ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ‘ವಿ ಮಿಡಿಯಾ ಮಾಡೆಲ್ ಮ್ಯಾನೇಜ್ಮೆಂಟ್’ ಆಯೋಜನೆಯಲ್ಲಿ ಕಾಪುವಿನಲ್ಲಿ ಆಗಸ್ಟ್ ೩೦, ೨೦೨೬ ರಂದು ನಡೆದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪೆರ್ಡೂರಿನ ಪೂರ್ವಿ ಏಕನಾಥ ಕುಲಾಲ್ (೧೪) ‘ಮಿಸ್ ಟೀನ್ ಎಲೈಟ್ ಮಂಗಳೂರು 2026’ (Miss Teen Elite Mangaluru 2026) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮವು ರಕ್ಷಿತ್ ಬೆಳ್ಮಣ್ ಅವರ ಈವೆಂಟ್ ನಿರ್ದೇಶನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ವಿಜೇತರಾದ ಪೂರ್ವಿ ಏಕನಾಥ ಕುಲಾಲ್ ಅವರು ಹಿರಿಯಡ್ಕದ ‘ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್’ನ ೯ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಪೆರ್ಡೂರಿನ ಏಕನಾಥ ಕುಲಾಲ್ ಮತ್ತು ಗಾಯತ್ರಿ ಕುಲಾಲ್ ದಂಪತಿಯ ಪುತ್ರಿಯಾಗಿದ್ದಾರೆ. ಪೂರ್ವಿ ಅವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.


