ಉಡುಪಿ : ಪೇಜಾವರ ಶ್ರೀಗಳ ಪರ್ಯಾಯದ ಸಡಗರದ ನಡುವೆ ಸಿಂಡಿಕೇಟ್ ಬ್ಯಾಂಕ್ ಮತ್ತು ಮಣಿಪಾಲ ವಿ.ವಿ.ಯ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಶನ್ ಆಯೋಜಿಸಿದ ಸಿಂಡಿಕೇಟ್ ಬ್ಯಾಂಕ್ ಹಾಫ್ ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಕಾಂತಿಲಾಲ್ ದೇವರಾಮ್ ಕುಂಬಾರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿಯ ಮುಂಭಾಗದಲ್ಲಿ ಹಾಫ್ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಲಾಯಿತು ಮತ್ತು ಅಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಒಲಿಂಪಿಯನ್ ಅಶ್ವಿನಿ ನಾಚಪ್ಪ, ಶ್ರೀಲಂಕಾದ ಮಾಜಿ ಕ್ರಿಕೆಟಿಗ ರೋಶನ್ ಮಹಾನಾಮ ಪ್ರಮುಖ ಆಕರ್ಷಣೆಯಾಗಿದ್ದರು.
ಕಾಂತಿಲಾಲ್ ಅವರು ಟ್ರೋಫಿ ಮತ್ತು 50 ಸಾವಿರ ರೂ. ನಗದು ಪಡೆದರು. ಮತ್ತು ಮಹಿಳೆಯರಲ್ಲಿ ಆಳ್ವಾಸ್ ಕಾಲೇಜಿನ ಸೌಮ್ಯಾ ಕೆ. ಪ್ರಶಸ್ತಿ ಪಡೆದರೆ, ಆಳ್ವಾಸ್ನವರೇ ಆದ ಚೋಟಾಲಾಲ್ ಪಟೀಲ್ ಮತ್ತು ಶ್ರೇಯಾ ಎ. ದ್ವಿತೀಯ ಸ್ಥಾನ ಮತ್ತು 25 ಸಾವಿರ ರೂ. ನಗದು ಹಾಗೂ ಮೂರನೇ ಸ್ಥಾನ ಪಡೆದ ಶಿಜು ಸಿಪಿ ಮತ್ತು ಅಕ್ಷತಾ ಪಿಎಲ್ 10 ಸಾವಿರ ರೂ. ನಗದು ಪಡೆದರು.


