ಮಂಜೇಶ್ವರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇಲ್ಲಿನ ಕುಲಾಲ ವೇದಿಕೆಯ ಆಶ್ರಯದಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸ್ವಜಾತಿ ಬಂಧುಗಳ ನಾನಾ ತಂಡಗಳನ್ನೊಳ ಗೊಂಡ ‘ಕುಲಾಲ ಟ್ರೋಫಿ-2025’ ಕ್ರಿಕೆಟ್ ಪಂದ್ಯಾವಳಿ ಇಲ್ಲಿನ ಪಂಚಾಯಿತಿ ಮೈದಾನದಲ್ಲಿ ಜರುಗಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಯನ್ನು ಕುಲಾಲ ವೇದಿಕೆ ಮಂಜೇಶ್ವರದ ಹಿರಿಯ ಮಾರ್ಗದರ್ಶಕ ಚಂದ್ರಶೇಖರ ಮೀಯಪದವು ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ವಿ. ಕುಲಾಲ್ ಉದ್ಘಾಟಿಸಿದರು. ಔಪಚಾರಿಕವಾಗಿ ಮಂಜೇಶ್ವರ ಗ್ರಾಮ ಪಂಚಾಯಿತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಚೇರ್ ಮೆನ್ ಆಗಿರುವ ಯಾದವ್ ಬಡಾಜೆ, ದಾಸ್ ಪ್ರಮೋಷನ್ಸ್ ಆ್ಯಂಡ್ ಹೋಂ ನರ್ಸಿಂಗ್ ಮಂಗಳೂರು ಇದರ ಆಡಳಿತ ನಿರ್ದೆಶಕ ಅನಿಲದಾಸ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಳು ಸಾಹಿತಿ, ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಗ್ರಾಮ ಪಂಚಾಯಿತಿ ಸದಸ್ಯ, ಲಕ್ಷ್ಮಣ್ ಕುಚ್ಚಿ ಕಾಡ್, ಕುಲಾಲ ವೇದಿಕೆಯ ಮಾರ್ಗದರ್ಶಕ ಮಂಡಳಿ ಸದಸ್ಯರಾದ ರಾಮ್ ದಾಸ್ ಕಡಂಬಾರ್, ರಾಮಚಂದ್ರ ಮಾಸ್ತರ್ ಕಮಾರ್ತೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಿವ್ಯಾಂಗ ಚೇತನ ವಿಭಾಗದ ದೇಹದಾರ್ಡ್ಯ ಪಟುವಾಗಿ ಅಪ್ರತಿಮ ಸಾಧನೆ ಮಾಡಿರುವ ಸತೀಶ್ ಕುಲಾಲ್ ಕಣ್ವತೀರ್ಥ ಹಾಗೂ ಕೇರಳ ಶಾಲಾ ಜೂನಿಯರ್ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನದೊಂದಿಗೆ ಸ್ಮರಣೀಯ ಸಾಧನೆ ಮಾಡಿರುವ ಸೃಷ್ಟಿ ಜಿ. ಎಸ್. ಮಜಲು ಕುಂಜತ್ತೂರು ಅವರನ್ನು ಅಭಿನಂದಿಸಲಾಯಿತು. ಕುಲಾಲ ವೇದಿಕೆಯ ಹಿರಿಯ ಸದಸ್ಯ, ಎಸ್ಎಟಿಎಲ್ ಪಿ ಶಾಲಾ ಮುಖ್ಯ ಶಿಕ್ಷಕ ತೇಜಸ್ ಕಿರಣ್ ವಂದಿಸಿದರು. ಶಿಕ್ಷಕ ಈಶ್ವರ್ ಕಿದೂರು ಕಾರ್ಯಕ್ರಮ ನಿರ್ವಹಿಸಿದರು.ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಒಟ್ಟು 12 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಮಧ್ಯಾಹ್ನ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಡ್ಯ, ಕುಂಜತ್ತೂರು ಬಂಗೇರ ಮೂಲ ಸ್ಥಾನದ ಅಧ್ಯಕ್ಷ ರಾಮ ಪ್ರಸಾದ್ ಮಂಗಳೂರು ಮುಖ್ಯ. ಅತಿಥಿಯಾಗಿ ಆಗಮಿಸಿದ್ದರು. ಮಂಜೇಶ್ವರ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ಕುಚ್ಚಿಕಾಡ್, ಕುಲಾಲ ವೇದಿಕೆ ಮಾರ್ಗದರ್ಶಕ ಮಂಡಳಿ ಸದಸ್ಯರಾದ ರಾಮದಾಸ್ ಕಡಂಬಾರ್, ರಾಮಚಂದ್ರ ಮಾಸ್ತರ್ ಕಮಾರ್ತೆ, ಈಶ್ವರ್ ಕಿದೂರು, ಶಿವಾನಂದ ಹೊಸಬೆಟ್ಟು, ಕುಲಾಲ ವೇದಿಕೆ ಸಂಚಾಲಕ ಕಿಶನ್ ಕಣ್ವತೀರ್ಥ ಮತ್ತಿತರರು ಉಪಸ್ಥಿತರಿದ್ದರು. ಹರ್ಷ ಕಣ್ವತೀರ್ಥ ಕಾರ್ಯಕ್ರಮ ನಿರೂಪಿಸಿದರು. ಕುಲಾಲ್ ಫ್ರೆಂಡ್ಸ್ ಕುಳಾಯಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ನಗದು ಮೊತ್ತ 15,000 ರೂ. ಮತ್ತು ಕುಲಾಲ ಟ್ರೋಫಿ -2025ನ್ನು ಗೆದ್ದುಕೊಂಡಿತು. ಕುಲಾಲ ವೇದಿಕೆ ಮಂಜೇಶ್ವರ ದ್ವಿತೀಯ, ಜೈ ಹನುಮಾನ್ ಫ್ರೆಂಡ್ಸ್ ಚಿಗುರುಪಾದೆ ತೃತೀಯ ಹಾಗೂ ಎಂಎಫ್ ಸಿ ನರಿಂಗಾನ ಚತುರ್ಥ ಸ್ಥಾನವನ್ನು ಗಳಿಸಿಕೊಂಡಿತು.

