ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ನವಂಬರ್ ಒಂದರಂದು ಕೇರಳ ಪಿರವಿ,ಭಾಷಾದಿನವಾಗಿ ಆಚರಿಸುತ್ತಿರುವ ಕೇರಳ ಪಿರವಿ (ರಾಜ್ಯೋತ್ಸವ)ದಿನದಂದು ಕಾಸರಗೋಡು ಜಿಲ್ಲಾಧಿಕಾರಿ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ತುಳು ಕನ್ನಡ ಸಾಹಿತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್, ಜಿಲ್ಲಾಧಿಕಾರಿ ಇಂಪಶೇಖರ್ ಐ ಎಂ ಎಸ್, ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ರಮೀಜ್ ರಾಜಾ.ಕೆ.ಎ.ಎಸ್, ಶುಭಾ ಮೊದಲಾದವರು ಉಪಸ್ಥಿತರಿದ್ದರು. ಮಲಯಾಳಂ ಸಾಹಿತಿ ರವೀಂದ್ರನ್ ಪಾಡಿ ಮತ್ತು ಎಂ.ಪಿ.ದಿಲ್ನಾ ಪರಿಚಯಿಸಿದರು ಮಧುಸೂದನನ್ ಜಿಲ್ಲಾ ಮಾಹಿತಿ ಅಧಿಕಾರಿ ಸ್ವಾಗತಿಸಿ ಎಸ್.ಚಿಲಂಗಾ.ಎ.ಐ.ಒ ವಂದಾನಾರ್ಪಣೆಗೈದರು.

