ಮುಂಬಯಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಮುಂಬಯಿಯ ಗೆಲಾಕ್ಟಿಕ್ ಯೂನಿವರ್ಸ್ ಇಂಡಿಯಾ ಎಂಬ ಮಾಡೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಗೆಲಾಕ್ಟಿಕ್ ಯುನಿವರ್ಸ್ ಇಂಡಿಯಾ (ಸೌತ್) -2026 ಕಿರೀಟವನ್ನು ಪೂರ್ವಿ ಕುಲಾಲ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಪೂರ್ವಿ ಕುಲಾಲ್ ಅವರು ಉಡುಪಿ ಹಿರಿಯಡ್ಕ ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಪೆರ್ಡೂರು ನಿವಾಸಿ ಏಕನಾಥ್ ಕುಲಾಲ್ ಮತ್ತು ಗಾಯತ್ರಿ ಕುಲಾಲ್ ದಂಪತಿಯ ಸುಪುತ್ರಿ. ಪೂರ್ವಿ ಅವರು ಈ ಹಿಂದೆ ನಡೆದಿದ್ದ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2025 ಸ್ಪರ್ಧೆಯಲ್ಲಿ ‘ಮಿಸ್ ಕ್ವೀನ್ ಕರಾವಳಿ ’ ಪ್ರಶಸ್ತಿ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ. ಮಿಸ್ ಟೀನ್ ಗೆಲಾಕ್ಟಿಕ್ ಯುನಿವರ್ಸ್ ಇಂಡಿಯಾ ಸ್ಪಧೆಯು ಜುಹೂನಲ್ಲಿರುವ `ಹೋಟೆಲ್ ಮುಂಬೈ ಹೌಸ್’ ಇಲ್ಲಿ ಜನವರಿ 11ರಂದು ನಡೆದಿದ್ದು ದೇಶದ ವಿವಿಧೆಡೆಯ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು.



