ಪುಣೆ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಲಾಲ ಸುಧಾರಕ ಸಂಘ ಪುಣೆ ಇದರ ಕಾರ್ಯಕಾರಿ ಸಮಿತಿ ಸಭೆಯು ಜ 8 ರವಿವಾರದಂದು ಅಧ್ಯಕ್ಷರಾದ ದೊಡ್ಡಣ್ಣ ಮೂಲ್ಯ ಅಧ್ಯಕ್ಷತೆಯಲ್ಲಿ ಕಾತ್ರಜ್ ದತ್ತ ನಗರದ ರಾಜೀರ್ ಹೋಟೆಲ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ಜರಗಿತು.
ಈ ಸಂದರ್ಭ ಸಂಘದ ವಾರ್ಷಿಕೊತ್ಸವಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು, ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಆ ಬಳಿಕ ಸಂಘದ ಮುಂದಿನ 2026 -28 ನೇ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ದೊಡ್ಡಣ್ಣ ಮೂಲ್ಯ ಅಧ್ಯಕ್ಷರನ್ನಾಗಿ ಉದ್ಯಮಿ ಮಂಜುನಾಥ್ ಕುಲಾಲ್ ರವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನವೀನ್ ಬಂಟ್ವಾಳ್ ಮತ್ತು ವಿಠಲ್ ಮೂಲ್ಯ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿ ವೀಕ್ಷಿತ್ ಕುಲಾಲ್, ಕೋಶಾಧಿಕಾರಿಯಾಗಿ ಮಹೇಶ್ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ಆದರ್ಶ್ ಕುಲಾಲ್, ,ಜೊತೆ ಕೋಶಾಧಿಕಾರಿಯಾಗಿ ಪ್ರಸಾದ್ ಮೂಲ್ಯ, ಕ್ರೀಡಾ ಕಾರ್ಯಾಧ್ಯಕ್ಷರುಗಳಾಗಿ ಮನೋಜ್ ಸಾಲ್ಯಾನ್, ಅಶೋಕ್ ಕುಲಾಲ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರುಗಳಾಗಿ ಕಾರ್ತಿಕ್ ಮೂಲ್ಯ, ಶಿವಪ್ರಸಾದ್ ಕೊಡ್ಮನ್ಕರ್ , ಜನಸಂಪರ್ಕಾಧಿಕಾರಿಗಳಾಗಿ ಪ್ರಶಾಂತ್ ಕುಲಾಲ್ , ಸಂದೇಶ್ ಕುಲಾಲ್ ಪನೋಲಿಬೈಲ್, ಜೊತೆ ಜನ ಸಂಪರ್ಕಾಧಿಕಾರಿಯಾಗಿ ಸದಾಶಿವ ಮೂಲ್ಯ ರು ಆಯ್ಕೆಯಾದರು. ಸಂಘದ ಟ್ರಸ್ಟಿಗಳು ವಾಸುದೇವ ಬಂಟ್ವಾಳ್, ಮಹಾಬಲ ಆರ್ ಮೂಲ್ಯ ರಮೇಶ್ ಕೊಡ್ಮನ್ಕರ್ , ಅರುಣ್ ಕೊಡ್ಮನ್ಕರ್ ಮತ್ತು ಸಮಿತಿ ಸಲಹಾಗಾರರಾಗಿ ವಿಶ್ವನಾಥ ಉಡುಪಿ, ಸುರೇಂದ್ರ ಮೂಲ್ಯ,ರಮೇಶ್ ಎಸ್ ಕುಲಾಲ್ ದಯಾನಂದ್ ಮೂಲ್ಯ, ಸುಂದರ್ ಮೂಲ್ಯರನ್ನು ನೇಮಿಸಲಾಯಿತು .
ಹಾಗೂ ಸಮಿತಿ ಸದಸ್ಯರಾಗಿ ಅನಂದ್ ಮೂಲ್ಯ, ಹರೀಶ್ ಡಿ.ಮೂಲ್ಯ, ವಸಂತ ಸಾಲ್ಯಾನ್ ಕರಾಡಿ. ನಾರಾಯಣ ಕುಲಾಲ್, ಸದಾನಂದ ಮೂಲ್ಯ, ಚಂದ್ರಶೇಖರ್. ಬಿ.ಕುಲಾಲ್, ದೀಪಕ್ ಮೂಲ್ಯ, ಪ್ರವೀಣ್ ಮೂಲ್ಯರನ್ನು ಆಯ್ಕೆ ಮಾಡಲಾಯಿತು .
ಇದೆ ಸಂದರ್ಭದಲ್ಲಿ ಮಹಿಳಾ ವಿಭಾಗಕ್ಕೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು, ಗೌರವ ಕಾರ್ಯಾಧ್ಯಕ್ಷೆಯಾಗಿ ಸರಸ್ವತಿ ಸಿ ಕುಲಾಲ್, ಕಾರ್ಯಾಧ್ಯಕ್ಷೆಯಾಗಿ ಅನಿತಾ ಎಸ್ ಕೊಡ್ಮನ್ಕರ್ , ಉಪ ಕಾರ್ಯಾಧ್ಯಕ್ಷೆಯಾಗಿ ಕುಶಲಾ ಮೂಲ್ಯ, ಜಯಂತಿ ಮೂಲ್ಯ, ಕಾರ್ಯದರ್ಶಿಯಾಗಿ ಯಶಸ್ವಿನಿ ಎಂ ಕುಲಾಲ್ ಕೋಶಾಧಿಕಾರಿಯಾಗಿ ಸುಜಾತ ಆರ್ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ಶೋಭಾ ಕುಲಾಲ್, ಜೊತೆ ಕೋಶಾಧಿಕಾರಿಯಾಗಿ ಸಬಿತ ಕುಲಾಲ್, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿಗಳಾಗಿ ವಿದ್ಯಾಶ್ರೀ ಕುಲಾಲ್, ಸುಜಾತಾ ಎಸ್ ಮೂಲ್ಯ, ಕ್ರೀಡಾ ಸಮಿತಿ ಕಾರ್ಯದರ್ಶಿಗಳಾಗಿ ಆಶಾ ಮೂಲ್ಯ, ಜನ ಸಂಪರ್ಕಧಿಕಾರಿಗಳಾಗಿ ಸುಜಾತಾ ಉಡುಪಿ, ಜಯಲಕ್ಷ್ಮಿ ಮೂಲ್ಯ, ಸಮಿತಿ ಸಲಹೆಗಾರರಾಗಿ ಶಾರದಾ ಮೂಲ್ಯ, ಸುಶೀಲಾ ವಿ .ಮೂಲ್ಯ, ಸಮಿತಿ ಸದಸ್ಯೆರುಗಳಾಗಿ ವಸಂತಿ ಮೂಲ್ಯ, ಚೇತನಾ ಎಸ್ ಮೂಲ್ಯ, ವನಜಾ ಮೂಲ್ಯ, ನಳಿನಿ ಎಸ್ ಕುಲಾಲ್ ರವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಸಮಿತಿ ಸದಸ್ಯರಿಗೆ ನೂತನ ಅಧ್ಯಕ್ಷರಾದ ಮಂಜುನಾಥ್ ಕುಲಾಲ್ ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಸಭೆಯ ನಂತರ ಲಘು ಉಪಹಾರ ನಡೆಯಿತು .
ಚಿತ್ರ ವರದಿ : ನವೀನ್ ಬಂಟ್ವಾಳ್ ಪುಣೆ



