ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ.) ಗುರುವಾಯನಕೆರೆ ಇದರ ನೂತನ ಅಧ್ಯಕ್ಷರಾಗಿ ನಿವೃತ್ತ ವಿಜಯ ಬ್ಯಾಂಕ್ ಪ್ರಬಂಧಕ ಸೋಮಯ್ಯ ಮೂಲ್ಯ ಹನೈನಡೆ ಆಯ್ಕೆಯಾಗಿದ್ದಾರೆ.
ಡಿ. 7ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಸೋಮಯ್ಯ ಮೂಲ್ಯ ಅವ್ರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿರಿಯ ಪ್ರಬಂಧಕರಾಗಿ ನಿವೃತ್ತಿ ಹೊಂದಿ ಅನೇಕ ಸಾಮಾಜಿಕ ವಿಷಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಹಾಗೆಯೇ ನಮ್ಮ ಸಮುದಾಯದ ಸಂಘಟನೆಯ ವಿಷಯದಲ್ಲೂ ಅದೆಷ್ಟೋ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿ ನಮ್ಮ ಸಮುದಾಯದ ಏಳಿಗೆಗಾಗಿ ನಿತ್ಯ ಕಾರ್ಯಪ್ರವೃತರಾಗಿದ್ದಾರೆ.
ಹರೀಶ್ ಕಾರಿಂಜ ಅವರು ಸುದೀರ್ಘ ವರ್ಷಗಳ ಕಾಲ ಸಂಘವನ್ನು ಮುನ್ನಡೆಸಿ ಸ್ವಜಾತಿ ಬಾಂಧವರ ಏಳಿಗೆಗಾಗಿ ಶ್ರಮಿಸುತ್ತಾ ಸ್ವಂತ ನಿವೇಶನ ಮತ್ತು ಕಟ್ಟಡಕ್ಕೆ ಅವಿರತ ಶ್ರಮ ವಹಿಸಿದ್ದರು. ಇದೀಗ ನೂತನ ಅಧ್ಯಕ್ಷರಿಗೆ ಕಾಯ್ದಿರಿಸಿದ ನಿವೇಶನದ ಕಟ್ಟಡದ ಬಹುದೊಡ್ಡ ಜವಾಬ್ದಾರಿ ಹೊಂದಿದ್ದು, ತಾಲೂಕಿನ ಸ್ವಜಾತಿ ಬಾಂಧವರು ನೂತನ ಸಮಿತಿಗೆ ಸಲಹೆ ಸಹಕಾರ ನೀಡುವಂತೆ ವಿನಂತಿಸಲಾಗಿದೆ.

ಕುಂಬಾರರ ಸೇವಾ ಸಂಘ ಗೌರವಾಧ್ಯಕ್ಷರಾಗಿ ಹರೀಶ್ ಕಾರಿಂಜ, ಉಪಾಧ್ಯಕ್ಷರಾಗಿ ಲೋಕೇಶ್ ಕುಲಾಲ್ ಮತ್ತು ಪದ್ಮಕುಮಾರ್, ಕಾರ್ಯದರ್ಶಿಯಾಗಿ ಯತೀಶ್ ಸಿರಿಮಜಲು, ಜೊತೆ ಕಾರ್ಯದರ್ಶಿಯಾಗಿ ಸಂದೇಶ್ ಕುಮಾರ್ ಕಾರಂದೂರು, ಸಂಘಟನಾ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್, ಕೋಶಾಧಿಕಾರಿಯಾಗಿ ವಸಂತಿ ಲಕ್ಷ್ಮಣ ಬಳ್ಳಮಂಜ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ, ಅವಿನಾಶ್ ನಮನ, ತಿಲಕ್ ರಾಜ್, ಜಗದೀಶ್ ಮಾಪಲಾಡಿ, ದಿನೇಶ್ ಕೊಂಡೆಮಾರು, ಪದ್ಮನಾಭ ಅಳದಂಗಡಿ, ಸಾಂತಪ್ಪ ಕಲಿಕ, ಹರಿಶ್ಚಂದ್ರ ಪಾಂಡೇಶ್ವರ, ದಿನೇಶ್ ಕಣಿಯೂರು, ತಾರನಾಥ ಹನೈನಡೆ, ದಿನೇಶ್ ಮಡಂತ್ಯಾರು, ಹರೀಶ್ ಮುಂಡೂರು, ಪ್ರಶಾಂತ್ ಪಾಂಡೇಶ್ವರ, ಮುಕೇಶ್ ಕುಲಾಲ್ ಬರಾಯ, ನಾಣ್ಯಪ್ಪ ಮೂಲ್ಯ ಮಾಯಿಲೋಡಿ, ಮೋಹನ ಕಂಜಿಂಜ, ಪ್ರವೀಣ ಬರಾಯ, ಬಿ.ಗಂಗಾಧರ ಸಾಲಿಯನ್ ಬರಾಯ, ಜಯಶೀಲ ಬರಾಯ, ಯಾಧವ ಮುಂಡೂರು, ಆಶಾ ಚಿದಾನಂದ, ಸದಾನಂದ ಕುಲಾಲ್ ಮತ್ತು ಹರೀಶ ಮುಂಡೂರು ಆಯ್ಕೆಯಾಗಿದ್ದಾರೆ.
