ಆಂಧ್ರಪ್ರದೇಶ(ಕುಲಾಲ ವರ್ಲ್ಡ್ ಡಾಟ್ ಕಾಮ್): 16ನೇ ಶತಮಾನದಲ್ಲಿದ್ದ ಆತುಕೂರಿ ಮೊಲ್ಲ ಅಥವಾ ಮೊಲ್ಲಮಾಂಬ ಅವರು ತೆಲುಗು ಸಾಹಿತ್ಯದ ಅತ್ಯಂತ ಪ್ರಸಿದ್ಧ ಕವಯಿತ್ರಿ, ಇವರು ‘ಮೊಲ್ಲ ರಾಮಾಯಣ’ ಎಂಬ ಸರಳ ಮತ್ತು ಸುಂದರ ತೆಲುಗು ರಾಮಾಯಣವನ್ನು ರಚಿಸಿದ್ದಾರೆ. ಕುಂಬಾರ ಸಮುದಾಯದಲ್ಲಿ ಜನಿಸಿದ ಇವರು, ತಮ್ಮ ಭಕ್ತಿ ಮತ್ತು ಸರಳ ಸಾಹಿತ್ಯ ಶೈಲಿಯಿಂದ ತೆಲುಗು ಸಾಹಿತ್ಯ ಲೋಕದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇವರ ಕಾವ್ಯ ಜನಪ್ರಿಯವಾಗಿದ್ದು ಆಂಧ್ರಪ್ರದೇಶದಲ್ಲಿ ಪ್ರತಿವರ್ಷ ಮಾರ್ಚ್ 13ರಂದು ಈಕೆಯ ಜಯಂತಿ ಆಚರಿಸಲಾಗುತ್ತದೆ. ಶೈಲಮಲ್ಲಿಕಾರ್ಜುನನ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದ ಆತುಕೂರಿ ಮೊಲ್ಲ ತನ್ನ ರಾಮಾಯಣ ಮಹಾಕಾವ್ಯದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾಳೆ.


