
ಮಂಗಳೂರು : ಇತ್ತೀಚೆಗೆ ಕುಂದಾಪುರದಲ್ಲಿ ಜರಗಿದ ರಾಜ್ಯಮಟ್ಟದ ಜ್ಯೂನಿಯರ್ ಮತ್ತು ಮಾಸ್ಟರ್ ಪವರ್ ಲಿಪ್ಟಿಂಗ್ ಸ್ಪರ್ಧೆಯ 59 ಕೆ.ಜಿ ವಿಭಾಗದಲ್ಲಿ ಗಣೇಶ್ ಕುಲಾಲ್ ಇವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರು ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ದಿ.ಶೇಖರ್ ಬಂಗೇರ ಇವರ ಶಿಷ್ಯರಾಗಿದ್ದಾರೆ.