ಮಣ್ಣಿನಲ್ಲಿ ಮಡಕೆ ತಯಾರಿಸುವುದು ಒಂದು ಕಲೆ. ಹಳ್ಳಿಯಲ್ಲಿ ಬೆಳೆದವರು ಮಡಕೆ ತಯಾರಿಸುವುದನ್ನು ನೋಡಿರುತ್ತಾರೆ. ಆದರೆ ನಗರದಲ್ಲಿ ಬೆಳೆದವರಿಗೆ ಮಡಕೆ ತಯಾರಿಸುವ ಕಲೆ ನೋಡಿಯೂ ಗೊತ್ತಿರುವುದಿಲ್ಲ. ಮಾಡಿಯೂ ಗೊತ್ತಿರುವುದಿಲ್ಲ. ಗೊತ್ತಿರದಿದ್ದರೂ ತಿಳಿದುಕೊಳ್ಳುವ ಆಸಕ್ತಿ ಇದ್ದವರಿಗೆ ಒಂದು ವಿಶೇಷ ತಾಣವಿದೆ. ಅದರ ಹೆಸರು ಕ್ಲೇ ಸ್ಟೇಷನ್.
ಏನಿದು ಕ್ಲೇ ಸ್ಟೆಷನ್?
ಕ್ಲೇ ಸ್ಟೇಷನ್ ಒಂದು ಅಪರೂಪದ ತಾಣ. ಕಲೆಯನ್ನು ಆಸ್ವಾದಿಸುವವರಿಗೆ ಇಷ್ಟದ ತಾಣ. ಇಲ್ಲಿನ ವಿಶೇಷತೆ ಎಂದರೆ ಇದು ಮಣ್ಣಿನ ಲೋಕ. ಇಲ್ಲಿ ಮಣ್ಣಿನಿಂದಲೇ ಮಾಯಾಲೋಕ ಸೃಷ್ಟಿಸುತ್ತಾರೆ. ನಿಮಗೆ ಆಸಕ್ತಿ ಇದ್ದರೆ ಮಣ್ಣಿನಲ್ಲಿ ಮಡಕೆ ತಯಾರಿಸಬೇಕು ಎಂಬ ಆಸೆ ಇದ್ದರೆ ನೀವು ಬೇರೆ ಯೋಚನೆ ಮಾಡದೆ ಕ್ಲೇ ಸ್ಟೇಷನ್ಗೆ ಬಂದು ಬಿಡಬೇಕು. ನನಗೆ ಒಂದ್ಸಲ ಮಣ್ಣಿನ ಮಡಕೆ ತಯಾರಾಗುವುದು ನೋಡಬೇಕು ಅಂತ ಆಸೆ ಇರುವವರೂ ಇಲ್ಲಿಗೆ ಬರಬೇಕು. ಹಾಗಂತ ಇಲ್ಲಿ ಮಡಕೆ ಮಾತ್ರ ತಯಾರಿಸಲಾಗುತ್ತದೆ ಅಂತಂದುಕೊಳ್ಳಬಾರದು. ಮಣ್ಣಿನಲ್ಲಿ ಬೇರೆ ಬೇರೆ ಕಲಾಕೃತಿಗಳನ್ನು ತಯಾರಿಸಲಾಗುತ್ತದೆ. ತಯಾರಿಸುವುದನ್ನು ಕಲಿಸಿಕೊಡಲಾಗುತ್ತದೆ. ವಿಶೇಷತೆ ಎಂದರೆ ಯಾರಿಗಾದರೂ ಮನೆಯಲ್ಲೇ ಮಣ್ಣಿನಲ್ಲಿ ಕಲಾಕೃತಿ ತಯಾರಿಸುವ ಆಸಕ್ತಿ ಇದ್ದರೆ ಅದಕ್ಕೆ ಬೇಕಾದ ವಸ್ತುಗಳನ್ನು ಒದಗಿಸುತ್ತಾರೆ.
ಅದಲ್ಲದೇ ಇಲ್ಲಿ ಆಗಾಗ ಕ್ಲೇ ವರ್ಕ್ಶಾಪ್ ನಡೆಯುತ್ತಿರುತ್ತದೆ. ಮಕ್ಕಳಿಗೆ ಈ ಕಲೆಯಲ್ಲಿ ಆಸಕ್ತಿ ಇದ್ದರೆ ಈ ವರ್ಕ್ಶಾಪ್ಗೆ ಸೇರಿಸಬಹುದು. ಕ್ಲೇ ಸ್ಟೇಷನ್ಗೆ ಬಂದರೆ ನಿರಾಶರಾಗಿ ಹೋಗಬೇಕಾಗಿಲ್ಲ. ಇಲ್ಲಿ ಕಲಾಕೃತಿಗಳ ಪ್ರದರ್ಶನ ಇರುತ್ತದೆ. ನೀವು ಇವತ್ತು, ನಾಳೆ ಏನಾದರೂ ಕ್ಲೇ ಸ್ಟೇಷನ್ಗೆ ಹೋದರೆ ಆಸಕ್ತಿಕರ ವರ್ಕ್ಶಾಪ್ಗಳಲ್ಲಿ ಭಾಗವಹಿಸಬಹುದು.
ಎಲ್ಲಿ- ನಂ.1-ಸಿ, ಎರಡನೇ ಮಹಡಿ, 1ಡಿ ಮುಖ್ಯರಸ್ತೆ, 14 ಬಿ ಅಡ್ಡರಸ್ತೆ, ಎಚ್ಎಸ್ಆರ್ ಲೇಔಟ್, ಸೆಕ್ಟರ್ 6
ದೂ- 9535000629, 080 65462094