ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಪತ್ರಿಕಾರಂಗದಲ್ಲಿ ನಿರಂತರವಾಗಿ ಜನಪರ ಧ್ವನಿಯಾಗಿ ಸೇವೆ ಸಲ್ಲಿಸುತಿರುವ, ಈ ಸಂಜೆ, ಪ್ರಜಾ ಪ್ರಗತಿ ದಿನ ಪತ್ರಿಕೆಯ ತಾಲೂಕು ವರದಿಗಾರರಾದ ಬಸವರಾಜ ಕುಂಬಾರ ಅವರಿಗೆ ಪ್ರತಿಷ್ಠಿತ ‘ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ನಗರದ ಎಸ್.ಎಸ್.ಬಿ.ವಿ ಸಂಘದ ಅಡಿಯಲ್ಲಿನ ಸ್ವಾಮಿ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಚಾಲೆಂಜ್ ನವೋದಯ ಕೋಚಿಂಗ್ ಕ್ಲಾಸಸ್ ವತಿಯಿಂದ ತಂಗಡಗಿ ರಸ್ತೆಯ ಶಿವಾಚಾರ್ಯ ಪಿ.ಯು ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಈ ಪುರಸ್ಕಾರ ನೀಡಲಾಗಿರುತ್ತದೆ.
ಮುದ್ದೇಬಿಹಾಳ ತಾಲೂಕಿನ ಚವನಬಾವಿ ಗ್ರಾಮದವರಾದ ಬಸವರಾಜ ಈ ಕುಂಬಾರ ಅವರು, ಗ್ರಾಮೀಣ ಭಾಗದ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಮಾಜದ ಸ್ವಾಭಿಮಾನ, ಸಾಮರಸ್ಯ ಹಾಗೂ ಪತ್ರಿಕಾ ಕ್ಷೇತ್ರದ ಮೂಲಕ ಸಮಾಜ ನಿರ್ಮಾಣಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ರಾಜ್ ಮಟ್ಟದ ಪ್ರಶಸ್ತಿ ನೀಡಲಾಗಿದೆ, ಬಸವರಾಜ್ ಅವರಿಗೆ ಈ ಗೌರವ ಲಭಿಸಿರುವುದಕ್ಕೆ ಅವರ ಸ್ವಗ್ರಾಮವಾದ ಚವನಬಾವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ವೀರೇಶ್ ಜಿ, ಹವಾಲ್ದಾರ್ ಹಾಗೂ ವಿಜಯಲಕ್ಷ್ಮಿ ವಿ, ಹವಾಲ್ದಾರ್ ಅವರು ಸಾಧಕರನ್ನು ಸನ್ಮಾನಿಸಿ, ಮುಂದಿನ ವೃತ್ತಿ ಬದುಕು ಯಶಸ್ವಿಯಾಗಲಿ ಎಂದು ಹಾರೈಸಿದರು.

