ಮೈಸೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಸಾರ್ವಜನಿಕ ಸೇವಾ ಆಯೋಗದ (ಕೆಪಿಎಸ್ಸಿ) ಮಾಜಿ ಸದಸ್ಯರೂ, ಕುಂಬಾರ ಸಮಾಜದ ಹಿರಿಯರೂ ಆದ ಡಾ.ಬಿ.ಎಸ್.ಕೃಷ್ಣಪ್ರಸಾದ್ ( K.A.S) ಅವರು ಮೇಘಾಲಯ ರಾಜ್ಯದ ರಾಜ್ಯಪಾಲರ ವಿಶೇಷ ಸಲಹೆಗಾರರಾಗಿ ನೇಮಕರಾಗಿದ್ದಾರೆ.

ಡಾ. ಕೃಷ್ಣ ಪ್ರಸಾದ್ ೨೦೦೫ ರಲ್ಲಿ ಅತ್ಯುತ್ತಮ ನಾಗರಿಕ ಸೇವಕ ಪ್ರಶಸ್ತಿ ಪಡೆದ ಮೊದಲ ಕೆಎಎಸ್ ಅಧಿಕಾರಿಯಾಗಿದ್ದಾರೆ. ತಾಂಬೂಲ (ವೀಳ್ಯ) ನೀಡುವ ಮೂಲಕ ಕಂದಾಯ ಸಂಗ್ರಹ ಮಾಡುತ್ತಿದ್ದರಿಂದ ಅವರು “ತಾಂಬೂಲ ತಹಶೀಲ್ದಾರ್” ಎಂದು ಜನಪ್ರಿಯರಾಗಿದ್ದರು. ಕೃಷ್ಣ ಪ್ರಸಾದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ (ಯುಒಎಂ) ಮನಸ್ವಿನಿ ಯೋಜನೆ ಎಂಬ ಸಂಶೋಧನಾ ಅಧ್ಯಯನಕ್ಕಾಗಿ “ಅತ್ಯುತ್ತಮ ಸಂಶೋಧಕ ಪ್ರಶಸ್ತಿ”ಯನ್ನು ಪಡೆದಿದ್ದಾರೆ.
