ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕದ್ರಿ MAPS (Mangalore Academy of Professional Studies)ಕಾಲೇಜಿನ ವಿದ್ಯಾರ್ಥಿನಿ ವ್ರಶಾ ಅವರು ವಾಣಿಜ್ಯ ವಿಭಾಗದಲ್ಲಿ 99.67% ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ. ಅವರು ಒಟ್ಟು 598 ಅಂಕ ಪಡೆದಿದ್ದಾರೆ. ವ್ರಶಾ ಅವರು ಪೊಳಲಿ ಅಡ್ಡೂರು ನಿವಾಸಿ ಭೋಜ ಮೂಲ್ಯ ಹಾಗೂ ಸುಜಾತ ದಂಪತಿಯ ಸುಪುತ್ರಿ.


