ಮಂಗಳೂರಿನ ನಾರಾಯಣ ಮೂಲ್ಯ ಅವರು ಇತ್ತೀಚೆಗೆ ಶಿವಮೊಗ್ಗದ ಜೆ ಎನ್ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್-೨೦೧೫ರ ೪೦ ವಯಸ್ಸಿನವರ ವಿಭಾಗದಲ್ಲಿ ೪೦೦ ಮೀಟರ್ ಮತ್ತು ೮೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ೧೫೦೦ ಮೀಟರ್ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಆ ಮೂಲಕ ಇವರು ೧೦೨೬ರ ಮಾರ್ಚ್ ತಿಂಗಳಲ್ಲಿ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಇವರು ಹಿಂದುಸ್ತಾನ್ ಪೆಟ್ರೋಲಿಯಂ ಮಂಗಳೂರು ಎಲ್ ಪಿಜಿ ಪ್ಲಾಂಟ್ ನ ಉದ್ಯೋಗಿಯಾಗಿದ್ದಾರೆ.
ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆ
sports
1 Min Read