ಹೌದು. ಇವರು ಅಂತಿಂತ ಪಂಡಿತನಲ್ಲ. ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕ. ವನೌಷಧಿಯಲ್ಲಿ ಆತ ಮಾಡಿದ ಸಾಧನೆ ಇವರನ್ನು ಹಳ್ಳಿಯಿಂದ ದಿಲ್ಲಿಗೆ ಕರೆದೊಯ್ದಿತ್ತು. ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸುವ ಭಾಗ್ಯ ಪಡೆದ ಈ ಹಳ್ಳಿಹೈದನಿಗೆ, ಇಂದು ಕೂರಲು ಸೂರಿಲ್ಲದ ಸಂಕಟ. ಪ್ರಶಸ್ತಿ ಸನ್ಮಾನಗಳ ಮಹಾಪೂರವೇ ಆತನ ಪಾಲಿಗೆ ಒಲಿದರೂ, ಒಂದೊತ್ತು ಊಟಕ್ಕೆ ತತ್ವಾರವಿರುವ ಆತನ ಬದುಕಿನ ಕಥೆಯತ್ತ ಯಾರ ಚಿತ್ತವೂ ಹಾಯುತ್ತಿಲ್ಲ.
ಹೆಸರು ಕುಂಜಿರ ಮೂಲ್ಯ. ವಯಸ್ಸು ಸುಮಾರು 85. ತಾಲೂಕಿನ ಮಾಳ ಗ್ರಾಮದ ಇಂದಿರಾ ನಗರದ ಐದು ಸೆಂಟ್ಸ್ ನಿವಾಸಿ. ಅಲ್ಲಿ ಸಂಪೂರ್ಣ ಜೀರ್ಣಾವಸ್ಥೆಯಲ್ಲಿರುವ ಮನೆ, ಹರಕಲು ಬಟ್ಟೆ, ಪಾರಂಪರಿಕ ನಾಟಿ ಔಷಧಿ ಚಿಕಿತ್ಸೆಯನ್ನು ನೀಡುತ್ತಾ ಬಂದಿರುವ ಕುಂಜಿಯ ಮೂಲ್ಯರ ಪ್ರಸ್ತುತ ಬದುಕಿನ ಸ್ಥಿತಿ ಧನ್ವಂತರಿಗೇ ಪ್ರೀತಿ.
ಹೇಳಿಕೊಳ್ಳಲು ಆರು ಮಕ್ಕಳಿದ್ದಾರೆ. ಅದರಲ್ಲಿ ನಾಲ್ವರು ಜನ ಗಂಡು ಮಕ್ಕಳು ಮದುವೆಯಾದ ಬಳಿಕ ಮನೆಯಿಂದ ದೂರವಾಗಿದ್ದಾರೆ. ಇರುವ ಎರಡು ಹೆಣ್ಣು ಮಕ್ಕಳಲ್ಲಿ ಒಬ್ಬಳು ಮಾನಸಿಕ ಅಸ್ವಸ್ಥೆ, ಆಕೆಯನ್ನು ಕಳಸದ ಆಶ್ರಮವೊಂದಕ್ಕೆ ಸೇರಿಸಿ ಆಕೆಯ ಖರ್ಚನ್ನು ಭರಿಸುವ ಜವಾಬ್ದಾರಿ ಈ ಮುದಿ ಜೀವಕ್ಕಿದ್ದರೆ, ಹತ್ತಿರವಿದ್ದ ಹೆಣ್ಣು ಮಗಳು ಗಂಡನಿಂದ ದೂರವಾಗಿ ಕೂಲಿಕೆಲಸ ನಿರ್ವಹಿಸುತ್ತಾ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಹಳೆಯ ಕಾಲದ ಮನೆ, ಮಣ್ಣಿನ ಗೋಡೆ ಇಂದೋ ನಾಳೆಯೋ..? ಎನ್ನುವ ಸ್ಥಿತಿಯಲ್ಲಿದೆ.
ಆಧುನಿಕ ಚಿಕಿತ್ಸೆಯಿಂದ ಗುಣಮುಖವಾಗದ ರೋಗಗಳಿಗೂ ಚಿಕಿತ್ಸೆ ನೀಡಿ ಯಶಸ್ಸು ಕಂಡವರು ಕುಂಜಿರ ಮೂಲ್ಯರು.
ಒಲಿದು ಬಂದ ಪ್ರಶಸ್ತಿಗಳ ಸರಮಾಲೆ : ಕುಂಜಿರ ಮೂಲ್ಯರಿಗೆ ನಾಟಿ ಔಷಧಿ ತನ್ನ ತಂದೆಯಿಂದ ಬಂದ ಬಳುವಳಿ. ಸುಮಾರು 500 ವಿವಿಧ ಔಷಧಿಗಳನ್ನು ತಯಾರಿಸುತ್ತಾರೆ. ಅದರಲ್ಲಿ 300 ಕ್ಕೂ ಮಿಕ್ಕಿ ಮಾನವರಿಗೆ, 200 ಕ್ಕೂ ಮಿಕ್ಕಿ ಜಾನುವಾರುಗಳಿಗೆ ನೀಡುವ ಔಷಧಿಗಳಿವೆ. ಫಶ್ಚಿಮಘಟ್ಟದ ತಪ್ಪಲಲ್ಲಿರುವ ಅವರು, ವಿವಿಧ ಔಷಧೀಯ ಸಸ್ಯಗಳ ಬೇರುಗಳನ್ನು ಮೂರು ಕಿ.ಮೀ ದೂರವಿರುವ ದಟ್ಟ ಕಾನನಕ್ಕೆ ಕ್ರಮಿಸಿ ತರುತ್ತಾರೆ.
ವಿಷ ಜಂತು ಕಡಿತ, ಸರ್ಪಸುತ್ತು, ಮೂಲವ್ಯಾಧಿ, ಸಕ್ಕರೆ ಕಾಯಿಲೆ, ಹೊಟ್ಟೆನೋವು, ಸ್ತ್ರೀರೋಗ, ವಾತ ಹೀಗೆ ಹತ್ತಾರು ರೋಗಗಳಿಗೆ ಉಪಶಮನ ನೀಡಿದ ಕೀರ್ತಿ ಅವರದ್ದು. ಆಧುನಿಕ ಚಿಕಿತ್ಸೆಯಿಂದ ಗುಣಮುಖವಾಗದ ರೋಗಗಳಿಗೂ ಚಿಕಿತ್ಸೆ ನೀಡಿ ಯಶಸ್ಸು ಕಂಡವರು ಅವರು. ಚಿಕಿತ್ಸೆ ಪಡೆದವರು ಸ್ವಇಚ್ಛೆಯಿಂದ ನೀಡಿದ ಒಂದಿಷ್ಟು ಗೌರವಧನದಿಂದ ಕುಂಜಿರ ಮೂಲ್ಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ವನೌಷಧಿ ಪಂಡಿತ: ಅವರ ಸಾಧನೆಯನ್ನು ಪರಿಗಣಿಸಿ ನವದೆಹಲಿಯಲ್ಲಿ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು. 2003ರಲ್ಲಿ ಚಿತ್ರದುರ್ಗದಲ್ಲಿ ನಡೆದ ಸಮಾರಂಭದಲ್ಲಿ ನವದೆಹಲಿ ರಾಷ್ಟ್ರೀಯ ಔಷಧಿ ಸಸ್ಯಗಳ ಮಂಡಳಿಯಿಂದ ಕೊಡ ಮಾಡುವ ಪ್ರಪ್ರಥಮ ಬಾರಿಯ “ವನೌಷಧಿ ಪಂಡಿತ-2003” ಪಾರಂಪರಿಕ ವೈದ್ಯ ಎಂಬ ರಾಜ್ಯ ಪ್ರಶಸ್ತಿಯನ್ನು ತರಳಬಾಳು ಬೃಹನ್ಮಠ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ವೀಕರಿಸಿದ್ದಾರೆ.
ಅನೇಕ ಸಂಘ ಸಂಸ್ಥೆಗಳು ಕುಂಜಿರ ಮೂಲ್ಯರನ್ನು ಸನ್ಮಾನಿಸಿದ್ದು, ಒಟ್ಟು 30ಕ್ಕೂ ಮಿಕ್ಕಿದ ಸನ್ಮಾನಗಳು, ಪುರಸ್ಕಾರಗಳು ಅವರಿಗೆ ಲಭಿಸಿದೆ. ಅವರಿಂದ ಅನುಭವ ಪಡೆದುಕೊಳ್ಳಲು ಕಲ್ಕತ್ತಾ, ಗುಜರಾತ್ ಮತ್ತು ಕೊರಿಯಾದಂತಹ ವಿದೇಶೀ ಸಂಶೋಧಕರ ತಂಡಗಳು ಮಾಳಕ್ಕಾಗಮಿಸಿ, ಅವರಿಂದ ಗಿಡಮೂಲಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಅವರೊಂದಿಗೆ ವಿವಿಧ ಗಿಡಮೂಲಿಕೆಗಳನ್ನು ಅರಸಿಕೊಂಡು ಪಶ್ಚಿಮಘಟ್ಟವನ್ನು ತಿರುಗಾಡಿದ್ದಾರೆ. ಉಚಿತ ವನೌಷಧಿ ನೀಡುವ ಕುರಿತು ಸರಕಾರದ ಪಿಯುಸಿ ಉಪಪಠ್ಯಪುಸ್ತಕದಲ್ಲಿ ಬಂದಿರುವ ಕುಂಜಿರ ಮೂಲ್ಯರ ಉಲ್ಲೇಖವು ನಾಟಿ ಔಷಧಿ ವೈದ್ಯನಾಗಿ ನಡೆಸಿದ ಸೇವೆಗೆ ಸಂದ ಗೌರವವಲ್ಲವೇ.
ರಾಷ್ಟ್ರ ಪ್ರಶಸ್ತಿಯ ಜತೆ 10 ಸಾವಿರ ನಗದು ಬಹುಮಾನ ದೊರೆತಿದ್ದು, ಅದು ದೆಹಲಿ ಪ್ರಯಾಣಕ್ಕಷ್ಟೇ ಸೀಮಿತವಾಗಿ ಹೋಗಿದ್ದರೆ, ಇತರ ಸನ್ಮಾನಗಳಿಂದ ದೊರೆತಿರುವ ನಗದು ಬಹಳಷ್ಟು ಕಡಿಮೆ ಎನ್ನುತ್ತಾರೆ ಕುಂಜಿರ ಮೂಲ್ಯ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ದೇಶದ ರಾಜಧಾನಿಯನ್ನು ಕಾಣುವ ಅಪೂರ್ವ ಅವಕಾಶ ದೊರೆತಿರುವುದು ನನ್ನ ಭಾಗ್ಯ ಎನ್ನುತ್ತಾರಷ್ಟೇ. ಆದರೆ ಕುಳಿತುಕೊಳ್ಳಲೊಂದು ಸೂರಿನ ವ್ಯವಸ್ಥೆಯಾಗುತ್ತಿದ್ದರೆ, ಸಾಯುವ ಮುನ್ನ ಸಂತಸವನ್ನು ಕಾಣುತ್ತಿದ್ದೆ ಎನ್ನುವ ಹಂಬಲ ಅವರದ್ದು.
ಸಹಾಯ ಮಾಡುವ ದಾನಿಗಳಿದ್ದರೆ ಮಾಳ ಕಾರ್ಪೋರೇಶನ್ ಬ್ಯಾಂಕಿನಲ್ಲಿರುವ ಅವರ ಪುತ್ರಿ ಶಾಂತ ಮೂಲ್ಯರ ಖಾತೆ ನಂಬರು 0351/SB/01/003544 ಖಾತೆಗೆ ಹಣ ನೀಡಿ ಸಹಕರಿಸುವಂತೆ ಕೋರಲಾಗಿದೆ.
ವಿಳಾಸ : ಕುಂಜಿರ ಮೂಲ್ಯ, ಇಂದಿರಾನಗರ ಫೈವ್ ಸೆನ್ಸ್, ಮಾಳ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, 574122.
—————————————————————————————————————-
TRADITIONAL HERBAL HEALER : KUNJIRA MOOLYA
Kunjira Moolya (85) hails from Mala village, Karkala taluk in Udupi district of Karnataka. His father, Angara Mulya was a well known herbal healer (Naati vaidya) during his time and he used to treat cattle and human diseases. Kunjira Moolya learnt the skill of herbal medicine from his father. As long his father was alive, he never treated any ailments, as per the family tradition. But, he assisted his father in the collection of medicinal herbs from the nearby forest patches and also in the preparation of medicines. For the last 30 years, after the death of his father, Kunjira Moolya has been practicing herbal medicine in Mala village.
Human diseases Some of the major diseases which affect human beings which he treats are: Malaria, Typhoid, Rheumatism, Jaundice, Herpes, Mumps, Vomiting & Diarrhoea, Diabetes, Sores, Piles, Asthma, Epilepsy, irregular mensus and White discharge.
Poisonous animal bites
He has also got successful antidotes for Cobra bites, as well as other Snake bites (Viper, Krait), Scorpion bites, Spider bites and Bee/Wasp bites.
Cattle diseases In cattle he treats immobility of limbs, Bloating of stomach or stomach pain, Diarrhoea with mucous and blood, worm infestation in wounds, loosening of teeth disease and limb fractures.
An extraordinary case
Kunjira Moolya recollects one of the rare cases that he dealt with in 1985. Once all six members of the family of Obayya Gowda fell sick after consuming mushrooms collected from a neighbouring ‘Bhogi haadi’ (Hopea plantation). Presumably they must have cooked one of the varieties of poisonous mushrooms and consumed it along with their night meal. One by one, the members of the family started suffering from vomiting and dysentery and by early morning their condition was critical. Luckily for them, their neighbours got to know of their plight and called Kunjira Moolya for treatment, since there were no hospitals or clinics in the neighbourhood. After studying the situation, Kunjira went to the nearby forest patch and collected four medicinal herbs and made a decoction and gave them and this saved a family which was practically on the verge of death.
A Parataxonomist too
Besides being an herbal healer, Kunjira Moolya also served as a parataxonomist in the Biodiversity Conservation Prioritization Project (BCPP) of WWF-India, which led to the preparation of India’s first People’s Biodiversity Register (PBR) of Mala village panchayath. The ongoing People’s Ecosystem Assessment Project (PEAP) of the Ministry of Environment and Forests (MoEF), Government of India, under the guidance of Prof. Madhav Gadgil of the Centre for Ecological Sciences, Indian Institute of Science, Bangalore, owes a great deal to Kunjira Moolya for his valuable contributions towards the documentation of traditional knowledge and biodiversity of the Western Ghats of the Mala village Panchayath region. Kunjira Moolya commands respect for his knowledge not only of medicinal plants and herbal medicine, but also of other plant and animal taxa covering over 800 species.
Recognition
Kunjira Moolya was felicitated by the Bhuvanendra Nature Club-India (WWF-India), the Nature Club of Sri Bhuvanendra College, Karkala, in 1996 along with the ‘Pashu vaidya’, Kadari Srinivasa Prabhu (another cattle herbal healer of Mala), during the 42nd Wildlife Week Celebrations-cum-Salim Ali Birth Centenary Seminar on ‘Conservation of Biodiversity of Wetlands’. Jnanapeeta Awardee Padmabhushana Dr. Kota Shivarama Karanth, Deepak Sharma, Conservator, Wildlife North Circle, Shimoga, K. Amaranath Shetty, MLA of Moodbidri, were among the dignitaries who felicitated these traditional knowledge holders. Since then a number of organizations have felicitated him and he was also invited for the conferences of the Naati vaidyas in several places including the one state level conference recently held in BAIF, Tiptur where he was felicitated. New Delhi’s ‘National Board of Medicinal Plants’ has recently awarded ‘Vanaoushada Pandit- 2003’ award to Kunjira Moolya. This award includes a bronze idol of Dhanvantri, a citation and a cash award of Rs. 10,000.
Future worries
Kunjira Moolya is 85 years old now and what worries him most is that with his demise, his entire traditional knowledge which he has quite proudly preserved will also vanish. He tried to teach this methodology of herbal treatment to his youngest son, who was not enthusiastic about it and did not have the confidence for identifying and procuring the medicinal plants required for the preparation of these herbal medicines. One hopes that the extraordinary knowledge of this healer shall be documented and maintained for the benefit of future generations.
A healer par excellence Kunjira Moolya treats both human and cattle ailments. According to Kunjira Moolya, so far he has successfully treated over 5000 humans and an equal number of cattle during the last 30 years. With great pride he states that as on today no one has succumbed to death as a result of his treatment, although most of his patients happen to be terminal cases.