ಪುಣೆ(ಕುಲಾಲ ವರ್ಲ್ಡ್ ಡಾಟ್ ಕಾಮ್) : ನಮ್ಮ ಧರ್ಮ ಸಂಘಟನೆಗೆ ಬದ್ಧರಾಗಿ ನಡೆದಾಗ ಸಮಾಜದ ಸೇವೆ ಮಾಡುವ ಯೋಗ ಒದಗಿ ಬರುತ್ತದೆ. ವಾರ್ಷಿ ಕವಾಗಿ ಒಂದುಗೂಡಿ ಹಬ್ಬಾಚರಣೆ ರೀತಿಯಲ್ಲಿ ಸಮಾಜ ಭಾಂದವ ರೆಲ್ಲರು ಸೇರಿಕೊಂಡಾಗ ಬಾಂಧವ್ಯ, ಸಂಬಂಧಗಳು, ವ್ಯವಹಾರ ವಿಚಾರ ವಿನಿಮಯಗಳು ಬೆಳೆಯುತ್ತವೆ. 47 ವರ್ಷಗಳ ಹಿಂದೆ ಹಿರಿಯರು ಕಟ್ಟಿದ ಸುಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿ ಬೆಳೆಸುವ ಜವಾಬ್ದಾರಿ ಯುವ ಪೀಳಿಗೆಗೆ ಇದೆ. ಸಂಘದ ಬಲಾಭಿವೃದ್ಧಿಗೆ ಸಹ ಕಾರ ನೀಡಬೇಕು. ಮುಂದೆ ಸುವರ್ಣ ಮಹೋತ್ಸವದ ಸಂದರ್ಭ ಸ್ವಂತ ಭವನ ನಿರ್ಮಾಣದ ಯೋಜನೆ ಮತ್ತು ಸ್ವಂತ ಭವನದಲ್ಲಿ ಕಾರ್ಯಕ್ರಮ ನಡೆ ಸುವ ಭಾಗ್ಯ ಒದಗಿ ಬರಲಿ. ನಿಮ್ಮೊಂ ದಿಗೆ ನಾನು ಸದಾ ಇದ್ದೇನೆ ಎಂದು ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ್ ಮೂಲ್ಯ ತಿಳಿಸಿದರು.

ಕೇಶ್ವರ್ ರೋಡ್ನ ಡಾ| ಶ್ಯಾಮ್ ರಾವ್ ಕಲ್ಲಾಡಿ ಕನ್ನಡ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಡಿ.28 ರಂದು ನಡೆದ ಪುಣೆ ಕುಲಾಲ ಸುಧಾರಕ ಸಂಘದ 47ನೇ ವಾರ್ಷಿ ಕೋತ್ಸವ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜಕ್ಕಾಗಿ ದುಡಿಯುವವನೇ ಯೋಗ್ಯನಾಗಿ ಸಮಾಜದಲ್ಲಿ ಗುರು ತಿಸಿಕೊಳ್ಳುವನು. ಮಕ್ಕಳಲ್ಲಿರುವ ಪ್ರತಿ ಭಗಳನ್ನು ಅನಾವರಣಗೊಳಿಸಲು ಅವರನ್ನು ಹೆತ್ತವರು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಪುಣೆ ಕುಲಾಲ ಸಂಘದ ಅಧ್ಯಕ್ಷ ದೊಡ್ಡಣ್ಣ ಸಿ. ಮೂಲ್ಯ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾದ ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ್ ಆರ್. ಹೆಗ್ಡೆ ಕಾಲೇಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ ಪಿಂಪ್ರಿ ಚಿಂಕ್ವಾಡ್ ಕುಲಾಲ ಸಂಘದ ಅಧ್ಯಕ್ಷ ರವಿ ಕುಲಾಲ್, ನಟ ನಿತಿನ್ ತುಂಬೆ, ಸಂಘದ ಉಪಾಧ್ಯಕ್ಷ ನವೀನ್ ಬಂಟ್ವಾಳ್, ಮಾಜಿ ಅಧ್ಯಕ್ಷ ವಿಶ್ವನಾಥ್ ಉಡುಪಿ ಕಾರ್ಯದರ್ಶಿ ವೀಕ್ಷಿತ್ ಕುಲಾಲ್, ಕೋಶಾಧಿಕಾರಿ ಮಹೇಶ್ ಕುಲಾಲ್, ಪ್ರಮುಖರಾದ ಮನೋಜ್ ಸಾಲ್ಯಾನ್, ಸದಾಶಿದ ಮೂಲ್ಯ, ರಮೇಶ್ ಕೊಡಮನ್ಸೂರ್, ಸುರೇಂದ್ರ ಮೂಲ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಸ್ವತಿ ಸಿ. ಕುಲಾಲ್, ನಿಕಟಪೂರ್ವ ಕಾರ್ಯಾಧ್ಯಕ್ಷೆ ಶಾರದಾ ಮೂಲ್ಯ, ಉಪಾಧ್ಯಕ್ಷೆ ಜಯಂತಿ ಎಸ್. ಮೂಲ್ಯ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರು, ಅತಿಥಿ-ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ವಿದ್ಯಾ ಕುಲಾಲ್ ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಸ್ವತಿ ಕುಲಾಲ್ ಸ್ವಾಗತಿಸಿದರು. ಅತಿಥಿ. ಗಣ್ಯರನ್ನು ಶಾಲು ಹೊದೆಸಿ, ಫಲವು ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಅತಿಥಿಗಳ ಪರಿಚಯವನ್ನು ಆಠಾ ಆರ್. ಮೂಲ್ಯ, ಸರಸ್ವತಿ ಸಿ. ಕುಲಾಲ್, ವಿದ್ಯಾ ಕುಲಾಲ್, ಅನಿತಾ ಕೊಡನ್ ಕರ್ ವಾಚಿಸಿದರು. ಖ್ಯಾತ ರಂಗನಟ ನಿತಿನ್ ಕುಲಾಲ್ ತುಂಬೆ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ| ಹಿರೇನ್ ವಿಶ್ವನಾಥ್ ಅವರನ್ನು ಶಾಲು ಹೊದೆಸಿ, ಹಾರ, ಪುಷ್ಪಗುಚ್ಚ ಸ್ಮರಣಿಕೆ ನೀಡಿ ಸಮ್ಮಾನಿಸಲಾ ಯಿತು. ಸಾಧಕರ ಸಮ್ಮಾನಪತ್ರವನ್ನು ಮಹೇಶ್ ಕುಲಾಲ್, ವಿಕ್ಷಿತ್ ಕುಲಾಲ್ ವಾಚಿಸಿದರು. ವಾರ್ಷಿಕೋತ್ಸವಕ್ಕೆ ಸಹಕಾರ ನೀಡಿದ ದಾನಿಗಳನ್ನು ಸಮಾಜದ ಗಣ್ಯರನ್ನು ಪದಾಧಿಕಾರಿಗ ಳೆನ್ನು ಮತ್ತು ವಿವಿಧ ಸಂಘ- ಸಂಸ್ಥೆಗಳ ಅಧ್ಯಕ್ಷರನ್ನು ಸಮಾಜದ ಪ್ರತಿಭಾ ನಿತ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಕಾಠ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ವಿಕ್ಷಿತ್ ಕುಲಾಲ್ ಸಂಘದ ವಾರ್ಷಿಕ ವರದಿ ಸಭೆಯ ಮುಂದಿಟ್ಟರು. ಕೋಶಾಧಿಕಾರಿ ಮಹೇಶ್ ಕುಲಾಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸಮಾಜದ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ, ವಾಣಿಶ್ರೀ ಹರಿಣಿ ಕಲಾವಿದೆರ್ ಮಂಗಳೂರು ಇವರಿಂದ ತೆಲಿಕೆದ ಪುಲಿ ಮುಂಚೆ ಎಂಬ ಹಾಸ್ಯಮಯ ಕಾರ್ಯಕ್ರಮ ನಡೆಯಿತು. ಅನಿತಾ ಕೊಡಮಾನ್ಕರ್, ಕಾರ್ತಿಕ್ ಮೂಲ್ಯ ನಿರೂಪಿಸಿ ನಿಕಟಪೂರ್ವ ಕಾರ್ಯಾಧ್ಯಕ್ಷೆ ಶಾರದಾ ಕೆ. ಮೂಲ್ಯ ವಂದಿಸಿದರು.
ಸಂಘದ ಪ್ರಮುಖರಾದ ಕಾರ್ತಿಕ್ ಮೂಲ್ಯ, ಮನೋಜ್ ಸಾಲ್ಯಾನ್, ವಿಟ್ಟಲ ಎಸ್. ಮೂಲ್ಯ, ಚೇತನ್ ಮೂಲ್ಯ, ಸುಜಿತ್ ಮೂಲ್ಯ, ಸದಾಶಿವ್ ಮೂಲ್ಯ, ಶಿವಪ್ರಸಾದ್ ಕೊಡನ್ಸರ್, ಪ್ರಶಾಂತ್ ಕುಲಾಲ್, ರಾಜೇಂದ್ರ ಮೂಲ್ಯ, ಪ್ರಸಾದ್ ಮೂಲ್ಯ, ಕುಲಾಲ್, ನಾರಾಯಣ, ಆನಂದ್ ಮೂಲ್ಯ, ಹರೀಶ್ ಮೂಲ್ಯ, ನಾರಾಯಣ್ ಕುಲಾಲ್, ವಸಂತ್ ಸಾಲ್ಯಾನ್ ಕರಾಡಿ ಸದಾನಂದ ಮೂಲ್ಯ, ಚಂದ್ರಶೇಖರ್ ಕುಲಾಲ್, ವಸಂತ್ ಮೂಲ್ಯ, ಕುಟ್ಟಿ ಮೂಲ್ಯ, ದಾಮೋದರ್ ಮೂಲ್ಯ, ಸಲಹೆಗಾರರಾದ ರಮೇಶ್ ಕುಲಾಲ್, ಸುರೇಂದ್ರ ಮೂಲ್ಯ, ಸುಂದರ ಮೂಲ್ಯ, ಮಹಿಳಾ ವಿಭಾಗದ ಕಾರ್ಯದರ್ಶಿ ಅನಿತಾ ಕೊಡ್ಡನ್ನರ್, ಕೋಶಾಧಿಕಾರಿ ಭಾಗ್ಯಶ್ರೀ ಮೂಲ್ಯ, ಸಮಿತಿ ಸದಸ್ಯರಾದ ಸುಜಾತಾ ಆರ್. ಕುಲಾಲ್, ಶೋಭಾ ಪಿ. ಕುಲಾಲ್, ಯಶಸ್ವಿನಿ ಎಂ. ಕುಲಾಲ್, ವಿದ್ಯಾ ಡಿ. ಕುಲಾಲ್, ಆಸಾ ಆರ್. ಮೂಲ್ಯ, ಕುಶಲ ವಿ. ಮೂಲ್ಯ, ಸುಜತಾ ವಿ. ಉಡುಪಿ, ಸಬಿತಾ ಪಿ. ಕುಲಾಲ್, ಲತಾ ಎ. ಮೂಲ್ಯ, ಭವ್ಯಾ ಎಚ್. ಮೂಲ್ಯ, ನಳಿನಿ ಎಸ್. ಕುಲಾಲ್, ಯಶೋದಾ ಎಸ್.ಮೂಲ್ಯ, ರೂಪಾಲಿ ಎ.ಮೂಲ್ಯ ಮತ್ತು ಸದಸ್ಯರು ಕಾಠ್ಯಕ್ರಮದ ಯಶ ಸ್ಸಿಗೆ ಸಹಕರಿಸಿದರು. ಕಾಲಕ್ರಮದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು 44 ವರ್ಷಗಳಿಂದ ಪುಣೆ ಕುಲಾಲ ಸಂಘದಲ್ಲಿ ದ್ದುಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ.
ಹಿರಿಯರು ಸ್ಥಾಪಿಸಿದ ಸಂಘದ ಅಭಿವೃದ್ಧಿ ಮತ್ತು ಸಮಾಜ ಸೇವೆಯೇ ನಮ್ಮ ಕರ್ತವ್ಯ ಎಂದು ಅರಿತು ನಡೆಯುತ್ತಿದ್ದೇವೆ. ಮುಂದೆಯೂ ಸೆಂಘದ ಏಳಿಗೆಗಾಗಿ ಎಲ್ಲ ಭಾಂದವರನ್ನು ಒಗ್ಗೂಡಿಸಿಕೊಂಡು ಹೊಸ ಯೋಜನೆ ವಿಚಾರಗಳೊಂದಿಗೆ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುವ ಉದ್ದೇಶ ನಮ್ಮದು. ನಮ್ಮ ಯುವ ಭಾಂದವರು ಹೆಚ್ಚಾಗಿ ಸಂಘದ ಜತೆ ಸೇರಿಕೊ ಳ್ಳಬೇಕು. ಸಂಘಟನೆ ಬಲಗೊಳಿಸಲು ನಾವೆಲ್ಲ ಮುನ್ನಡೆಯೋಣ,
– ದೊಡ್ಡಣ್ಣ ಸಿ. ಮೂಲ್ಯ, ಅಧ್ಯಕ್ಷ, ಕುಲಾಲ ಸಂಘ ಪುಣೆ
ಕುಲಾಲ ಸಂಘದ ವಾರ್ಷಿಕೋತ್ಸವ ಸಮಾಜ ಭಾಂದವರ ಒಗ್ಗಟ್ಟಿನ ಸಂಕೇತವಾಗಿ ಮೂಡಿ ಬಂದಿದೆ. ಇದು ಮತ್ತಷ್ಟು ಸಮಾಜ ಭಾಂದವರಿಗೆ ಸಂಘದ ಜತೆ ಸೇರಿ ಕೊಳ್ಳುವಂತೆ ಪ್ರೇರಣೆ ನೀಡುತ್ತದೆ. ನಮಗಾಗಿ, ನಮ್ಮವರಿ ಗಾಗಿ ಮಾಡುವ ಇಂತಹ ಕಾಠ್ಯಕ್ರಮಗಳು ಯಶಸ್ವಿಯಾ ಗಲು ಶ್ರಮ ಪಡಬೇಕು. ಅನ್ನ ಸಮಾಜದವರ ಸಹಕಾರ ಪಡೆಯುವ ಚಾಕಚಕ್ಯತೆ ಬೇಕು. ನಿಮ್ಮ ಸಮಾಜದ ಯಾವುದೇ ಕಾಠ್ಯಕ್ರಮ ಇದ್ದರೂ ನನ್ನಿಂದಾಗುವ ಸಹಕಾರ
ನೀಡುತ್ತೇನೆ.
-ನಾರಾಯಣ ಆರ್. ಹೆಗ್ಡೆ, ಕಾರ್ಯಾಧ್ಯಕ್ಷ ಉತ್ತರ ಪ್ರಾದೇಶಿಕ ಸಮಿತಿ ಬಂಟರ ಸಂಘ ಪುಣೆ
ಕುಲಾಲ ಸಮಾಜ ಪುಣೆಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದೆ. ಸಮಾಜಕ್ಕಾಗಿ ದುಡಿಯುತ್ತಾ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಇತರ ಸಂಸ್ಥೆಗಳ ಜತೆಯಲ್ಲಿ ಅನೋನ್ಯದಿಂದ ಇರುವವರು ಕುಲಾಲ ಬಾಂಧವರು, ಕಳೆದ ವರ್ಷ ನಡೆದ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶೋತ್ಸವಕ್ಕೆ ಉತ್ತಮ ಸಹಕಾರ ನೀಡಿದ್ದೀರಿ ನನ್ನನ್ನು ಸಮಾನಿಸಿರುವುದು ನಮ್ಮ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಎಲ್ಲರಿಗೂ ಸಲ್ಲುತ್ತದೆ.
-ಸುಭಾಶ್ ಶೆಟ್ಟಿ ಅಧ್ಯಕ್ಷ ವಿಶ್ವಸ್ಥ ಮಂಡಳಿ, ಕಾಕ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ
ಪುಣೆಗೆ ಬಂದು ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಸಮ್ಮಾನ ಪಡೆಯುವ ಭಾಗ್ಯ ಸಿಕ್ಕಿದೆ. ಈ ಸಮ್ಮಾನಕ್ಕೆ ಚಿರಋಣಿ ಸ್ವಜಾತಿ ಭಾಂದವರು ಜಾಗೃತರಾಗಿ ಒಗ್ಗಟ್ಟಾಗಿ ಸಮಾಜದ ಮೇಲಿನ ಪ್ರೀತಿ ತೋರಿಸಿ ಸಂಘದ ಜತೆಯಲ್ಲಿ ಸಾಗಬೇಕು. ನಮ್ಮ ಭಾಷೆ ಕಲೆ, ಸಂಸ್ಕೃತಿ ಉಳಿಯಬೇಕು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ರಂಗಭೂಮಿ ಕಲಾವಿದನಾಗಿ ಬೆಳೆದು ಚಲನಚಿತ್ರ ನಟನಾಗುವ ಭಾಗ್ಯ ಬಂದಿದೆ. –
ನಿತಿನ್ ಕುಲಾಲ್ ತುಂಬೆ, ಚಲನಚಿತ್ರ ನಟ
ಸಂಘದ ಮೂಲಕ ನಡೆಯುವ ಸಮಾಜಮುಖಿ ಕಾರ್ಯಗಳಿಗೆ ಕುಲಾಲ ಭಾಂದವರ ಸಹಕಾರ ಸದಾ ಇರಲಿ, ಪುಣೆ ಕುಲಾಲ ಸಂಘ 47 ವರ್ಷಗಳಿಂದ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ನಮ್ಮ ಸಮಾಜದ ಮಕ್ಕಳು ಸಾಧನೆ ಮಾಡಿ ಸಮಾಜದ ಅಶಕ್ತರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಪುಣೆ ಮತ್ತು ಪಿಂಪ್ರಿಯ ನಮ್ಮ ಸಂಘಗಳು ಅನೋನ್ಯತೆಯಿಂದ ಇದ್ದು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿವೆ.
– ರವಿ ಮೂಲ್ಯ, ಅಧ್ಯಕ್ಷ ಕುಲಾಲ ಸಂಘ ಪಿಂಟ್ರಿ ಚೆಂದ್ವಾಡ್
ವರದಿ: ಹರೀಶ್ ಮೂಡಬಿದ್ರಿ ಪುಣೆ , ಚಿತ್ರ ಕೃಪೆ : ನವೀನ್ ಬಂಟ್ವಾಳ್, ಪುಣೆ






