ವೈರಲ್ ಪತ್ರದ ಕುರಿತು ಬಿ.ಎಸ್ ಕುಲಾಲ್ ಸ್ಪಷ್ಟನೆ
ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ದ.ಕ ಜಿಲ್ಲಾ ಕುಲಾಲ ಮಾತೃ ಸಂಘದ ಚುನಾವಣೆ ವಿವಾದದ ಕುರಿತಂತೆ ಹಿರಿಯ ಸಮಾಜಸೇವಕ, ನಿವೃತ್ತ ತಹಶೀಲ್ದಾರ್ ಬಿ.ಎಸ್ ಕುಲಾಲ್ ಅವರು ಹೇಳಿಕೆಯೊಂದನ್ನು ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪತ್ರವನ್ನು ಕುಲಾಲ್ ವರ್ಲ್ಡ್ ಡಾಟ್ ಕಾಮ್ ಯಥಾವತ್ತಾಗಿ ಪ್ರಕಟಿಸಿತ್ತು. ಈ ಬಗ್ಗೆ ಕುಲಾಲ್ ಅವರು ಇನ್ನೊಂದು ಸ್ಪಷ್ಟನೆ ನೀಡಿದ್ದು, ವೈಯಕ್ತಿಕ ನೆಲೆಯಲ್ಲಿ ಬರೆದ ಪತ್ರ ಬಹಿರಂಗಗೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ಪೂರ್ತಿ ಪತ್ರವನ್ನು ಇಲ್ಲಿ ನೀಡಲಾಗಿದೆ.



