ಪುತ್ತೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ದ.ಕ ಜಿಲ್ಲಾ ಕುಲಾಲ ಮಾತೃ ಸಂಘದ ಚುನಾವಣೆ ವಿವಾದವು ಮತ್ತೊಂದು ಮಜಲನ್ನು ಪಡೆದುಕೊಂಡಿದ್ದು ಈ ಬಗ್ಗೆ ಕುಲಾಲ ಸಮಾಜದ ಪ್ರಮುಖರೂ, ನಿವೃತ್ತ ತಹಶೀಲ್ದಾರ್ ಶತಾಯುಷಿ ಬಿ ಎಸ್ ಕುಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯರಾದ ಚಂದಪ್ಪ ಮೂಲ್ಯ ಅವರ ನೇತೃತ್ವದಲ್ಲಿ ಸಂಧಾನ ಮಾತುಕತೆ ಪ್ರಯತ್ನ ಫಲಪ್ರದವಾಗದೇ ಇರುವ ಕುರಿತಂತೆ ಖೇದ ವ್ಯಕ್ತಪಡಿಸಿರುವ ಬಿ.ಎಸ್.ಕುಲಾಲ್ ತಾನು ಕುಲಾಲ ಸಮಾಜದಲ್ಲಿ ಹುಟ್ಟಿರುವುದು ಶಾಪದಿಂದ ಎಂದಿರುವುದಲ್ಲದೇ ಈ ಸಂಘಟನೆ ಸರಿಹೋಗುವವರೆಗೆ ಸರ್ವರಿಗೂ ಒಪ್ಪಿಗೆಯಾಗಿ ಸರಿಹೊಂದುವವರೆಗೆ ತನ್ನ ಸದಸ್ಯತನವನ್ನು ಅಮಾನತಿನಲ್ಲಿಡಬೇಕೆಂದು ವಿನಂತಿಸಿದ್ದಾರೆ.(ಪೂರ್ತಿ ಪತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ )



