ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕುಲಾಲ ಸಂಘ ವಾಮದಪದವು ಇದರ ವಾರ್ಷಿಕ ಮಹಾಸಭೆಯು ಪದವು ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಅನಿಲ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮ ವನ್ನು ಉದ್ಭವ ರುದ್ರನಾಥೇಶ್ವರ ಕ್ಷೇತ್ರದ ರವಿ ನಡುಬೊಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು .ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ ಮತ್ತು ಮುಖ್ಯ ಆಥಿತಿಗಳಾಗಿ ಗಿರೀಶ್ ಕುಂಭಶ್ರೀ, ಈಶ್ವರ್ ಕಣ್ವತೀರ್ಥ. ಪ್ರಿಯಾ ಸತೀಶ್, ಸೋಮಯ್ಯ ಹನೈನಡೆ. ರಾಧಕೃಷ್ಣ ಬಂಟ್ವಾಳ, ರಮೇಶ್ ಸಂಚಯಗಿರಿ, ಸುರೇಶ್ ನಾವೂರ್, ಪ್ರವೀಣ್ ಬಸ್ತಿ, ಪ್ರದೀಪ್ ಅತ್ತಾವರ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಲಯನ್ ಅನಿಲ್ ದಾಸ್ ಹಾಗೂ ದಕ ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ರನ್ನು ಸನ್ಮಾನಿಸಲಾಯಿತು.. ವಿವಿಧ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.


