ಯಾವುದೋ ಐಪಿಎಲ್ ಮ್ಯಾಚ್ ಬಗ್ಗೆ, ರಾಜಕರಣಿಗಳ ನಿದ್ರೆ ಬಗ್ಗೆ, ಕೆಟ್ಟ ಇಸಂಗಳ ಬಗ್ಗೆ, ಸನ್ನಿ ಲಿಯೋನ್ ಸಿನಿಮಾದ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ನಮಗೆ ನಮ್ಮದೇ ಮನೆಯ ಕೃಷಿ ಬಗ್ಗೆ ಮಾತನಾಡಬೇಕು ಎಂದು ಅನಿಸುವುದೇ ಇಲ್ಲ. ಮೀಸೆ ಹಣ್ಣಾದ ಕೂದಲು ನೆರೆತ ಅಪ್ಪ ಅವ್ವೆ ಗೆದ್ದೆ ಕೆಲಸಗಳಿಗೆ ಜನ ಸಿಗದೆ ಗಡಿಬಿಡಿಲಿ ಒಡಾಡುತ್ತಿದ್ದರೆ ನಾವು ವಾಟ್ಸಪ್ ಸ್ಟೇಟಸ್ ಚೇಂಜ್ ಮಾಡುವುತ್ತಾ ಕೂತಿರುತ್ತೇವೆ. ಹೀಗಾದರೆ ಕೃಷಿ ಇನ್ನೆಂತು ಸಾಗೀತು ? ಇನ್ನೆಷ್ಟು ದಿನ ಸಾಗೀತು !?
ಹೇಗ್ರಿ ಇನ್ನೂ ಭತ್ತದ ಕೃಷಿ ಮಾಡಲಿ? ನೇಜಿ ಮಾಡಲು ಹೆಂಗಸರು ಸಿಗದೆ, ಗೆದ್ದೆ ಕೆಲಸ ಮಾಡಲು ಗಂಡಸರು ಸಿಗದೆ, ಫಲವತ್ತಾದ ಹಟ್ಟಿ ಗೊಬ್ಬರ ಇರದೆ, ಸೊಂಪಾಗಿ ಬೆಳೆದ ನೇಜಿ ಸಿಗದೆ ಈ ವರ್ಷ ಸಾಗುವಳಿ ಮಾಡಲು ಅಲ್ಪಸ್ವಲ್ಪ ಕೃಷಿ ಭೂಮಿ ಇರುವ ಹಳ್ಳಿಗರಾದ ನಾವೆಲ್ಲ ಕಷ್ಟ ಪಟ್ಟ ಸ್ಥಿತಿ ಉಂಟಲ್ಲ..ನಮ್ಮ ಶತ್ರುಗಳಿಗೂ ಬೇಡ ಮಹರಾಯ್ರೆ!
ಯಾಕಿಂತಹ ಸ್ಥಿತಿ ಕರಾವಳಿಯ ಭತ್ತದ ಕೃಷಿಗೆ ಬಂದೀತು?!!
ಖಂಡಿತಾ ಕರಾವಳಿ ಕರ್ನಾಟಕದ ಸುತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿದ್ದೀರಾ? ಚಿನ್ನದ ಬೆಳೆ ತಂದು ಕೊಡುತ್ತಿದ್ದ ಭತ್ತದ ಗೆದ್ದೆಗಳೆಲ್ಲ ಇವತ್ತು ಸಾಲು ಸಾಲು ಹಡೀಲು ಬಿಳುತ್ತಿದೆ. ಉತ್ತಲು-ಬಿತ್ತಲು ಜನಸಿಗದೆ, ಕಟಾವಿಗೆ ಆಳುಗಳಿಲ್ಲದೆ ‘ಸಾಕಪ್ಪ ಈ ಕೃಷಿ ಅದ್ವಾನ’ ಎಂದು ಒರಲುವ ಸ್ಥಿತಿಗೆ ರೈತ ಬಂದು ನಿಂತಿದ್ದಾನೆ. ಹೀಗೆ ಎಲ್ಲರು ಕೃಷಿಯಿಂದ ವಿಮುಖರಾಗುತ್ತ ಹೋದರೆ ನಾವೇನು ತಿನ್ನಲಿ? ಚೀನದಿಂದ ಬಂದ ಪ್ಲಾಸ್ಟಿಕ್ ಅಕ್ಕಿ ತಿನ್ನಲೋ, ಪಿಜ್ಜಾ, ಬರ್ಗರ್ ತಿಂದು ಐವತ್ತಕ್ಕೆ ಗೊಟಕ್ಕ್ ಎನ್ನಲೋ..?
ಖಂಡಿತಾ ಸರಕಾರಗಳು, ವಿಜ್ಞಾನಿಗಳು ಎಷ್ಟೇ ಕೂಗಿಕೊಂಡರು, ಹೊಸ ನಮೂನೆಯ ಯೋಜನೆಗಳನ್ನು ತಂದರೂ ಕರಾವಳಿಯಲ್ಲಿ ಕೃಷಿ ಮಾತ್ರ ವಿನಾಶದ ಅಂಚಿಗೆ ಬಂದು ನಿಂತಿದೆ.. ಎಲ್ಲೋ ಅರವತ್ತು ದಾಟಿದ ಗಂಡಸರು ಹಾರೆ ಹಿಡಿದು ‘ಹೊದ್ದು’ ಕಡಿಯುತ್ತಿದ್ದಾರೆ. ಅರವತ್ತು ದಾಟಿದ ಹೆಂಗಸರು ಮಾತ್ರ ಗೊರಬಿನಡಿ ಬಾಗಿದ ಬೆನ್ನಿನ ಮೇಲೆ ಕೈ ಊರಿ ನೇಜಿ ನೆಡುತ್ತಿದ್ದಾರೆ? ಅವರ ಕಾಲ ಮುಗಿದ ಮೇಲೆ ಈ ಕೃಷಿ ಕೈಂಕರ್ಯಗಳನ್ನು ಮುನ್ನಡೆಸುವವರು ಯಾರು?ಯಾರು? ಯಾರ ಬಳಿಯೂ ಉತ್ತರವಿದ್ದಂತಿಲ್ಲ.!!
ಹಳ್ಳಿಯಲ್ಲಿ ಯಾವ ಮನೆಯ ಹಿರಿಯರನ್ನು ಪ್ರಶ್ನಿಸಿ ನೋಡಿ..’ನಾವು ಈ ಹಾಳು ಕೃಷಿಯಲ್ಲಿ ಒದ್ದಾಡಿದ್ದು ಸಾಕು, ನಮ್ಮ ಮಗ ಯಾ ಮಗಳು ಇಂಜಿನಿಯರ್ ಆಗಿ ಎಸಿ ರೂಮಿನಲ್ಲಿ ಕುಳಿತು ಲಕ್ಷ ಲಕ್ಷ ಎಣಿಸಲಿ ಎನ್ನುತ್ತಾರೆ. ಹಾಗಾಗಿಯೇ ಮನೆಗೊಬ್ಬ ಡಾಕ್ಟರ್, ಇಂಜಿನಿಯರ್ ಗಳು ಇವತ್ತು ಸಾಲಾಗಿ ಸೃಷ್ಟಿಯಾಗಿದ್ದಾರೆ. ಅವರ ಸಂಬಂಳ ಮಾತ್ರ ಎಷ್ಟೆಂದು ಕೇಳಬೇಡಿ.. ಹೇಳಲು ನಾಚಿಕೆಯಾದಿತು.!
‘ನನ್ನ ಮಗಳು ಗೆದ್ದೆಗೆ ಇಳಿದರೆ ಅವಳ ಕಾಲ್ಗೆಜ್ಜೆ ಮಣ್ಣಾದಿತು, ನನ್ನ ಮಗನಿಗೆ ಹಾರೆ ಹಿಡಿಸಿದರೆ ಬೆನ್ನು ನೋವು ಬಂದಿತು’ ಎಂಬ ‘ಅತೀ ಕೊಂಗಾಟ’ದಲ್ಲೆ ಮನೆಯ ಹಿರಿಯರು ಯುವ ಮನಸ್ಸುಗಳನ್ನು ಕೃಷಿಯಿಂದ ವಿಮುಖರಾಗಿಸುತ್ತಿದ್ದಾರೆ. ಆಮೇಲೆ ಕೊನೆಗೊಂದಿನ ಅವರ ಕಣ್ಣೇದುರೇ ಅವರ ಕೃಷಿ ಭೂಮಿ ಹಾಳು ಬಿದ್ದು ತುಂಬೆ ಗಿಡ ಬೆಳೆದಿತು.;ಅವರು ಸತ್ತಾಗ ಸುಡಲು ಜಾಗವು ಸಿಗದಷ್ಟೂ!!
ಕಳೆದ ಕಾರ್ತೇಲ್ ತಿಂಗಳು ಮತ್ತು ಈಗಿನ ಆಷಾಢ ಕೃಷಿ ಕೆಲಸಗಳ ಬಿಸಿ ಶೆಡ್ಯೂಲ್ ದಿನಗಳು. ಯಾವುದೋ ಐಪಿಎಲ್ ಮ್ಯಾಚ್ ಬಗ್ಗೆ, ರಾಜಕರಣಿಗಳ ನಿದ್ರೆ ಬಗ್ಗೆ, ಕೆಟ್ಟ ಇಸಂಗಳ ಬಗ್ಗೆ, ಸನ್ನಿ ಲಿಯೋನ್ ಸಿನಿಮಾದ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ನಮಗೆ ನಮ್ಮದೇ ಮನೆಯ ಕೃಷಿ ಬಗ್ಗೆ ಮಾತನಾಡಬೇಕು ಎಂದು ಅನಿಸುವುದೇ ಇಲ್ಲ. ಮೀಸೆ ಹಣ್ಣಾದ ಕೂದಲು ನೆರೆತ ಅಪ್ಪ ಅವ್ವೆ ಗೆದ್ದೆ ಕೆಲಸಗಳಿಗೆ ಜನ ಸಿಗದೆ ಗಡಿಬಿಡಿಲಿ ಒಡಾಡುತ್ತಿದ್ದರೆ ನಾವು ವಾಟ್ಸಪ್ ಸ್ಟೇಟಸ್ ಚೇಂಜ್ ಮಾಡುವುತ್ತಾ ಕೂತಿರುತ್ತೇವೆ. ಹೀಗಾದರೆ ಕೃಷಿ ಇನ್ನೆಂತು ಸಾಗಿತು. ಇನ್ನೆಷ್ಟು ದಿನ ಸಾಗಿತು!?
ಧರ್ಮಸ್ಥಳದಲ್ಲಿ ಹಿಂದೊಮ್ಮೆ ಕೃಷಿ ಮೇಳ ನೆಡೆದಿತ್ತಂತೆ. ಒಬ್ಬಳು ಕಾಲೇಜು ಕನ್ಯೆ ಅಲ್ಲಿಗೆ ಬಂದಿದ್ದಳು. ಬಂದವಳು ಅಲ್ಲಿ ಸಾಲಾಗಿ ಇಟ್ಟಿರುವ ಅಕ್ಕಿ ಮುಡಿಯನ್ನು ನೋಡಿದವಳು ಬೆರಗಾದಳು..ಬೆರಗಾಗಿ ಅಪ್ಪನ ಬಳಿ ಕೇಳಿದಳು..”ಪಪ್ಪಾ..ಪಪ್ಪಾ..ಇಷ್ಟು ದೊಡ್ಡ ಕಾಯಿ ಯಾವ ಮರದಲ್ಲಿ ಆಗುವುದು, ಇದರ ಚೊಟ್ಟೆ ಕಾಣಿಸ್ತಾ ಇಲ್ಲ”!!
ಕೃಷಿಯಿಂದ ಇವತ್ತಿನ ಯುವಕರೆಷ್ಟು ದೂರ ಹೋಗಿದ್ದಾರೆ ಎನ್ನುವ ಕ್ರೂರ ನೋವಿನ ವಾಸ್ತವಕ್ಕೆ ಇದು ಕೈಗನ್ನಡಿ..ಯಾರನ್ನೂ ದೂರಲಿ???!
–ಮಂಜುನಾಥ್ ಹಿಲಿಯಾಣ.