ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆ ಗಳ ಒಕ್ಕೂಟ (ರಿ ) ಇದರ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾಗಿ ಲಯನ್ ಅನಿಲ್ ದಾಸ್ ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನವೀನ ಮಜಲ್ ರವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಆಯ್ಕೆಯ ಪ್ರಕ್ರಿಯೆಗಳನ್ನ ಸ್ಥಾಪಕ ಅಧ್ಯಕ್ಷರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ನಿರ್ಗಮನ ರಾಜ್ಯ ಅಧ್ಯಕ್ಷರಾದ ಗಂಗಾಧರ ಬಂಜನ್, ಹಾಗೂ ಉಳಿದ ಪದಾಧಿಕಾರಿಗಳ ಹಾಗು ಹಿರಿಯರ ಜೊತೆ ಚರ್ಚಿಸಿ ಜಂಟಿಯಾಗಿ ನಡೆಸಿಕೊಟ್ಟು, ರಾಜ್ಯ ಹಾಗು ಜಿಲ್ಲಾ ಪದಗ್ರಹಣ ಸಮಾರಂಭ ಮಾಡುವರೇ ಮಾರ್ಗದರ್ಶನ ನೀಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಲಾಯಿತು.

