲಿ ಬೆಳೆದ ಈತ, ಸ್ವಾವಲಂಬಿಯಾಗಿ ಬದುಕಬೇಕೆಂಬ ಛಲದಿಂದ ಕುದ್ರೋಳಿ ಸಮೀಪ `ಡೀಜೆ ಲಾರಾ’ ಎಂಬ ಸಂಸ್ಥೆಯೊಂದನ್ನು ಆರಂಭಿಸಿ ಕಳೆದ ಆರೇಳು ವರ್ಷಗಳಿಂದ ಈ ಭಾಗದಲ್ಲಿ ಪ್ರಸಿದ್ಧನಾಗಿದ್ದಾನೆ.
ಪ್ರಸಾದ್ ಅವರ `ಡೀಜೆ ಲಾರಾ’ ಎಂಬ ಕನಸಿನ ಕೂಸು ಅವರ ಬದುಕನ್ನು ಬದಲಿಸಿದೆ. ಅವರಿಗೆ ಗುರುತನ್ನು ನೀಡಿದೆ. ಸಂಗೀತವನ್ನು ಕೇಳುತ್ತಲೇ ಬೆಳೆದ ಪ್ರಸಾದ್ ಚಿಕ್ಕ ವಯಸ್ಸಿನಲ್ಲೇ ಡಿ.ಜೆ. ಲೋಕದ ಬಾಗಿಲು ತಟ್ಟಿದ್ದಾರೆ. ಡಿ.ಜೆ. ಲೋಕದ ಪ್ರಾಥಮಿಕ ಪಾಠಗಳನ್ನು ಅವರು ಕಲಿತುಕೊಂಡ ಅವರಿಗೆ ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವಿದೆ.
`ಡಿ.ಜೆ.ಗಳು ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡಬೇಕು. ಬೇರೆ ಬೇರೆ ಜನಸಮೂಹದ ಅಭಿರುಚಿಗಳನ್ನು ಅರಿಯಬೇಕು. ಆಗಲೇ ಬೆಳೆಯಲು ಸಾಧ್ಯ’ ಎನ್ನುವ ಪ್ರಸಾದ್ ಅವರಿಗೆ ನಮ್ಮ ಬೆಂಬಲವಿದ್ದರೆ ಇನ್ನಷ್ಟು ಎತ್ತರಕ್ಕೆ ಬೆಳೆಯಬಲ್ಲರು. ನಿಮ್ಮ ಯಾವುದೇ ಕಾರ್ಯಕ್ರಮಗಳಿಗೆ ಡೀಜೆ ಸೌಂಡ್ ಬೇಕಿದ್ದರೆ ಪ್ರಸಾದ್ ಅವರ ಮೊಬೈಲ್ ಸಂಖ್ಯೆ : 9742302402 ಗೆ ಕರೆ ಮಾಡಿ..
ಡೀಜೆ ಲೋಕದ ಪ್ರಸಾದ!
talents
1 Min Read






