ಮಂಗಳೂರು (ಕುಲಾಲ ವರ್ಲ್ಡ್ ಡಾಟ್ ಕಾಮ್): ಕಟೀಲು ಕೊಂಡೆಮೂಲ ಗ್ರಾಮದ ಅಜಾರು ಮನೆ ನಿವಾಸಿ ರಾಜೇಶ್ ಕುಲಾಲ್(47 ವರ್ಷ) ಎಂಬವವರು ತೀವ್ರವಾದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಅವರ ಮುಂದಿನ ವೈದ್ಯಕೀಯ ಚಿಕಿತ್ಸೆಗೆ ಕುಲಾಲ ಜವನೆರ್ ತೋಕೂರು ಸಂಸ್ಥೆಯ ಸದಸ್ಯರ ಮೂಲಕ ರೂ. 22,000/- ಅವರ ಸ್ವಗೃಹದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕುಲಾಲ ಜವನೆರ್ ತೋಕೂರು ಬಳಗದ ಸದಸ್ಯರಾದ ಉದಯ್ ಕುಮಾರ್ ತೋಕೂರು, ಸುನಿಲ್ ಕುಲಾಲ್ ತೋಕೂರು, ಲೀಲಾ ಬಂಜನ್ ತೋಕೂರು ಮತ್ತು ಹೇಮಂತ್ ಕುಮಾರ್ ಕಿನ್ನಿಗೋಳಿ ಜೊತೆಗಿದ್ದರು.

