ಮಂಗಳೂರು(ಅ.೨೩, ಕುಲಾಲ ವರ್ಲ್ಡ್ ಡಾಟ್ ಕಾಮ್) : ಮಂಗಳೂರಿನ ವಿಶ್ವಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವೈಭವೋಪೇತ ದಸರಾ ಶೋಭಾಯಾತ್ರೆಯಲ್ಲಿ ಕುಲಾಲೆರ್ ಕುಡ್ಲ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಪ್ರಸ್ತುತಪಡಿಸಿದ ‘ಭಕ್ತ ಕುಂಬಾರ’ ನೃತ್ಯರೂಪಕದ ಟ್ಯಾಬ್ಲೋ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಟ್ರಸ್ಟ್ ವತಿಯಿಂದ ಪ್ರಥಮ ಬಾರಿಗೆ ಶೋಭಾಯಾತ್ರೆಯಲ್ಲಿ ಪ್ರದರ್ಶಿಸಲಾದ ಈ ಸ್ತಬ್ಧಚಿತ್ರವು, ಮಹಾನ್ ಹರಿಭಕ್ತ ಗೋರ ಕುಂಬಾರನ ಅಪಾರ ಭಕ್ತಿ ಮತ್ತು ಶ್ರದ್ಧೆಯನ್ನು ಅತ್ಯಂತ ಮನಮುಟ್ಟುವಂತೆ ಅನಾವರಣಗೊಳಿಸಿತು. ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತಾದಿಗಳು ಹಾಗೂ ಸಾರ್ವಜನಿಕರು ಈ ಕಲಾಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸಿ, ತಮ್ಮ ಮೊಬೈಲ್ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದು ಸಂಭ್ರಮಿಸಿದರು.
ಈ ವರ್ಣರಂಜಿತ ಟ್ಯಾಬ್ಲೋ ಪ್ರದರ್ಶನವು ಟ್ರಸ್ಟ್ ಅಧ್ಯಕ್ಷರು ಹಾಗೂ ಬಂಟ್ವಾಳ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸದಾಶಿವ ಬಂಗೇರ ಅವರ ನಾಯಕತ್ವದಲ್ಲಿ ಮೂಡಿಬಂದಿದ್ದು, ಮಹೇಶ್ ಕುಲಾಲ್ ಕಡೇಶಿವಾಲಯ ಅವರು ನೃತ್ಯ ನಿರ್ದೇಶನ ಮಾಡಿದ್ದರು.
ರಂಗದ ಮೇಲೆ ಭಕ್ತಿರಸ ಉಣಿಸಿದ ಕಲಾವಿದರಾಗಿ ಜಯಗಣೇಶ್, ರಾಜೇಶ್ ಭಂಡಾರಿ ಬೆಟ್ಟು, ಭಾರತಿ ಟೀಚರ್, ಜ್ಯೋತಿ ಕುಲಾಲ್, ದಯಾನಂದ ನೇರಂಬೋಳು, ಗಣೇಶ್ ಬರ್ದೆಲ್, ಸಾನ್ವಿ ಸುಕುಮಾರ್, ಸಾಧ್ವಿ ಸುಕುಮಾರ್, ಲಾಸ್ಯ ಎಸ್. ಬಂಗೇರ, ವಿದಿತ್ರಿ, ಶ್ರಾವಣಿ ಹಾಗೂ ಅದ್ವಿತ್ ಪಲ್ಲಿಪಾಡಿ ಸಕ್ರಿಯವಾಗಿ ಅಭಿನಯಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಟ್ರಸ್ಟಿಗಳಾದ ಶೇಷಪ್ಪ ಟಿ. ಮೂಲ್ಯ, ದಯಾನಂದ ನೇರಂಬೋಳು, ದೇವಪ್ಪ ಕುಲಾಲ್ ಪಂಜಿಕಲ್ಲು, ಚಂದ್ರಹಾಸ ಪಲ್ಲಿಪ್ಪಾಡಿ, ಸೋಮಯ್ಯ ಹನೈನಡೆ ಹಾಗೂ ಕುಲಾಲ ಸಮುದಾಯದ ಪ್ರಮುಖರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಸುಕುಮಾರ್ ಬಂಟ್ವಾಳ, ನಾರಾಯಣ ಸಿ. ಪೆರ್ನೆ, ಮನೋಹರ ನೇರಂಬೋಳು, ಎಚ್.ಕೆ. ನಯನಾಡು, ನಾಗೇಶ್ ಬಾಳೆಹಿತ್ಲು, ನವಿನ್ ಮಿತ್ತಬೈಲು, ಸೌಮ್ಯ ಸುಕುಮಾರ್ ಮತ್ತು ಮೀನಾಕ್ಷಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು. ವಿಶೇಷವೆಂದರೆ, ಈ ಸ್ತಬ್ಧಚಿತ್ರದ ಪ್ರಮುಖ ಕಲಾವಿದರು, ಹಿನ್ನೆಲೆ ಧ್ವನಿ/ಸಂಗೀತ ಹಾಗೂ ತಾಂತ್ರಿಕ ವಿಭಾಗದಲ್ಲೂ ಸಂಪೂರ್ಣವಾಗಿ ಕುಲಾಲ ಸಮುದಾಯದವರೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಕಾರ್ಯಕ್ರಮದ ಕಳಸಪ್ರಾಯವಾಗಿತ್ತು.


